ವಿಜ್ಞಾನ ಪ್ರದರ್ಶನ

ನವಂಬರ್ 23 – 25, 2018ರಂದು ನಡೆಯಲಿರುವ ‘ವಿಜ್ಞಾನ ಪ್ರದರ್ಶನ’ ಕ್ಕೆ ಶಾಲೆಗಳಿಂದ ವಿಜ್ಞಾನ ಮಾದರಿಗಳನ್ನು ಪ್ರದರ್ಶಿಸಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಕೊನೆಯ ದಿನಾಂಕ : 3ನೇ ನವಂಬರ್ 2018

ಆಯ್ಕೆಯಾದ ಶಾಲೆಗಳನ್ನು ತಿಳಿಸುವ ದಿನಾಂಕ : 7ನೇ ನವಂಬರ್ 2018


ಮೂರು ದಿನಗಳ 'ವಿಜ್ಞಾನ ಪ್ರದರ್ಶನ'ವನ್ನು ಆಗಸ್ಟ್ 31, 2018 ರಿಂದ ತಾರಾಲಯದಲ್ಲಿ ಏರ್ಪಡಿಸಲಾಗಿದೆ. ಪ್ರವೇಶ ಉಚಿತ. ಪಲ್ಸ್ ನ ಪ್ರಸರಣ, ಟ್ರಾನ್ಸ್ ಫಾರ್ಮರ್, ಕೇಂದ್ರಾಪಗಾಮಿ ಬಲ, ದ್ಯುತಿವಿದ್ಯುತ್ ಪರಿಣಾಮ ಮತ್ತು ರೋಬರ್ ವಾಲ್ ತಕ್ಕಡಿ – ಇನ್ನೂ ಮುಂತಾದ ಮಾದರಿಗಳು ಪ್ರದರ್ಶನದಲ್ಲಿರುತ್ತವೆ.


ಕೇಳಿದರೆ ಮರೆವೆ, ನೋಡಿದರೆ ನೆನಪಿಡುವೆ, ಮಾಡಿದರೆ ಕಲಿಯುವೆ

3 ದಿನಗಳ ವಿಜ್ಞಾನ ಪ್ರದರ್ಶನ
ವಿಜ್ಞಾನದ ಪ್ರಯೋಗಗಳ ಮತ್ತು ನಿಯಮಗಳ ಆಧಾರಿತ ಮಾದರಿಗಳ ಪ್ರದರ್ಶನ ಏರ್ಪಡಿಸಲಾಗುವುದು. ಕ್ರಿಯಾತ್ಮಕ ಪ್ರದರ್ಶಿಕೆಗಳಿಗೆ ಹೆಚ್ಚು ಪ್ರಾಮುಖ್ಯತೆ ನೀಡಲಾಗುವುದು. ಈ ಪ್ರದರ್ಶನ ವರ್ಷದಲ್ಲಿ ಎರಡು ಬಾರಿ ಏರ್ಪಡಿಸಲಾಗುವುದು. ಮೊದಲ ಪ್ರದರ್ಶನ ಆಗಸ್ಟ್ ತಿಂಗಳಿನಲ್ಲಿ ನಡೆಸಲಾಗುತ್ತದೆ.

ವಿವಿಧ ಸಂಶೋಧನಾ ಸಂಸ್ಥೆಗಳಾದ ನ್ಯಾಷನಲ್ ಏರೋಸ್ಪೇಸ್ ಲ್ಯಾಬೊರೇಟರೀಸ್, ರಾಮನ್ ಸಂಶೋಧನಾ ಸಂಸ್ಥೆ, ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ, ಸೆಂಟರ್ ಫಾರ್ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಅಂಡ್ ರಿಸರ್ಚ್ ಹಾಗೂ ಭಾರತೀಯ ವಿಜ್ಞಾನ ಸಂಸ್ಥೆ – ಇವುಗಳ ಸಹಯೋಗದಲ್ಲಿ - ಬೇಸ್ ಸುಮಾರು 20-25 ವಿಜ್ಞಾನ ಮಾದರಿಗಳನ್ನು ಪ್ರತ್ಯಕ್ಷಿಕೆಗಳನ್ನು ಪ್ರದರ್ಶಿಸುತ್ತದೆ. ಕಲಿಕಾ ವಿಧಾನವನ್ನು ಉತ್ತೇಜಿಸಲು ಕಲಿಕೆಯ ಕ್ರಮದ ಭಾಗವಾಗಿ ವಿದ್ಯಾಥಿ ಸ್ವಯಂ ಸೇವಕರನ್ನು ನಿಯೋಜಿಸಿ ಪ್ರಾತ್ಯಕ್ಷಿಕೆಯ ವಿವರ ನೀಡಲು ತರಬೇತಿ ನೀಡಲಾಗುವುದು.

ಎರಡನೇ ಪ್ರದರ್ಶನ ಅಕ್ಟೋಬರ್/ನವಂಬರ್ ನಡುವೆ ಆಯೋಜಿಸಲಾಗುವುದು. ಇದರಲ್ಲಿ ಬೆಂಗಳೂರು ಹಾಗು ಸುತ್ತಮುತ್ತ ಇರುವ ಶಾಲೆಗಳು ಭಾಗವಹಿಸುತ್ತವೆ. ಸುಮಾರು 30 ಬಗೆಯ ಪ್ರಯೋಗಗಳನ್ನು ಪ್ರದರ್ಶನಕ್ಕೆ ಆಯ್ಕೆ ಮಾಡಲಾಗುವುದು. ಈ ಬಾರಿಯೂ ವಿದ್ಯಾರ್ಥಿಗಳೇ ಪ್ರಯೋಗಗಳ ಕುರಿತು ಸಾರ್ವಜನಿಕರಿಗೆ ವಿವರಣೆ ನೀಡುವರು. ಈ ಪ್ರದರ್ಶನ 7ನೇ ತರಗತಿ ಹಾಗೂ ಮೇಲ್ಪಟ್ಟ ವಿದ್ಯಾರ್ಥಿಗಳಿಗೆ ಹೆಚ್ಚು ಸೂಕ್ತವಾದದ್ದು.


ವಿಜ್ಞಾನ ಪ್ರದರ್ಶನ : 23 ರಿಂದ 25 ನವಂಬರ್ 2018
ವಿಜ್ಞಾನ ಪ್ರದರ್ಶನ : 31ನೇ ಆಗಸ್ಟ್ ನಿಂದ 2ನೇ ಸೆಪ್ಟೆಂಬರ್ 2018

  

  

ಶೀಘ್ರ ಕೊಂಡಿಗಳು

 

ವೆಬ್ಸೈಟ್ ಸಂದರ್ಶಕ ಕೌಂಟರ್

ಸೋಮವಾರ ಮತ್ತು ಎರಡನೇ ಮಂಗಳವಾರದಂದು ರಜೆ