ಪ್ರಕಟಣೆಗಳು

"ಹೌ ದಿ ಯೂನಿವರ್ಸ್ ವರ್ಕ್ಸ್ : ಬ್ಲ್ಯಾಕ್ ಹೋಲ್ಸ್"       Click here for more..

ಈ ತಿಂಗಳ ಚಲನಚಿತ್ರ : "ಹೌ ದಿ ಯೂನಿವರ್ಸ್ ವರ್ಕ್ಸ್ : ಬ್ಲ್ಯಾಕ್ ಹೋಲ್ಸ್"

ದಿನಾಂಕ : 21ನೇ ಅಕ್ಟೋಬರ್ 2018 ರಂದು ಸಂಜೆ 5 ಗಂಟೆಗೆ ಪ್ರವೇಶ ಉಚಿತ

'ವಿದ್ಯುಚ್ಛಕ್ತಿ'       Click here for more..

ಪ್ರತಿ ತಿಂಗಳ ಎರಡನೇ ಭಾನುವಾರದಂದು ಪ್ರೌಢಶಾಲೆ ಮತ್ತು ಪದವಿ ಪೂರ್ವ ವಿದ್ಯಾರ್ಥಿಗಳಿಗಾಗಿ ನಡೆಯುವ ವಿಜ್ಞಾನ ಕೂಟದಲ್ಲಿ 'ವಿದ್ಯುತ್ ಶಕ್ತಿ' ವಿಷಯದ ಕುರಿತು ಚರ್ಚೆ ನಡೆಸಲಾಗುತ್ತಿದೆ. 14ನೇ ಅಕ್ಟೋಬರ್ 2018 ರಂದು ಮಧ್ಯಾಹ್ನ 2 ರಿಂದ 3:30 ರವರೆಗೆ ನಡೆಯುತ್ತದೆ.

'ಖಗೋಳ ಶಾಸ್ತ್ರ' - ಕಾರ್ಯಗಾರ       Click here for more..

ಅನಿವಾರ್ಯ ಕಾರಣಗಳಿಂದಾಗಿ 'ಖಗೋಳ ಶಾಸ್ತ್ರ ಕಾರ್ಯಾಗಾರ'ವು ಅಕ್ಟೋಬರ್ 6, 2018 ರ ಬದಲಾಗಿ ಅಕ್ಟೋಬರ್ 13, 2018 ರಂದು ಆರಂಭಗೊಂಡು ನವಂಬರ್ 11, 2018 ಕ್ಕೆ ಮುಕ್ತಾಯವಾಗಲಿದೆ.

ಮಕ್ಕಳಿಗಾಗಿ ವಿಜ್ಞಾನ ಕಾರ್ಯಾಗಾರ       Click here for more..

6 ಮತ್ತು 7ನೇ ತರಗತಿಗಳಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳಿಗಾಗಿ ಮೂರು ದಿನಗಳ ವಿಶೇಷ ಕಾರ್ಯಾಗಾರವನ್ನು 10 ರಿಂದ 12 ನೇ ಅಕ್ಟೋಬರ್ 2018 ರವರೆಗೆ ಆಯೋಜಿಸಲಾಗಿದೆ. ಪ್ರವೇಶ ಶುಲ್ಕ ತಲಾ ರೂ.500/-.

ಮೇಘನಾದ್ ಸಾಹಾ        Click here for more..

ಜೈಪುರದ ರಾಜಸ್ತಾನ್ ವಿಶ್ವವಿದ್ಯಾನಿಲಯದ ಭೌತಶಾಸ್ತ್ರದ ಮಾಜಿ ಪ್ರಾಚಾರ್ಯರಾದ ಪ್ರೊ. ಎಸ್. ಲೋಕನಾಥನ್ ಮತ್ತು ತಾರಾಲಯದ ಆಹ್ವಾನಿತ ವಿಜ್ಞಾನಿ ಡಾ. ಬಿ. ಎಸ್. ಶೈಲಜಾ ಅವರಿಂದ "ಮೇಘನಾದ್ ಸಾಹಾ" ಅವರ 125ನೇ ಜನ್ಮದಿನಾಚರಣೆಯ ಪ್ರಯುಕ್ತ ವಿಶೇಷ ಉಪನ್ಯಾಸವನ್ನು ಏರ್ಪಡಿಸಲಾಗಿದೆ. ದಿನಾಂಕ: ಸಮಯ: 6ನೇ ಅಕ್ಟೋಬರ್ 2018 ಸಂಜೆ 4 ಘಂಟೆಗೆ

ಹೊಸ ಕಾರ್ಯಕ್ರಮ "ಕೇಳಿ - ತಿಳಿ"       Click here for more..

7ನೇ ಅಕ್ಟೋಬರ್ 2018 ರ ಸಂಜೆ 5:15 - 6:15 ರವರೆಗೆ ಖಗೋಳ ವಿಜ್ಞಾನಕ್ಕೆ ಸಂಬಂಧಪಟ್ಟ ಪ್ರಶ್ನೆಗಳನ್ನು ತಾರಾಲಯದ ತಜ್ಞರನ್ನು ಕೇಳಬಹುದು.

'ನಕ್ಷತ್ರ ವೀಕ್ಷಣೆ' ಕಾರ್ಯಕ್ರಮವು 7ನೇ ಅಕ್ಟೋಬರ್ 2018 ರಂದು ಸಂಜೆ 6:30ಕ್ಕೆ ನಡೆಯಲಿದೆ. ಶುಲ್ಕ ತಲಾ ರೂ.30/-

"ಬಾಹ್ಯಾಕಾಶ ವಿಜ್ಞಾನ"       Click here for more..

ಜವಾಹರ್ ಲಾಲ್ ನೆಹರು ತಾರಾಲಯವು ಅಕ್ಟೋಬರ್ 4, 2018 ರಂದು ಪ್ರೌಢಶಾಲಾ ಶಿಕ್ಷಕರಿಗಾಗಿ ಒಂದು ದಿನದ ಕಾರ್ಯಾಗಾರವನ್ನು ಆಯೋಜಿಸಿದೆ. ಇಸ್ರೋದ ಶ್ರೀ ಪಿ. ಜೆ. ಭಟ್ ಹಾಗೂ ನಿಯಾಸ್ ನ ಪ್ರೊ. ಎಮ್. ಬಿ. ರಜನಿ ಹಾಗೂ ಪ್ರೊ. ಅಸ್ಮಿತ ಮೊಹಾಂತಿ ರವರಿಂದ ಉಪನ್ಯಾಸಗಳನ್ನು ಏರ್ಪಡಿಸಲಾಗಿದೆ. ಶುಲ್ಕ ತಲಾ ರೂ.250/-. ಈ ಉಪನ್ಯಾಸಗಳ ನಂತರ ಧಾರವಾಡದ ಕೃಷಿ ವಿಶ್ವವಿದ್ಯಾಲಯದ ಸಹಾಯಕ ಪ್ರಾಚಾರ್ಯರಾದ || ರವಿಕುಮಾರ್ ಹೊಸಮನಿ ರವರಿಂದ "ಬಾಹ್ಯಾಕಾಶ ಡ್ರೊಸೋಫಿಲಾ : ಗಗನಯಾನಿಗಳ ಆರೋಗ್ಯದ ಕನ್ನಡಿ" ವಿಷಯದ ಕುರಿತು ಸಾರ್ವಜನಿಕರಿಗಾಗಿ ವಿಶೇಷ ಉಪನ್ಯಾಸವನ್ನು ಸಂಜೆ 4 ಘಂಟೆಗೆ ಆಯೋಜಿಸಲಾಗಿದೆ. ಪ್ರವೇಶ ಉಚಿತ.

'ಖಗೋಳ ಶಾಸ್ತ್ರ' - ಕಾರ್ಯಗಾರ       Click here for more..

ಜವಾಹರ್ ಲಾಲ್ ನೆಹರು ತಾರಾಲಯವು ಜನಸಾಮಾನ್ಯರಿಗಾಗಿ ಹತ್ತು ದಿನಗಳ ಖಗೋಳ ಶಾಸ್ತ್ರ ಕಾರ್ಯಾಗಾರವನ್ನು ಆಯೋಜಿಸಿದೆ. ಅಕ್ಟೋಬರ್ 6, 2018 ರಿಂದ ನವೆಂಬರ್ 4, 2018 ರವರೆಗೆ ಪ್ರತಿ ಶನಿವಾರ ಮತ್ತು ಭಾನುವಾರದಂದು ಈ ಕಾರ್ಯಾಗಾರವು ನಡೆಯಲಿದೆ. ಪ್ರಸ್ತುತ ಕಾರ್ಯಾಗಾರವು ಜನಮೆಚ್ಚುಗೆಗೆ ಪಾತ್ರವಾಗಿದ್ದ "ಪ್ರಾಯೋಗಿಕ ಖಗೋಳ ಶಾಸ್ತ್ರ" ಎಂಬ ಕಾರ್ಯಾಗಾರ ಸರಣಿಯ ಪರಿಷ್ಕೃತ ಆವೃತ್ತಿಯಾಗಿದ್ದು ಖಗೋಳ ಶಾಸ್ತ್ರದ ಮೂಲಭೂತ ಪರಿಕಲ್ಪನೆಗಳ ಸಮಗ್ರ ಚಿತ್ರಣ ಒದಗಿಸುವ ಧ್ಯೇಯ ಹೊಂದಿದೆ.

"ತಿಂಗಳ ಸಂಭ್ರಮ"       Click here for more..

ಜವಾಹರ್‍ ಲಾಲ್ ನೆಹರು ತಾರಾಲಯವು ಶಾಲಾ ಶಿಕ್ಷಕರಿಗಾಗಿ ತಿಂಗಳ ಸಂಭ್ರಮ ಎಂಬ ಹೊಸ ಕಾರ್ಯಕ್ರಮದಡಿಯಲ್ಲಿ ಈ ತಿಂಗಳ 29ರಂದು ವಿಜ್ಞಾನಿ ಎನ್ರಿಕೊ ಫರ್ಮಿರವರ ಜನ್ಮದಿನವನ್ನು ಆಚರಿಸುತ್ತಿದ್ದೇವೆ. ಬೈಜಿಕ ಭೌತವಿಜ್ಞಾನದಲ್ಲಿ ಖ್ಯಾತ ವಿಜ್ಞಾನಿಯಾದ ಎನ್ರಿಕೊ ಫರ್ಮಿರವರ ಬದುಕು ಮತ್ತು ಕೊಡುಗೆಗಳ ಬಗ್ಗೆ ಚರ್ಚಿಸುವುದು ಕಾರ್ಯಕ್ರಮದ ಉದ್ದೇಶವಾಗಿದೆ.

ತಿಂಗಳ ಚಲನಚಿತ್ರ       

ಈ ತಿಂಗಳ ಚಲನಚಿತ್ರ "ಹೌ ದಿ ಯೂನಿವರ್ಸ್ ವರ್ಕ್ಸ್: ಬಿಗ್ ಬ್ಯಾಂಗ್

ದಿನಾಂಕ: 16.09.2018 ಸಮಯ: ಸಂಜೆ 5 ಗಂಟೆಗೆ ಪ್ರವೇಶ: ಉಚಿತ

1 2 3 NEXT

ಶೀಘ್ರ ಕೊಂಡಿಗಳು

 

ವೆಬ್ಸೈಟ್ ಸಂದರ್ಶಕ ಕೌಂಟರ್

ಸೋಮವಾರ ಮತ್ತು ಎರಡನೇ ಮಂಗಳವಾರದಂದು ರಜೆ