ಪ್ರಕಟಣೆಗಳು

'ಖಗೋಳ ಶಾಸ್ತ್ರ' - ಕಾರ್ಯಗಾರ       Click here for more..

ಜವಾಹರ್ ಲಾಲ್ ನೆಹರು ತಾರಾಲಯವು ದಿನಾಂಕ 16ನೇ ನವಂಬರ್ 2018 ರಂದು 6 ಮತ್ತು 7ನೇ ತರಗತಿಯ ಶಿಕ್ಷಕರಿಗಾಗಿ ಖಗೋಳ ಶಾಸ್ತ್ರದ ಕುರಿತಾಗಿ ಒಂದು ದಿನದ ಕಮ್ಮಟವನ್ನು ಆಯೋಜಿಸಿದೆ. ಖಗೋಳ ಶಾಸ್ತ್ರದ ವಿಷಯಗಳ ಬೋಧನೆಗೆ ಪೂರಕವಾಗುವಂತಹ ವಿಚಾರಗಳ ಬಗ್ಗೆ ಚಟುವಟಿಕೆಗಳ ಮೂಲಕ ಚರ್ಚಿಸುವುದು ಈ ಕಾರ್ಯಾಗಾರದ ಧ್ಯೇಯವಾಗಿದೆ. ಶುಲ್ಕ ತಲಾ ರೂ.250/-.

ಪುಟಾಣಿಗಳಿಗಾಗಿ ಕಮ್ಮಟ       Click here for more..

ಮಕ್ಕಳ ದಿನಾಚರಣೆಯ ಅಂಗವಾಗಿ ಶಾಲಾ ಪುಟಾಣಿಗಳಿಗಾಗಿ ಒಂದು ವಿಶೇಷ ಕಮ್ಮಟವನ್ನು 18ನೇ ನವಂಬರ್ 2018 ರಂದು ಬೆಳಿಗ್ಗೆ 10:30 ರಿಂದ 12:30 ರವರೆಗೆ ಏರ್ಪಡಿಸಲಾಗಿದೆ. ಚಟುವಟಿಕೆಗಳ ಮೂಲಕ ವಿಜ್ಞಾನದ ಸಂಗತಿಗಳನ್ನು ಚರ್ಚಿಸುವುದೇ ಈ ಕಮ್ಮಟದ ಮೂಲ ಉದ್ದೇಶ.

ನಕ್ಷತ್ರ ವೀಕ್ಷಣೆ ಕಾರ್ಯಕ್ರಮ       Click here for more..

'ನಕ್ಷತ್ರ ವೀಕ್ಷಣೆ' ಕಾರ್ಯಕ್ರಮವು 4ನೇ ನವಂಬರ್ 2018 ರಂದು ಸಂಜೆ 6:30ಕ್ಕೆ ನಡೆಯಲಿದೆ.

ಹೊಸ ಕಾರ್ಯಕ್ರಮ "ಕೇಳಿ - ತಿಳಿ" 4ನೇ ನವಂಬರ್ 2018 ರ ಸಂಜೆ 5:15 - 6:15 ರವರೆಗೆ ಖಗೋಳ ವಿಜ್ಞಾನಕ್ಕೆ ಸಂಬಂಧಪಟ್ಟ ಪ್ರಶ್ನೆಗಳನ್ನು ತಾರಾಲಯದ ತಜ್ಞರನ್ನು ಕೇಳಬಹುದು.

'ದೂರದರ್ಶಕ ತಯಾರಿಸುವ ಕಮ್ಮಟ'       Click here for more..

ಜವಾಹರ್ ಲಾಲ್ ನೆಹರು ತಾರಾಲಯವು ಶಾಲೆಗಳು, ವಿಜ್ಞಾನ ಕೇಂದ್ರಗಳು ಮತ್ತು ಸಾರ್ವಜನಿಕರಿಗಾಗಿ ಮೂರೂವರೆ ದಿನಗಳ ದೂರದರ್ಶಕಗಳನ್ನು ತಯಾರಿಸುವ ಕಾರ್ಯಾಗಾರವನ್ನು 2018ರ ನವಂಬರ್ 14ರಿಂದ 17ರವರೆಗೆ ಆಯೋಜಿಸಿದೆ. ಈ ಕಾರ್ಯಾಗಾರದಲ್ಲಿ ಭಾಗವಹಿಸುವವರು 150 ಮಿ.ಮಿ., f8 ನ್ಯೂಟೋನಿಯನ್ ದೂರದರ್ಶಕವನ್ನು ತಯಾರಿಸಿ ಕೊಂಡೊಯ್ಯಬಹುದಾಗಿದೆ. ಖಗೋಳ ಶಾಸ್ತ್ರ ಮತ್ತು ನ್ಯೂಟೋನಿಯನ್ ದೂರದರ್ಶಕಗಳ ಕುರಿತಾದ ಉಪನ್ಯಾಸಗಳು ಮತ್ತು ಚರ್ಚೆ ಈ ಕಾರ್ಯಾಗಾರದ ಭಾಗವಾಗಿರುತ್ತದೆ. ಶುಲ್ಕ ರೂ.20000/- ಹಾಗೂ ನೋಂದಣಿ ಶುಲ್ಕ ತಲಾ ರೂ.1500/-.

ತಿಂಗಳ ಸಂಭ್ರಮ 30.10.2018       Click here for more..

ಜವಾಹರ್ ಲಾಲ್ ನೆಹರು ತಾರಾಲಯವು ಶಾಲಾ ಶಿಕ್ಷಕರಿಗಾಗಿ "ತಿಂಗಳ ಸಂಭ್ರಮ" ಎಂಬ ಹೊಸ ಕಾರ್ಯಕ್ರಮದಡಿಯಲ್ಲಿ ಈ ತಿಂಗಳ ಅಕ್ಟೋಬರ್ 30ರಂದು ವಿಜ್ಞಾನಿ ಹೋಮಿ ಜಹಂಗೀರ್ ಬಾಬಾ ರವರ ಜನ್ಮದಿನವನ್ನು ಆಚರಿಸುತ್ತಿದ್ದೇವೆ. ಶಿಕ್ಷಕರಿಗಾಗಿ ಏರ್ಪಡಿಸಿರುವ ಈ ಕಾರ್ಯಕ್ರಮದಲ್ಲಿ ಭಾರತದ ಹೆಸರಾಂತ ವಿಜ್ಞಾನಿಯಾದ ಹೋಮಿ ಜಹಂಗೀರ್ ಬಾಬಾ ಅವರ ಬದುಕು ಮತ್ತು ಸಾಧನೆಗಳ ಬಗ್ಗೆ ಚರ್ಚಿಸುವುದು ಇದರ ಮೂಲ ಉದ್ದೇಶವಾಗಿದೆ.

ವಿಜ್ಞಾನ ಪ್ರದರ್ಶನ        Click here for more..

ನವಂಬರ್ 23 - 25, 2018ರಂದು ನಡೆಯಲಿರುವ 'ವಿಜ್ಞಾನ ಪ್ರದರ್ಶನ' ಕ್ಕೆ ಶಾಲೆಗಳಿಂದ ವಿಜ್ಞಾನ ಮಾದರಿಗಳನ್ನು ಪ್ರದರ್ಶಿಸಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಕೊನೆಯ ದಿನಾಂಕ : 3ನೇ ನವಂಬರ್ 2018 ಆಯ್ಕೆಯಾದ ಶಾಲೆಗಳನ್ನು ತಿಳಿಸುವ ದಿನಾಂಕ : 7ನೇ ನವಂಬರ್ 2018

"ಹೌ ದಿ ಯೂನಿವರ್ಸ್ ವರ್ಕ್ಸ್ : ಬ್ಲ್ಯಾಕ್ ಹೋಲ್ಸ್"       Click here for more..

ಈ ತಿಂಗಳ ಚಲನಚಿತ್ರ : "ಹೌ ದಿ ಯೂನಿವರ್ಸ್ ವರ್ಕ್ಸ್ : ಬ್ಲ್ಯಾಕ್ ಹೋಲ್ಸ್"

ದಿನಾಂಕ : 21ನೇ ಅಕ್ಟೋಬರ್ 2018 ರಂದು ಸಂಜೆ 5 ಗಂಟೆಗೆ ಪ್ರವೇಶ ಉಚಿತ

'ವಿದ್ಯುಚ್ಛಕ್ತಿ'       Click here for more..

ಪ್ರತಿ ತಿಂಗಳ ಎರಡನೇ ಭಾನುವಾರದಂದು ಪ್ರೌಢಶಾಲೆ ಮತ್ತು ಪದವಿ ಪೂರ್ವ ವಿದ್ಯಾರ್ಥಿಗಳಿಗಾಗಿ ನಡೆಯುವ ವಿಜ್ಞಾನ ಕೂಟದಲ್ಲಿ 'ವಿದ್ಯುತ್ ಶಕ್ತಿ' ವಿಷಯದ ಕುರಿತು ಚರ್ಚೆ ನಡೆಸಲಾಗುತ್ತಿದೆ. 14ನೇ ಅಕ್ಟೋಬರ್ 2018 ರಂದು ಮಧ್ಯಾಹ್ನ 2 ರಿಂದ 3:30 ರವರೆಗೆ ನಡೆಯುತ್ತದೆ.

'ಖಗೋಳ ಶಾಸ್ತ್ರ' - ಕಾರ್ಯಗಾರ       Click here for more..

ಅನಿವಾರ್ಯ ಕಾರಣಗಳಿಂದಾಗಿ 'ಖಗೋಳ ಶಾಸ್ತ್ರ ಕಾರ್ಯಾಗಾರ'ವು ಅಕ್ಟೋಬರ್ 6, 2018 ರ ಬದಲಾಗಿ ಅಕ್ಟೋಬರ್ 13, 2018 ರಂದು ಆರಂಭಗೊಂಡು ನವಂಬರ್ 11, 2018 ಕ್ಕೆ ಮುಕ್ತಾಯವಾಗಲಿದೆ.

ಮಕ್ಕಳಿಗಾಗಿ ವಿಜ್ಞಾನ ಕಾರ್ಯಾಗಾರ       Click here for more..

6 ಮತ್ತು 7ನೇ ತರಗತಿಗಳಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳಿಗಾಗಿ ಮೂರು ದಿನಗಳ ವಿಶೇಷ ಕಾರ್ಯಾಗಾರವನ್ನು 10 ರಿಂದ 12 ನೇ ಅಕ್ಟೋಬರ್ 2018 ರವರೆಗೆ ಆಯೋಜಿಸಲಾಗಿದೆ. ಪ್ರವೇಶ ಶುಲ್ಕ ತಲಾ ರೂ.500/-.

PREV 1 2 3 4 5 6 7 8 NEXT

ಶೀಘ್ರ ಕೊಂಡಿಗಳು

 

ವೆಬ್ಸೈಟ್ ಸಂದರ್ಶಕ ಕೌಂಟರ್

ಸೋಮವಾರ ಮತ್ತು ಎರಡನೇ ಮಂಗಳವಾರದಂದು ರಜೆ