ಸಂಸ್ಥಾಪಕ ನಿರ್ದೇಶಕರು - ಪ್ರೊ. ಸಿ. ವಿ. ವಿಶ್ವೇಶ್ವರ

ಪ್ರೊ. ವಿಶ್ವೇಶ್ವರ ಅವರು ತಾರಾಲಯದ ಸ್ಥಾಪಕ ನಿರ್ದೇಶಕರಾಗಿದ್ದರು. ಅವರು ತಾರಾಲಯವನ್ನು ನಿರ್ವಹಿಸುವ ಸ್ವಾಯತ್ತ ಸಂಸ್ಥೆಯ ಉಪಾಧ್ಯಕ್ಷರಾಗಿ ಅದು ಸ್ಥಾಪನೆಯಾದ ವರ್ಷ(1992)ದಿಂದ ತಮ್ಮ ಕೊನೆ ದಿನಗಳವರೆಗೂ ಸೇವೆ ಸಲ್ಲಿಸಿದರು.

ವಿಜ್ಞಾನದ ಜನಪ್ರಿಯತೆ
ತಾರಾಲಯದ ಪ್ರದರ್ಶನಗಳು

ಈ ಕೆಳಕಂಡ ಪ್ರದರ್ಶನಗಳ ಲೇಖಕ ಮತ್ತು ನಿರ್ದೇಶಕರೂ ಆಗಿದ್ದರು –
1989 - ಸೂರ್ಯ ಮತ್ತು ಕುಟುಂಬ
1992 – ನಮ್ಮ ವಿಶ್ವ
1994 – ಅನ್ಯಜೀವಿಗಳು ಅನ್ಯಲೋಕಗಳು
1995 - ಗ್ರಹಣಗಳು
2000 – ಕಾಲ - ಒಂದು ಅನಂತವಾಹಿನಿ
2004 – ಆಲ್ಬರ್ಟ್ ಐನ್ಸ್ಟೈನ್
2006 - ಬಾನಂಗಳದಲ್ಲಿ ಬಾಣಬಿರುಸು

ಪ್ರೊಫೆಸರ್ ಸಿ. ವಿ. ವಿಶ್ವೇಶ್ವರ

 

ತಾರಾಲಯದ ಕಾರ್ಯಕ್ರಮಗಳಲ್ಲಿ ಚಿತ್ರಕಲೆ :

  • 2017ರಲ್ಲಿ ತಮ್ಮ ಕೊನೆಯ ದಿನಗಳವರೆಗೂ ತಾರಾಲಯದ ಎಲ್ಲಾ ಪ್ರದರ್ಶನಗಳ ನಿರ್ಮಾಣದಲ್ಲಿ ಮಾರ್ಗದರ್ಶನ ನೀಡುತ್ತಿದ್ದರು. ವಿಶಿಷ್ಟ ಶೈಲಿಯ ಕಲಾಕೃತಿಗಳು, ವ್ಯಂಗ್ಯ ಚಿತ್ರಗಳು, ಚರಿತ್ರಾಂಶಗಳು ಮತ್ತು ವಿವಿಧ ಸಂಸ್ಕøತಿಗಳಿಂದ ಆಯ್ದ ಪೌರಾಣಿಕ ಕಥೆಗಳನ್ನು ತಾರಾಲಯದ ಪ್ರದರ್ಶನಗಳಲ್ಲಿ ಬಳಸಲು ಪರಿಚಯಿಸಿದವರು ಪ್ರೊ. ಸಿ. ವಿ. ವಿಶ್ವೇಶ್ವರ

  • 1997ರಲ್ಲಿ ತಾರಾಲಯದ ಆವರಣದಲ್ಲಿ “ವಿಜ್ಞಾನ ವನ”ವನ್ನು ಸ್ಥಾಪಿಸಿದರು.

  • ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿನ ಇತ್ತೀಚಿನ ಬೆಳವಣಿಗೆಗಳನ್ನು ಸಾರ್ವಜನಿಕರಿಗೆ ತಲುಪಿಸುವ ಸಲುವಾಗಿ “ವಿಜ್ಞಾನ ಸಮೀಕ್ಷೆ” ಎಂಬ ದೃಕ್-ಶ್ರವಣ ಕಾರ್ಯಕ್ರಮವನ್ನು ಪರಿಚಯಿಸಿದರು.

ಅನೌಪಚಾರಿಕ ವಿಜ್ಞಾನ ಶಿಕ್ಷಣ

ವಿಜ್ಞಾನ ಮತ್ತು ಸಂಶೋಧನಾ ಕ್ಷೇತ್ರದಲ್ಲಿ ವೃತ್ತಿಜೀವನ ರೂಪಿಸಿಕೊಳ್ಳಲು ವಿದ್ಯಾರ್ಥಿಗಳಿಗೆ ವಿವಿಧ ಹಂತಗಳಲ್ಲಿ ಅನೌಪಚಾರಿಕ ವಿಧಾನಗಳ ಮೂಲಕ ಶಿಕ್ಷಣ ನೀಡುವ ದೆಸೆಯಲ್ಲಿ ತಾರಾಲಯದ ಶೈಕ್ಷಣಿಕ ಕಾರ್ಯಕ್ರಮಗಳನ್ನು ರಚಿಸಲಾಗಿದೆ. 1992ರಲ್ಲಿ ಇವುಗಳ ಪ್ರಾರಂಭಿಸಿದವರು ಪ್ರೊ. ಸಿ. ವಿ. ವಿಶ್ವೇಶ್ವರ. ಈ ಕಾರ್ಯಕ್ರಮಗಳು ನಿರಂತರವಾಗಿ ಮುಂದುವರಿದು ವೈಜ್ಞಾನಿಕ ಶಿಕ್ಷಣ ಕ್ಷೇತ್ರದಲ್ಲಿ ಹೆಸರುಗಳಿಸಿವೆ

ವಿಜ್ಞಾನ ಪ್ರದರ್ಶನಗಳು : 1992ರಲ್ಲಿ
ವಿದ್ಯಾರ್ಥಿಗಳನ್ನು ಪ್ರೇರೇಪಿಸಲು - ಪ್ರಯೋಗಾತ್ಮಕ ಪ್ರದರ್ಶನ

SOW - ಸೋ (ವಾರಾಂತ್ಯದಲ್ಲಿ ವಿಜ್ಞಾನ) (Science Over Weekends) - ಪ್ರೌಢಶಾಲಾ ವಿದ್ಯಾರ್ಥಿಗಳಿಗೆ 1995
ವಿಜ್ಞಾನ ವಿಷಯದಲ್ಲಿ ಬೇಸಿಗೆ ಶಿಬಿರ – 1995

ರೀಪ್ - ಪದವಿಪೂರ್ವ ವಿದ್ಯಾರ್ಥಿಗಳಿಗೆ ಭೌತಶಾಸ್ತ್ರದಲ್ಲಿ – ವಾರಾಂತ್ಯದ ತರಗತಿಗಳು – 1996
3-5ನೇ ತರಗತಿ ವಿದ್ಯಾರ್ಥಿಗಳಿಗೆ ಚಟುವಟಿಕೆ ಆಧಾರಿತ Sಇಇಆ ಶೀರ್ಷಿಕೆಯ ಕಾರ್ಯಕ್ರಮ
ಭಾರತೀಯ ವಿಜ್ಞಾನ ಸಂಸ್ಥೆ, ರಾಮನ್ ಸಂಶೋಧನಾ ಸಂಸ್ಥೆ, ನ್ಯಾಷನಲ್ ಸೆಂಟರ್ ಫಾರ್ ಬಯಲಾಜಿಕಲ್ ಸೈನ್ಸಸ್ ಮತ್ತು ಭಾರತೀಯ ಖಭೌತ ಸಂಸ್ಥೆಗಳ ಸಹಯೋಗದೊಂದಿಗೆ ರೀಪ್ ಕಾರ್ಯಕ್ರಮವನ್ನು ಮೂರು ವರ್ಷಗಳ ಕಾರ್ಯಕ್ರಮವನ್ನಾಗಿ 2000ದ ಇಸವಿಯಿಂದ ಮಾಡಲಾಯಿತು. ಇಂಟರ್‍ನ್ಯಾಷನಲ್ ಸೆಂಟರ್ ಫಾರ್ ಥಿಯರೆಟಿಕಲ್ ಸೈನ್ಸಸ್ ಸಹ 2016ರಲ್ಲಿ ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದೆ.
ರೀಪ್ (ಜೀವಶಾಸ್ತ್ರ) ಕಾರ್ಯಕ್ರಮ - ಪದವಿಪೂರ್ವ ವಿದ್ಯಾರ್ಥಿಗಳಿಗಾಗಿ 2000ದ ಇಸವಿಯಿಂದ ರೂಪಿಸಲಾಗಿದೆ.