ನಕ್ಷತ್ರ ವೀಕ್ಷಣೆ ಕಾರ್ಯಕ್ರಮ

ಪ್ರತಿ ತಿಂಗಳ ಮೊದಲ ಭಾನುವಾರ ನಡೆಯಲಿದೆ. ಆಕಾಶ ಮಂದಿರದೊಳಗೆ ಉಪನ್ಯಾಸ ಆಯೋಜಿಸಲಾಗುವುದ. ದೂರದರ್ಶಕಗಳು ಮತ್ತು ದುರ್ಬೀನುಗಳ ಮೂಲಕ ಇರುಳ ಆಕಾಶವನ್ನು ನೋಡುವ ಅವಕಾಶವಿದೆ.

ಇಲ್ಲಿ ನೀಡುವ ಉಪನ್ಯಾಸದಲ್ಲಿ ನಕ್ಷತ್ರ, ನಕ್ಷತ್ರ ಪುಂಜ ಇತ್ಯಾದಿಗಳನ್ನು ಚಾರ್ಟ್ ಸಹಾಯದಿಂದ ಗುರುತಿಸಲು ಹೇಳಿಕೊಡಲಾಗುತ್ತದೆ.
ನಕ್ಷತ್ರ ವೀಕ್ಷಣೆ

'ನಕ್ಷತ್ರ ವೀಕ್ಷಣೆ' ಕಾರ್ಯಕ್ರಮವು 7ನೇ ಏಪ್ರಿಲ್ 2019 ರಂದು ಸಂಜೆ 6:30ಕ್ಕೆ ನಡೆಯಲಿದೆ.

ಹೊಸ ಕಾರ್ಯಕ್ರಮ "ಖಗೋಳ ವಿಜ್ಞಾನ : ಕೇಳಿ – ತಿಳಿ"

7ನೇ ಏಪ್ರಿಲ್ 2019 ರ ಸಂಜೆ 5:15 – 6:15 ರವರೆಗೆ ಖಗೋಳ ವಿಜ್ಞಾನಕ್ಕೆ ಸಂಬಂಧಪಟ್ಟ ಪ್ರಶ್ನೆಗಳನ್ನು ತಾರಾಲಯದ ತಜ್ಞರನ್ನು ಕೇಳಬಹುದು.