ಆಕಾಶ ಮಂದಿರದವನ್ನು ಕಾಯ್ದಿರಿಸುವ ವಿವರ

ಆಕಾಶ ಮಂದಿರದವನ್ನು ಕಾಯ್ದಿರಿಸುವ ವಿವರ

ಪ್ರದರ್ಶನದ ಹೆಸರು : "ನಮ್ಮ ಸೌರವ್ಯೂಹ", "ನಕ್ಷತ್ರಗಳು" ಹಾಗೂ "ವಿಶ್ವದ ಅನ್ವೇಷಣೆ"

ಶಾಲೆಗಳಿಗೆ :

ಆಸನಗಳ ಲಭ್ಯತೆ : 210

200 ವಿದ್ಯಾರ್ಥಿಗಳವರೆಗೆ ರೂ.6000/-ವನ್ನು ಕನಿಷ್ಠ ದರವಾಗಿ ವಿಧಿಸಲಾಗುವುದು

ನಿಗದಿತ ಆಸನಗಳಿಗಿಂತ ಕಡಿಮೆ ಇದ್ದು ಪ್ರದರ್ಶನ ಕಾಯ್ದಿರಿಸುವ ಸಂದರ್ಭದಲ್ಲಿ ಮೇಲೆ ತಿಳಿಸಿರುವ ಕನಿಷ್ಠ ಶುಲ್ಕ ಕೊಡಬೇಕಾಗುತ್ತದೆ.

ಹತ್ತು ಶಿಕ್ಷಕ/ಸಿಬ್ಬಂದಿಗಳಿಗೆ ಪ್ರವೇಶ ಉಚಿತ

ಸಾರ್ವಜನಿಕರಿಗೆ :

210 ಅಥವಾ ಕಡಿಮೆ ಆಸನಗಳನ್ನು ಕಾಯ್ದಿರಿಸಲು ರೂ.10000/-ಗಳನ್ನು ಕನಿಷ್ಠ ದರವಾಗಿ ನಿಗದಿ ಪಡಿಸಲಾಗಿದೆ

ಸೂಚನೆಗಳು :

ನಿಗದಿತ ಪ್ರದರ್ಶನ ಸಮಯಕ್ಕೆ ಅರ್ಧ ಗಂಟೆ ಮುಂಚಿತವಾಗಿ ವಿದ್ಯಾರ್ಥಿಗಳು ತಾರಾಲಯದಲ್ಲಿ ಹಾಜರಿರಬೇಕು. ಇಲ್ಲದಿದ್ದಲ್ಲಿ ಪ್ರದರ್ಶನದ ಬಗೆಗಿನ ತೀರ್ಮಾನ ಆಡಳಿತ ಮಂಡಳಿಯ ವಿವೇಚನೆಗೆ ಒಳಪಟ್ಟಿರುತ್ತದೆ.

ಮುಂಗಡವನ್ನು ನೀಡಿದ್ದಲ್ಲಿ ಮಾತ್ರ ವಿಶೇಷ ಪ್ರದರ್ಶನವನ್ನು ದೃಢೀಕರಿಸಲಾಗುವುದು.

ಆಕಾಶ ಮಂದಿರದ ಒಳಗೆ ಮೊಬೈಲ್ ಬಳಸುವುದನ್ನು, ಬೆಳಕು ಬೀರುವ ಆಟಿಕೆಗಳು, ಡಿಸ್ಕೋ ಲೈಟ್, ಲೇಸರ್ ಪಾಯಿಂಟರ್ ಇವುಗಳನ್ನು ನಿಷೇಧಿಸಿದೆ.

ನಿಗದಿತ ಆಸನಗಳಿಗಿಂತ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇದ್ದಲ್ಲಿ, ಉಳಿದ ಆಸನಗಳನ್ನು ಬೇರೆಯವರಿಗೆ ಅವಕಾಶ ಮಾಡಿಕೊಡುವ ಅಧಿಕಾರ ಆಡಳಿತ ಮಂಡಳಿಯ ತೀರ್ಮಾನಕ್ಕೆ ಒಳಪಟ್ಟಿರುತ್ತದೆ.


ಕಾಯ್ದಿರಿಸುವ ಅರ್ಜಿಯನ್ನು ಡೌನ್‍ಲೋಡ್ ಮಾಡಿ