ಪ್ರಕಟಣೆಗಳು

ಶೂನ್ಯ ನೆರಳಿನ ದಿನ      

'ಶೂನ್ಯ ನೆರಳಿನ ದಿನ'ವನ್ನು ಪ್ರಾತ್ಯಕ್ಷಿಕೆಗಳ ಮೂಲಕ ನಿರೂಪಿಸಲು 24ನೇ ಏಪ್ರಿಲ್ 2019 ರಂದು ಮಧ್ಯಾಹ್ನ 12:17 ಕ್ಕೆ ತಾರಾಲಯದಲ್ಲಿ ಸಿದ್ಧತೆ ನಡೆಸಿದೆ. ಪ್ರವೇಶ ಉಚಿತ.

'ದೂರದರ್ಶಕ ತಯಾರಿಸುವ ಕಮ್ಮಟ'       Click here for more..

ವಾಹರ್ ಲಾಲ್ ನೆಹರು ತಾರಾಲಯವು ಶಾಲೆಗಳು, ವಿಜ್ಞಾನ ಕೇಂದ್ರಗಳು ಮತ್ತು ಸಾರ್ವಜನಿಕರಿಗಾಗಿ ನಾಲ್ಕು ದಿನಗಳ ದೂರದರ್ಶಕಗಳನ್ನು ತಯಾರಿಸುವ ಕಾರ್ಯಾಗಾರವನ್ನು 2019ರ ಮೇ 8ರಿಂದ 11ರವರೆಗೆ ಆಯೋಜಿಸಿದೆ. ಈ ಕಾರ್ಯಾಗಾರದಲ್ಲಿ ಭಾಗವಹಿಸುವವರು 6" ನ್ಯೂಟೋನಿಯನ್ ದೂರದರ್ಶಕವನ್ನು ತಯಾರಿಸಿ ಕೊಂಡೊಯ್ಯಬಹುದಾಗಿದೆ. ಖಗೋಳ ಶಾಸ್ತ್ರ ಮತ್ತು ನ್ಯೂಟೋನಿಯನ್ ದೂರದರ್ಶಕಗಳ ಕುರಿತಾದ ಉಪನ್ಯಾಸಗಳು ಮತ್ತು ಚರ್ಚೆ ಈ ಕಾರ್ಯಾಗಾರದ ಭಾಗವಾಗಿರುತ್ತದೆ. ಶುಲ್ಕ ರೂ.23,000/- ಹಾಗೂ ನೋಂದಣಿ ಶುಲ್ಕ ತಲಾ ರೂ.1000/-.

"ಹೌ ದಿ ಯೂನಿವರ್ಸ್ ವರ್ಕ್ಸ್: ಸೂಪರ್ ನೋವಾಸ್"      

ಈ ತಿಂಗಳ ಚಲನಚಿತ್ರವು ದಿನಾಂಕ 21ನೇ ಏಪ್ರಿಲ್ 2019 ರಂದು ಸಂಜೆ 5:30 ಗಂಟೆಗೆ ಪ್ರದರ್ಶಿತವಾಗುತ್ತಿದೆ. ಪ್ರವೇಶ ಉಚಿತ

'ಕಾಪಿ ವಿತ್ ಕ್ಯೂರಿಯಾಸಿಟಿ'      

14.04.2019 ರಂದು ಸಂಜೆ 4 ಗಂಟೆಗೆ ಬೆಂಗಳೂರಿನ ಜೆ.ಎನ್.ಸಿ.ಎ.ಎಸ್.ಆರ್. ಸಂಸ್ಥೆಯ ಪ್ರೊ. ಉಮೇಶ್ ವಾಗ್ಮಾರೆ ಅವರಿಂದ "ಸಿಮ್ಮಿಟ್ರಿ ಅಂಡ್ ದಿ ಲಾಸ್ ಆಫ್ ನೇಚರ್" ವಿಷಯದ ಬಗ್ಗೆ ಉಪನ್ಯಾಸವನ್ನು ತಾರಾಲಯದಲ್ಲಿ ಏರ್ಪಡಿಸಲಾಗಿದೆ. ಪ್ರವೇಶ ಉಚಿತ.

ವಿಜ್ಞಾನ ಕೂಟ      

ಪ್ರತಿ ತಿಂಗಳ ಎರಡನೇ ಭಾನುವಾರದಂದು ಪ್ರೌಢಶಾಲೆ ಮತ್ತು ಪದವಿ ಪೂರ್ವ ವಿದ್ಯಾರ್ಥಿಗಳಿಗಾಗಿ ನಡೆಯುವ ವಿಜ್ಞಾನ ಕೂಟದಲ್ಲಿ 'ಪ್ರಯೋಗಗಳ ಮಹತ್ವ' ವಿಷಯದ ಕುರಿತು ಚರ್ಚೆ ನಡೆಸಲಾಗುತ್ತಿದೆ. 14ನೇ ಏಪ್ರಿಲ್ 2019 ರಂದು ಮಧ್ಯಾಹ್ನ 3 ರಿಂದ 4:30 ರವರೆಗೆ ನಡೆಯುತ್ತದೆ. ಪ್ರವೇಶ ಉಚಿತ.

ನಕ್ಷತ್ರ ವೀಕ್ಷಣೆ ಕಾರ್ಯಕ್ರಮ      

13ನೇ ಏಪ್ರಿಲ್ 2019 ರಂದು ಮುಂಜಾನೆ 4:30 ರಿಂದ ಸೂರ್ಯೋದಯದವರೆಗೆ ಆಕಾಶ ವೀಕ್ಷಣಾ ಕಾಯ್ರಕಮವನ್ನು ಸಾರ್ವಜನಿಕರಿಗಾಗಿ ಆಯೋಜಿಸಲಾಗಿದೆ. ಶುಭ್ರ ಆಕಾಶ ದೊರಕಿದಲ್ಲಿ ಶನಿ, ಗುರು ಮುಂತಾದ ಆಕಾಶ ಕಾಯಗಳು ಕಾಣುವ ಸಂಭವವಿದೆ. ಪ್ರವೇಶ ಉಚಿತ.

ಖಗೋಳ ವಿಜ್ಞಾನ : ಕೇಳಿ - ತಿಳಿ      

7ನೇ ಏಪ್ರಿಲ್ 2019 ರ ಸಂಜೆ 5:15 - 6:15 ರವರೆಗೆ ಖಗೋಳ ವಿಜ್ಞಾನಕ್ಕೆ ಸಂಬಂಧಪಟ್ಟ ಪ್ರಶ್ನೆಗಳನ್ನು ತಾರಾಲಯದ ತಜ್ಞರನ್ನು ಕೇಳಬಹುದು.

ನಕ್ಷತ್ರ ವೀಕ್ಷಣೆ ಕಾರ್ಯಕ್ರಮ      

'ನಕ್ಷತ್ರ ವೀಕ್ಷಣೆ' ಕಾರ್ಯಕ್ರಮವು 7ನೇ ಏಪ್ರಿಲ್ 2019 ರಂದು ಸಂಜೆ 6:30ಕ್ಕೆ ನಡೆಯಲಿದೆ.

ಬೇಸಿಗೆ ಶಿಬಿರಗಳು       Click here for more..

2019ರ ಬೇಸಿಗೆ ಶಿಬಿರಗಳು 2ನೇ ಏಪ್ರಿಲ್ 2019ರಿಂದ ಪ್ರಾರಂಭವಾಗಲಿವೆ. ಶಿಬಿರಗಳ ನೋಂದಣಿ ಪ್ರಕ್ರಿಯೆಯು ದಿನಾಂಕ 27.03.2019ರಿಂದ ಆರಂಭವಾಗಲಿದೆ. ಮೊದಲು ಬಂದವರಿಗೆ ಆದ್ಯತೆ.

ನೋಂದಾವಣಿಯ ಸೂಚನೆಗಳು: - ಒಬ್ಬರು ಒಮ್ಮೆಗೆ ಕೇವಲ ಎರಡು ಅರ್ಜಿಗಳನ್ನು ಮಾತ್ರ ನೋಂದಾಯಿಸಬಹುದಾಗಿದೆ. ಎಲ್ಲರಿಗೂ ಅವಕಾಶವನ್ನು ಕಲ್ಪಿಸುವ ಸಲುವಾಗಿ ಒಬ್ಬರಿಗೆ ಎಡರು ಅರ್ಜಿಗಳನ್ನು ಮಾತ್ರ ವಿತರಿಸಲಾಗುವುದು. ದಯವಿಟ್ಟು ಸಹಕರಿಸಿ. - ಕೇವಲ ನಗದು ಮೂಲಕ ಪಾವತಿಸಬಹುದಾಗಿದೆ - ಖುದ್ದಾಗಿ ಕಛೇರಿಯಲ್ಲಿ ಮಾತ್ರ ನೋಂದಾಯಿಸಬಹುದಾಗಿದೆ - ನೋಂದಾವಣಿಗಾಗಿ 3 ಕೌಂಟರ್ ಗಳಿರುತ್ತವೆ: ಕೌಂಟರ್ 1 - ಟೈನೀ ಟಾಟ್ಸ್, ಕಾರ್ಯಕ್ರಮದ ನೋಂದಾವಣಿಗಾಗಿ (3, 4 ಮತ್ತು 5ನೇ ತರಗತಿಯ ವಿದ್ಯಾರ್ಥಿಗಳು) ಕೌಂಟರ್ 2 - ಫನ್ ವಿತ್ ಸೈನ್ಸ್/ಡೇ ಟೈಮ್ ಅಸ್ಟ್ರಾನಮಿ/ಅಸ್ಟ್ರೋ-ಕಂಪ್ಯೂಟಿಂಗ್ ಕಾರ್ಯಕ್ರಮದ ನೋಂದಾವಣಿಗಾಗಿ (6 ರಿಂದ 10ನೇ ತರಗತಿಯ ವಿದ್ಯಾರ್ಥಿಗಳು) ಕೌಂಟರ್ 3 - ಉಳಿದೆಲ್ಲಾ ಕಾರ್ಯಕ್ರಮದ ನೋಂದಾವಣಿಗಾಗಿ (8ನೇ ತರಗತಿ ಮತ್ತು ಮೇಲ್ಪಟ್ಟ ವಿದ್ಯಾರ್ಥಿಗಳು)

ಆಕಾಶ ವೀಕ್ಷಣಾ ಕಾರ್ಯಕ್ರಮ      

16ನೇ ಮಾರ್ಚ್ 2019 ರಂದು ಮುಂಜಾನೆ 4:30 ರಿಂದ ಸೂರ್ಯೋದಯದವರೆಗೆ ಆಕಾಶ ವೀಕ್ಷಣಾ ಕಾಯ್ರಕಮವನ್ನು ಸಾರ್ವಜನಿಕರಿಗಾಗಿ ಆಯೋಜಿಸಲಾಗಿದೆ. ಶುಭ್ರ ಆಕಾಶ ದೊರಕಿದಲ್ಲಿ ಶನಿ, ಗುರು ಮುಂತಾದ ಆಕಾಶ ಕಾಯಗಳು ಕಾಣುವ ಸಂಭವವಿದೆ. ಪ್ರವೇಶ ಉಚಿತ.

PREV 1 2 3 4 5 6 7 8 9 10 NEXT

ಶೀಘ್ರ ಕೊಂಡಿಗಳು

 

ವೆಬ್ಸೈಟ್ ಸಂದರ್ಶಕ ಕೌಂಟರ್

ಸೋಮವಾರ ಮತ್ತು ಎರಡನೇ ಮಂಗಳವಾರದಂದು ರಜೆ