ಪ್ರಕಟಣೆಗಳು

ಮೇಘನಾದ್ ಸಾಹಾ        Click here for more..

ಜೈಪುರದ ರಾಜಸ್ತಾನ್ ವಿಶ್ವವಿದ್ಯಾನಿಲಯದ ಭೌತಶಾಸ್ತ್ರದ ಮಾಜಿ ಪ್ರಾಚಾರ್ಯರಾದ ಪ್ರೊ. ಎಸ್. ಲೋಕನಾಥನ್ ಮತ್ತು ತಾರಾಲಯದ ಆಹ್ವಾನಿತ ವಿಜ್ಞಾನಿ ಡಾ. ಬಿ. ಎಸ್. ಶೈಲಜಾ ಅವರಿಂದ "ಮೇಘನಾದ್ ಸಾಹಾ" ಅವರ 125ನೇ ಜನ್ಮದಿನಾಚರಣೆಯ ಪ್ರಯುಕ್ತ ವಿಶೇಷ ಉಪನ್ಯಾಸವನ್ನು ಏರ್ಪಡಿಸಲಾಗಿದೆ. ದಿನಾಂಕ: ಸಮಯ: 6ನೇ ಅಕ್ಟೋಬರ್ 2018 ಸಂಜೆ 4 ಘಂಟೆಗೆ

ಹೊಸ ಕಾರ್ಯಕ್ರಮ "ಕೇಳಿ - ತಿಳಿ"       Click here for more..

7ನೇ ಅಕ್ಟೋಬರ್ 2018 ರ ಸಂಜೆ 5:15 - 6:15 ರವರೆಗೆ ಖಗೋಳ ವಿಜ್ಞಾನಕ್ಕೆ ಸಂಬಂಧಪಟ್ಟ ಪ್ರಶ್ನೆಗಳನ್ನು ತಾರಾಲಯದ ತಜ್ಞರನ್ನು ಕೇಳಬಹುದು.

'ನಕ್ಷತ್ರ ವೀಕ್ಷಣೆ' ಕಾರ್ಯಕ್ರಮವು 7ನೇ ಅಕ್ಟೋಬರ್ 2018 ರಂದು ಸಂಜೆ 6:30ಕ್ಕೆ ನಡೆಯಲಿದೆ. ಶುಲ್ಕ ತಲಾ ರೂ.30/-

"ಬಾಹ್ಯಾಕಾಶ ವಿಜ್ಞಾನ"       Click here for more..

ಜವಾಹರ್ ಲಾಲ್ ನೆಹರು ತಾರಾಲಯವು ಅಕ್ಟೋಬರ್ 4, 2018 ರಂದು ಪ್ರೌಢಶಾಲಾ ಶಿಕ್ಷಕರಿಗಾಗಿ ಒಂದು ದಿನದ ಕಾರ್ಯಾಗಾರವನ್ನು ಆಯೋಜಿಸಿದೆ. ಇಸ್ರೋದ ಶ್ರೀ ಪಿ. ಜೆ. ಭಟ್ ಹಾಗೂ ನಿಯಾಸ್ ನ ಪ್ರೊ. ಎಮ್. ಬಿ. ರಜನಿ ಹಾಗೂ ಪ್ರೊ. ಅಸ್ಮಿತ ಮೊಹಾಂತಿ ರವರಿಂದ ಉಪನ್ಯಾಸಗಳನ್ನು ಏರ್ಪಡಿಸಲಾಗಿದೆ. ಶುಲ್ಕ ತಲಾ ರೂ.250/-. ಈ ಉಪನ್ಯಾಸಗಳ ನಂತರ ಧಾರವಾಡದ ಕೃಷಿ ವಿಶ್ವವಿದ್ಯಾಲಯದ ಸಹಾಯಕ ಪ್ರಾಚಾರ್ಯರಾದ || ರವಿಕುಮಾರ್ ಹೊಸಮನಿ ರವರಿಂದ "ಬಾಹ್ಯಾಕಾಶ ಡ್ರೊಸೋಫಿಲಾ : ಗಗನಯಾನಿಗಳ ಆರೋಗ್ಯದ ಕನ್ನಡಿ" ವಿಷಯದ ಕುರಿತು ಸಾರ್ವಜನಿಕರಿಗಾಗಿ ವಿಶೇಷ ಉಪನ್ಯಾಸವನ್ನು ಸಂಜೆ 4 ಘಂಟೆಗೆ ಆಯೋಜಿಸಲಾಗಿದೆ. ಪ್ರವೇಶ ಉಚಿತ.

'ಖಗೋಳ ಶಾಸ್ತ್ರ' - ಕಾರ್ಯಗಾರ       Click here for more..

ಜವಾಹರ್ ಲಾಲ್ ನೆಹರು ತಾರಾಲಯವು ಜನಸಾಮಾನ್ಯರಿಗಾಗಿ ಹತ್ತು ದಿನಗಳ ಖಗೋಳ ಶಾಸ್ತ್ರ ಕಾರ್ಯಾಗಾರವನ್ನು ಆಯೋಜಿಸಿದೆ. ಅಕ್ಟೋಬರ್ 6, 2018 ರಿಂದ ನವೆಂಬರ್ 4, 2018 ರವರೆಗೆ ಪ್ರತಿ ಶನಿವಾರ ಮತ್ತು ಭಾನುವಾರದಂದು ಈ ಕಾರ್ಯಾಗಾರವು ನಡೆಯಲಿದೆ. ಪ್ರಸ್ತುತ ಕಾರ್ಯಾಗಾರವು ಜನಮೆಚ್ಚುಗೆಗೆ ಪಾತ್ರವಾಗಿದ್ದ "ಪ್ರಾಯೋಗಿಕ ಖಗೋಳ ಶಾಸ್ತ್ರ" ಎಂಬ ಕಾರ್ಯಾಗಾರ ಸರಣಿಯ ಪರಿಷ್ಕೃತ ಆವೃತ್ತಿಯಾಗಿದ್ದು ಖಗೋಳ ಶಾಸ್ತ್ರದ ಮೂಲಭೂತ ಪರಿಕಲ್ಪನೆಗಳ ಸಮಗ್ರ ಚಿತ್ರಣ ಒದಗಿಸುವ ಧ್ಯೇಯ ಹೊಂದಿದೆ.

"ತಿಂಗಳ ಸಂಭ್ರಮ"       Click here for more..

ಜವಾಹರ್‍ ಲಾಲ್ ನೆಹರು ತಾರಾಲಯವು ಶಾಲಾ ಶಿಕ್ಷಕರಿಗಾಗಿ ತಿಂಗಳ ಸಂಭ್ರಮ ಎಂಬ ಹೊಸ ಕಾರ್ಯಕ್ರಮದಡಿಯಲ್ಲಿ ಈ ತಿಂಗಳ 29ರಂದು ವಿಜ್ಞಾನಿ ಎನ್ರಿಕೊ ಫರ್ಮಿರವರ ಜನ್ಮದಿನವನ್ನು ಆಚರಿಸುತ್ತಿದ್ದೇವೆ. ಬೈಜಿಕ ಭೌತವಿಜ್ಞಾನದಲ್ಲಿ ಖ್ಯಾತ ವಿಜ್ಞಾನಿಯಾದ ಎನ್ರಿಕೊ ಫರ್ಮಿರವರ ಬದುಕು ಮತ್ತು ಕೊಡುಗೆಗಳ ಬಗ್ಗೆ ಚರ್ಚಿಸುವುದು ಕಾರ್ಯಕ್ರಮದ ಉದ್ದೇಶವಾಗಿದೆ.

ತಿಂಗಳ ಚಲನಚಿತ್ರ       

ಈ ತಿಂಗಳ ಚಲನಚಿತ್ರ "ಹೌ ದಿ ಯೂನಿವರ್ಸ್ ವರ್ಕ್ಸ್: ಬಿಗ್ ಬ್ಯಾಂಗ್

ದಿನಾಂಕ: 16.09.2018 ಸಮಯ: ಸಂಜೆ 5 ಗಂಟೆಗೆ ಪ್ರವೇಶ: ಉಚಿತ

'ವಿಕಸನ ಮತ್ತು ತಳಿಶಾಸ್ತ್ರ'       Click here for more..

ಜವಾಹರ್ ಲಾಲ್ ನೆಹರು ತಾರಾಲಯವು ಸೆಪ್ಟೆಂಬರ್ 19, 2018 ರಂದು ಬೆಳಿಗ್ಗೆ 10:30 ರಿಂದ ಮಧ್ಯಾಹ್ನ 3:30 ರವರೆಗೆ ಪ್ರೌಢಶಾಲಾ ಶಿಕ್ಷಕರಿಗಾಗಿ 'ವಿಕಸನ ಮತ್ತು ತಳಿಶಾಸ್ತ್ರ' ಎಂಬ ವಿಷಯದ ಕುರಿತು ಕಾರ್ಯಾಗಾರವನ್ನು ಹಮ್ಮಿಕೊಂಡಿದೆ. ವಿಷಯದ ಬೋಧನೆಗೆ ಪೂರಕವಾಗುವಂತಹ ಚಟುವಟಿಕೆಗಳನ್ನು ಚರ್ಚಿಸುವುದು ಈ ಕಾರ್ಯಾಗಾರದ ಧ್ಯೇಯವಾಗಿದೆ. ಶುಲ್ಕ ತಲಾ ರೂ.250/-

ಖಗೋಳ ಶಾಸ್ತ್ರ' - ಕಮ್ಮಟ       Click here for more..

ಶಾಲಾ ಶಿಕ್ಷಕರು, ವಿಜ್ಞಾನ ಸಂವಹಕರು ಮತ್ತು ಖಗೋಳಾಸಕ್ತರಿಗಾಗಿ ಜವಾಹರ್ ಲಾಲ್ ನೆಹರು ತಾರಾಲಯವು ಒಂದು ಕಮ್ಮಟವನ್ನು ಏರ್ಪಡಿಸಿದೆ. ಭಾಷಾ ಮಾಧ್ಯಮ ಕನ್ನಡ. ಕಮ್ಮಟದ ಮೊದಲ ಭಾಗ 26 ರಿಂದ 28 ರವರೆಗೆ ನಡೆಯಲಿದೆ. ಎರಡನೆಯ ಭಾಗ ನವೆಂಬರ್ ನಲ್ಲಿ ನಡೆಯಲಿದೆ. ಆಸಕ್ತರು ಎರಡೂ ಭಾಗಗಳಲ್ಲಿ ಕಡ್ಡಾಯವಾಗಿ ಹಾಜರಿರಬೇಕು. ಬೆಳಿಗ್ಗೆ 10:30 ರಿಂದ ಸಂಜೆ 7:30 ರವರೆಗೆ. ಪ್ರವೇಶ ಶುಲ್ಕ ತಲಾ 1500/- (ಕಮ್ಮಟದ ಎರಡೂ ಭಾಗಗಳಿಗೆ).

'ವಿದ್ಯುತ್ಕಾಂತೀಯ ತರಂಗಗಳು' ವಿಷಯದ ಕುರಿತು ವಿಜ್ಞಾನ ಕೂಟ - 09.09.2018       Click here for more..

ಪ್ರತಿ ತಿಂಗಳ ಎರಡನೇ ಭಾನುವಾರದಂದು ಪ್ರೌಢಶಾಲೆ ಮತ್ತು ಪದವಿ ಪೂರ್ವ ವಿದ್ಯಾರ್ಥಿಗಳಿಗಾಗಿ ವಿಜ್ಞಾನ ಕೂಟವನ್ನು ಹಮ್ಮಿಕೊಳ್ಳಲಾಗುತ್ತಿದೆ. ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವವನ್ನು ಬೆಳೆಸುವ ಉದ್ದೇಶವಿರುವ ಈ ಕಾರ್ಯಕ್ರಮದಲ್ಲಿ ಹಲವಾರು ವೈಜ್ಞಾನಿಕ ವಿದ್ಯಮಾನಗಳ ಬಗ್ಗೆ ಚರ್ಚಿಸಲಾಗುವುದು. ಆಸಕ್ತಿಯಿರುವ ಸಾರ್ವಜನಿಕರೂ ಭಾಗವಹಿಸಬಹುದಾಗಿದೆ. ವಿದ್ಯುತ್ಕಾಂತೀಯ ರೋಹಿತದ ಅನ್ವೇಷಣೆ, ಉತ್ಪಾದಿಸುವ ವಿಧಾನ, ವರ್ಗೀಕರಣ ಮತ್ತು ಉಪಯೋಗಗಳ ಬಗ್ಗೆ ಚರ್ಚಿಸುವುದು ಈ ಬಾರಿಯ ವಿಜ್ಞಾನ ಕೂಟದ ಧ್ಯೇಯವಾಗಿದೆ.

ಕಾಪಿ ವಿತ್ ಕ್ಯೂರಿಯಾಸಿಟಿ       

09.09.2018 ರಂದು ಸಂಜೆ 4 ಗಂಟೆಗೆ ಇಂಡಿಯನ್ ಸ್ಟ್ಯಾಟಿಸ್ಟಿಕಲ್ ಇನ್ಸ್ಟಿಟ್ಯೂಟ್ ನ ಪ್ರೊ. ತನ್ವಿ ಜೈನ್ ಅವರಿಂದ "ಎ ಫಿನಿಟ್ ಡಿಸ್ಕಷನ್ ಆನ್ ದಿ ಇನ್ ಫಿನಿಟ್" ವಿಷಯದ ಬಗ್ಗೆ ಕಾಪಿ ವಿತ್ ಕ್ಯೂರಿಯಾಸಿಟಿ ಮಾಲಿಕೆಯಡಿಯಲ್ಲಿ ಉಪನ್ಯಾಸವನ್ನು ತಾರಾಲಯದಲ್ಲಿ ಏರ್ಪಡಿಸಲಾಗಿದೆ. ಪ್ರವೇಶ ಉಚಿತ.

PREV 1 2 3 4 5 6 7 8 NEXT

ಶೀಘ್ರ ಕೊಂಡಿಗಳು

 

ವೆಬ್ಸೈಟ್ ಸಂದರ್ಶಕ ಕೌಂಟರ್

ಸೋಮವಾರ ಮತ್ತು ಎರಡನೇ ಮಂಗಳವಾರದಂದು ರಜೆ