ಪ್ರಕಟಣೆಗಳು

'ಕಾಪಿ ವಿತ್ ಕ್ಯೂರಿಯಾಸಿಟಿ'      

16.06.2019 ರಂದು ಮಧ್ಯಾಹ್ನ 3 ಗಂಟೆಗೆ ಅಲಹಾಬಾದ್ ನ ಹರೀಶ್-ಚಂದ್ರ ರಿಸರ್ಚ್ ಇನ್ಸ್ಟಿಟ್ಯೂಟ್ ನ ಪ್ರೊಫೆಸರ್ ಆದ ಪ್ರೊ. ಅದಿತಿ ದೇ ಅವರಿಂದ "ಕ್ವಾಂಟಮ್ ಟೆಕ್ನಾಲಜೀಸ್" ವಿಷಯದ ಬಗ್ಗೆ ಉಪನ್ಯಾಸವನ್ನು ತಾರಾಲಯದಲ್ಲಿ ಏರ್ಪಡಿಸಲಾಗಿದೆ. ಪ್ರವೇಶ ಉಚಿತ.

ಹೌ ದಿ ಯೂನಿವರ್ಸ್ ವರ್ಕ್ಸ್: ಏಲಿಯನ್ ಮೂನ್ಸ್       Click here for more..

ಈ ತಿಂಗಳ ಚಲನಚಿತ್ರವು ದಿನಾಂಕ 16ನೇ ಜೂನ್ 2019 ರಂದು ಸಂಜೆ 5:30 ಗಂಟೆಗೆ ಪ್ರದರ್ಶಿತವಾಗುತ್ತಿದೆ. ಪ್ರವೇಶ ಉಚಿತ

ವಿಜ್ಞಾನ ಕೂಟ        Click here for more..

ಪ್ರತಿ ತಿಂಗಳ ಎರಡನೇ ಭಾನುವಾರದಂದು ಪ್ರೌಢಶಾಲೆ ಮತ್ತು ಪದವಿ ಪೂರ್ವ ವಿದ್ಯಾರ್ಥಿಗಳಿಗಾಗಿ ನಡೆಯುವ ವಿಜ್ಞಾನ ಕೂಟದಲ್ಲಿ 'ಮಾಲಿನ್ಯ - ಕಾರಣಗಳು, ದುಷ್ಪರಿಣಾಮಗಳು ಮತ್ತು ಪರಿಹಾರೋಪಾಯಗಳು' ವಿಷಯದ ಕುರಿತು ಚರ್ಚೆ ನಡೆಸಲಾಗುತ್ತಿದೆ. 09ನೇ ಮೇ 2019 ರಂದು ಮಧ್ಯಾಹ್ನ 3 ರಿಂದ 4:30 ರವರೆಗೆ ನಡೆಯುತ್ತದೆ. ಪ್ರವೇಶ ಉಚಿತ.

ಖಗೋಳ ವಿಜ್ಞಾನ : ಕೇಳಿ - ತಿಳಿ      

2ನೇ ಜೂನ್ 2019 ರ ಸಂಜೆ 5:15 - 6:15 ರವರೆಗೆ ಖಗೋಳ ವಿಜ್ಞಾನಕ್ಕೆ ಸಂಬಂಧಪಟ್ಟ ಪ್ರಶ್ನೆಗಳನ್ನು ತಾರಾಲಯದ ತಜ್ಞರನ್ನು ಕೇಳಬಹುದು.

ನಕ್ಷತ್ರ ವೀಕ್ಷಣೆ ಕಾರ್ಯಕ್ರಮ       Click here for more..

'ನಕ್ಷತ್ರ ವೀಕ್ಷಣೆ' ಕಾರ್ಯಕ್ರಮವು 2ನೇ ಮೇ 2019 ರಂದು ಸಂಜೆ 6:30ಕ್ಕೆ ನಡೆಯಲಿದೆ.

ಬೆಳಕು ಬಾಗುವ ಪ್ರಯೋಗಕ್ಕೆ 100 ವರ್ಷಗಳು      

ಮೇ 29, 1919 ವಿಜ್ಞಾನ ಕ್ಷೇತ್ರದಲ್ಲಿ ಒಂದು ಐತಿಹಾಸಿಕ ದಿನ. ಆ ದಿನ ಜರುಗಿದ ಸಂಪೂರ್ಣ ಸೌರ ಗ್ರಹಣದ ಖಗೋಳೀಯ ವೀಕ್ಷಣೆಗಳು ಸಾಪೇಕ್ಷತಾ ಸಿದ್ಧಾಂತದ ಪ್ರತಿಪಾದನೆಯನ್ನು ದೃಢೀಕರಿಸಿತು. ಸೂರ್ಯನಂತಹ ಹೆಚ್ಚಿನ ದ್ರವ್ಯರಾಶಿಯುಳ್ಳ ಕಾಯದ ಸಮೀಪದಲ್ಲಿ ಬೆಳಕೂ ಸಹ ಬಾಗುತ್ತದೆ ಎಂದು ಸಾಬೀತು ಮಾಡಿತು. ಸರ್ ಆರ್ಥರ್ ಎಡ್ಡಿಂಗ್ಟನ್ ನ ನೇತೃತ್ವದಲ್ಲಿ ಖಗೋಳ ಶಾಸ್ತ್ರಜ್ಞರ ತಂಡ ನಡೆಸಿದ ಮಹಾನ್ ಪ್ರಯೋಗಕ್ಕೆ 100 ವರ್ಷಗಳಾಗಿರುವುದರ ಸಂಭ್ರಮವನ್ನು ನಾವು ಆಚರಿಸುತ್ತಿದ್ದೇವೆ. ತಾರಾಲಯವು ಜನ ಸಾಮಾನ್ಯರಿಗಾಗಿ ಮೇ 29, 2019 ರ ಬೆಳಗ್ಗೆ 10:30 ಕ್ಕೆ ಇಂಟರ್ ನ್ಯಾಷನಲ್ ಸೆಂಟರ್ ಫಾರ್ ಥಿಯರೆಟಿಕಲ್ ಸೈನ್ಸಸ್ ನ ಪ್ರೊ|| ಪಿ. ಅಜಿತ್ ರವರಿಂದ ವಿಶೇಷ ಉಪನ್ಯಾಸವನ್ನು ಆಯೋಜಿಸಿದೆ. ಎಲ್ಲರಿಗೂ ಸ್ವಾಗತ.

ದೈಹಿಕ ನ್ಯೂನ್ಯತೆಯುಳ್ಳ ಶಾಲಾ ಮಕ್ಕಳಿಗಾಗಿ ಉಚಿತ ಪ್ರದರ್ಶನ       Click here for more..

ತಾರಾಲಯವು ದೈಹಿಕ ನ್ಯೂನ್ಯತೆಯುಳ್ಳ ಶಾಲಾ ಮಕ್ಕಳಿಗಾಗಿ 5ನೇ ಜುಲೈ 2019 ರವರೆಗೆ ಉಚಿತ ಪ್ರದರ್ಶನವನ್ನು ಏರ್ಪಡಿಸಿದೆ. ಪೂರ್ವಾನುಮತಿ ಅವಶ್ಯಕ.

ಫ್ರಮ್ ವೆಬ್ ಆಫ್ ಲೈಫ್ ಟು ಯೂನಿವರ್ಸ್      

ಪಿ.ಯು.ಸಿ ಮತ್ತು ಬಿ.ಎಸ್ಸಿ. ವಿದ್ಯಾರ್ಥಿಗಳಿಗಾಗಿ ಬೇಸಿಗೆ ಶಿಬಿರವನ್ನು ಮೇ 21 ರಿಂದ ಜೂನ್ 1, 2019 ರವರೆಗೆ ಏರ್ಪಡಿಸಿದೆ. ಈ ಕಾರ್ಯಕ್ರಮವು ಬೆಂಗಳೂರಿನ ಪ್ರತಿಷ್ಠಿತ ಸಂಶೋಧನಾ ಕೇಂದ್ರಗಳ ವಿಜ್ಞಾನಿಗಳು ನಡೆಸಿಕೊಡುವ ಅಂತರಕ್ರಿಯಾತ್ಮಕ ಚರ್ಚೆಗಳನ್ನು ಒಳಗೊಂಡಿದ್ದು ವಿಜ್ಞಾನ ಸಂಶೋಧನೆಯಲ್ಲಿ ಆಸಕ್ತಿಯುಳ್ಳ ವಿದ್ಯಾರ್ಥಿಗಳಿಗೆ ಅನುಕೂಲಕರವಾಗಿರುತ್ತದೆ. ಶುಲ್ಕ ತಲಾ ರೂ.500/-.

ಹೌ ದಿ ಯೂನಿವರ್ಸ್ ವರ್ಕ್ಸ್: ಏಲಿಯನ್ ಸೋಲಾರ್ ಸಿಸ್ಟಮ್ಸ್       Click here for more..

ಈ ತಿಂಗಳ ಚಲನಚಿತ್ರವು ದಿನಾಂಕ 19ನೇ ಮೇ 2019 ರಂದು ಸಂಜೆ 5:30 ಗಂಟೆಗೆ ಪ್ರದರ್ಶಿತವಾಗುತ್ತಿದೆ. ಪ್ರವೇಶ ಉಚಿತ

ಅಸ್ಟ್ರೋ ಕಂಪ್ಯೂಟಿಂಗ್ (3ನೇ ತಂಡ)      

ಎಂಟರಿಂದ ಹತ್ತನೇ ತರಗತಿಯ ವಿದ್ಯಾರ್ಥಿಗಳಿಗಾಗಿ 2019 ರ ಮೇ 8 ರಿಂದ 12 ರವರೆಗೆ ಐದು ದಿನಗಳ ಕಮ್ಮಟವನ್ನು ಆಯೋಜಿಸಲಾಗಿದೆ. ಶುಲ್ಕ ತಲಾ ರೂ.500/-.

PREV 1 2 3 4 5 6 7 8 9 10 NEXT

ಶೀಘ್ರ ಕೊಂಡಿಗಳು

 

ವೆಬ್ಸೈಟ್ ಸಂದರ್ಶಕ ಕೌಂಟರ್

ಸೋಮವಾರ ಮತ್ತು ಎರಡನೇ ಮಂಗಳವಾರದಂದು ರಜೆ