ಪ್ರಕಟಣೆಗಳು

'ದೂರದರ್ಶಕ ತಯಾರಿಸುವ ಕಮ್ಮಟ'       Click here for more..

ಜವಾಹರ್ ಲಾಲ್ ನೆಹರು ತಾರಾಲಯವು ಶಾಲೆಗಳು, ವಿಜ್ಞಾನ ಕೇಂದ್ರಗಳು ಮತ್ತು ಸಾರ್ವಜನಿಕರಿಗಾಗಿ ನಾಲ್ಕು ದಿನಗಳ ದೂರದರ್ಶಕಗಳನ್ನು ತಯಾರಿಸುವ ಕಾರ್ಯಾಗಾರವನ್ನು 2019ರ ಜುಲೈ 30 ರಿಂದ ಆಯೋಜಿಸಿದೆ. ಈ ಕಾರ್ಯಾಗಾರದಲ್ಲಿ ಭಾಗವಹಿಸುವವರು 6 ನ್ಯೂಟೋನಿಯನ್ ದೂರದರ್ಶಕವನ್ನು ತಯಾರಿಸಿ ಕೊಂಡೊಯ್ಯಬಹುದಾಗಿದೆ. ಖಗೋಳ ಶಾಸ್ತ್ರ ಮತ್ತು ನ್ಯೂಟೋನಿಯನ್ ದೂರದರ್ಶಕಗಳ ಕುರಿತಾದ ಉಪನ್ಯಾಸಗಳು ಮತ್ತು ಚರ್ಚೆ ಈ ಕಾರ್ಯಾಗಾರದ ಭಾಗವಾಗಿರುತ್ತದೆ.

ಚಟುವಟಿಕೆಗಳಲ್ಲಿ ಚಂದ್ರ       Click here for more..

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು ಚಂದ್ರಯಾನ - 2 ಮಿಷನ್ ಅನ್ನು ಇದೇ ಜುಲೈ 15 ರಂದು ಉಡಾಯಿಸುತ್ತಿರುವ ಹಿನ್ನೆಲೆಯಲ್ಲಿ ಜವಾಹರ್ ಲಾಲ್ ನೆಹರು ತಾರಾಲಯವು ವಿಜ್ಞಾನ ಸಂವಹನಕಾರರು ಮತ್ತು ಶಿಕ್ಷಕರಿಗಾಗಿ "ಚಟುವಟಿಕೆಗಳಲ್ಲಿ ಚಂದ್ರ" ಎಂಬ ಒಂದು ದಿನದ ಕಾರ್ಯಾಗರವನ್ನು 18ನೇ ಜುಲೈ 2019 ರಂದು ಆಯೋಜಿಸಿದೆ.

14ನೇ ಜುಲೈ 2019 ರಂದು ಮ.3 ಗಂಟೆಗೆ 'ಚಂದ್ರಯಾನ - 2' ಕುರಿತು ವಿಜ್ಞಾನ ಕೂಟ       Click here for more..

ಚಂದ್ರಯಾನ - 2 ಯಾವ ದೇಶವೂ ಇದುವರೆಗೂ ತಲುಪಿರದ ಚಂದ್ರನ ದಕ್ಷಿಣ ಧ್ರುವವನ್ನು ತಲುಪುವ ಗುರಿ ಹೊಂದಿದೆ. ಇಸ್ರೋದ ಯೋಜನೆಯ ಕುರಿತು ಜನಸಾಮಾನ್ಯರಲ್ಲಿ ಅರಿವು ಮೂಡಿಸುವ ಸಲುವಾಗಿ ಈ ತಿಂಗಳ ವಿಜ್ಞಾನ ಕೂಟದಲ್ಲಿ ಇದರ ಕುರಿತು ಚರ್ಚಿಸಲಾಗುವುದು. ಪ್ರೌಢಶಾಲಾ ವಿದ್ಯಾರ್ಥಿಗಳು ಮೇಲ್ಪಟ್ಟವರು ಭಾಗವಹಿಸಬಹುದು.

'ನಕ್ಷತ್ರ ವೀಕ್ಷಣೆ ಕಾರ್ಯಕ್ರಮ' ಮತ್ತು 'ಖಗೋಳ ವಿಜ್ಞಾನ - ಕೇಳಿ:ತಿಳಿ'       Click here for more..

7ನೇ ಜುಲೈ 2019 ರ ಸಂಜೆ 6:30 ಕ್ಕೆ ಆಕಾಶ ವೀಕ್ಷಣಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಶುಲ್ಕ ತಲಾ ರೂ.30/-.

7ನೇ ಜುಲೈ 2019 ರ ಸಂಜೆ 5:15 - 6:15 ರವರೆಗೆ ಖಗೋಳ ವಿಜ್ಞಾನಕ್ಕೆ ಸಂಬಂಧಪಟ್ಟ ಪ್ರಶ್ನೆಗಳನ್ನು ತಾರಾಲಯದ ತಜ್ಞರನ್ನು ಕೇಳಬಹುದು. ಪ್ರವೇಶ ಉಚಿತ.

ಶಿಕ್ಷಕರಿಗಾಗಿ ಕಮ್ಮಟ       Click here for more..

ಪ್ರೌಢಶಾಲಾ ವಿಜ್ಞಾನ ಶಿಕ್ಷಕರಿಗಾಗಿ 'ಗುರುತ್ವ' ಎಂಬ ವಿಷಯದ ಕುರಿತು ಒಂದು ದಿನದ ಕಮ್ಮಟವನ್ನು 3ನೇ ಜುಲೈ 2019 ರಂದು ಬೆ.10:30 - ಮ.3:30 ರವರೆಗೆ ಏರ್ಪಡಿಸಲಾಗಿದೆ. ಶುಲ್ಕ ತಲಾ ರೂ.300/-.

'ಕ್ಷುದ್ರಗ್ರಹಗಳ ದಿನಾಚರಣೆ'      

ಕ್ಷುದ್ರಗ್ರಹಗಳ ದಿನಾಚರಣೆಯ ಅಂಗವಾಗಿ ಜವಾಹರ್ ಲಾಲ್ ನೆಹರು ತಾರಾಲಯವು ಕೆಳಕಂಡ ಕಾರ್ಯಕ್ರಮಗಳನ್ನು ಆಯೋಜಿಸಿದೆ:

* ಭಿತ್ತಿಚಿತ್ರ ಮತ್ತು ಉಲ್ಕಾಶಿಲೆಗಳ ಪ್ರದರ್ಶನ - ಬೆ.10:30 - ಸಂ.4:30 * ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಕ್ಷುದ್ರಗ್ರಹಗಳ ಕುರಿತು ಕಾರ್ಯಾಗಾರ ಮ.1:00 ರಿಂದ 4:00 * ಅಹಮದಾಬಾದಿನ ಫಿಸಿಕಲ್ ರಿಸರ್ಚ್ ಲೆಬೊರೇಟರಿಯ ನಿವೃತ್ತ ನಿರ್ದೇಶಕರಾದ ಡಾ. ಜಿತೇಂದ್ರ ನಾಥ್ ಗೋಸ್ವಾಮಿ ಅವರಿಂದ ಕ್ಷುದ್ರಗ್ರಹಗಳ ಬಗ್ಗೆ ಉಪನ್ಯಾಸ ಸಂ.4:00

ಪದವಿ ಪೂರ್ವ ವಿದ್ಯಾರ್ಥಿಗಳಿಗೆ ವಾರಾಂತ್ಯದ ತರಗತಿಗಳು       Click here for more..

ಪದವಿ ಪೂರ್ವ ವಿದ್ಯಾರ್ಥಿಗಳಿಗಾಗಿ "ಚಲನಶಾಸ್ತ್ರ" ವಿಷಯದ ಕುರಿತು ವಾರಾಂತ್ಯದ ತರಗತಿಗಳು 14ನೇ ಜುಲೈ 2019ರಿಂದ ಆರಂಭವಾಗಲಿವೆ. ಆಸಕ್ತಿ ಹೊಂದಿದ ವಿದ್ಯಾರ್ಥಿಗಳು ಖುದ್ದಾಗಿ ಕಛೇರಿಯಲ್ಲಿ 22ನೇ ಜೂನ್ 2019 ರಿಂದ ನೋಂದಾಯಿಸಿಕೊಳ್ಳಬಹುದಾಗಿದೆ.

How the Universe Works : Alien Moons       Click here for more..

Monthly Science Movie entitled "How the Universe Works : Alien Moons" is scheduled on 16th June 2019 at 5:30 pm. Entry is free.

ಪ್ರೌಢಶಾಲಾ ವಿದ್ಯಾರ್ಥಿಗಳ ವಾರಾಂತ್ಯದ ತರಗತಿಗಳು       Click here for more..

ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಗುರುತ್ವ ವಿಷಯದ ಕುರಿತು ವಾರಾಂತ್ಯದ ತರಗತಿಗಳು 7ನೇ ಜುಲೈ 2019ರಿಂದ ಆರಂಭವಾಗಲಿವೆ. ಆಸಕ್ತಿ ಹೊಂದಿದ ವಿದ್ಯಾರ್ಥಿಗಳು ಖುದ್ದಾಗಿ ಕಛೇರಿಯಲ್ಲಿ 15ನೇ ಜೂನ್ 2019 ರಿಂದ ನೋಂದಾಯಿಸಿಕೊಳ್ಳಬಹುದಾಗಿದೆ.

ದೈಹಿಕ ನ್ಯೂನ್ಯತೆಯುಳ್ಳ ಮಕ್ಕಳಿಗಾಗಿ ಒಂದು ದಿನದ ಕ್ರಿಯಾತ್ಮಕ ಕಮ್ಮಟ       Click here for more..

ತಾರಾಲಯವು ದೈಹಿಕ ನ್ಯೂನ್ಯತೆಯುಳ್ಳ ಮಕ್ಕಳಿಗಾಗಿ ಒಂದು ದಿನದ ಕ್ರಿಯಾತ್ಮಕ ಕಮ್ಮಟವನ್ನು 20ನೇ ಜೂನ್ 2019 ರಂದು ಬೆ.10:30 ರಿಂದ ಮ.3:30 ರವರೆಗೆ ಉಚಿತವಾಗಿ ಆಯೋಜಿಸಿದೆ. ಮೊದಲು ಬಂದವರಿಗೆ ಆದ್ಯತೆ.

PREV 1 2 3 4 5 6 7 8 9 10 NEXT

ಶೀಘ್ರ ಕೊಂಡಿಗಳು

 

ವೆಬ್ಸೈಟ್ ಸಂದರ್ಶಕ ಕೌಂಟರ್

ಸೋಮವಾರ ಮತ್ತು ಎರಡನೇ ಮಂಗಳವಾರದಂದು ರಜೆ