ಆಕಾಶ ಮಂದಿರ

ಹಗಲು ಆಕಾಶ ಮಂದಿರವು ತಾರಾಲಯದ ಬಹುಮುಖ್ಯ ಆಕರ್ಷಣೆಯಾಗಿದೆ. 15 ಮೀ. ಅರ್ಧಗೋಳಾಕಾರದ ಮೇಲೆ ಪ್ರೊಜೆಕ್ಟರ್‍ಗಳ ಸಹಾಯದಿಂದ ಪ್ರದರ್ಶಿಸಲಾಗುತ್ತದೆ.

ಹವಾನಿಯಂತ್ರಿತ ಆಕಾಶ ಮಂದಿರದಲ್ಲಿ 210 ಆರಾಮ ಆಸಗಳನ್ನು ಏಕಮುಖ ವೀಕ್ಷಣೆಗೆ ಅಳವಡಿಸಲಾಗಿದೆ. ವೈಜ್ಞಾನಿಕ ಇತಿಹಾಸ, ಚರಿತ್ರಾಂಶಗಳು, ವೈಜ್ಞಾನಿಕ ವಾಸ್ತವಾಂಶಗಳು, ಸಾಂಸ್ಕøತಿಕ ವಿಚಾರಗಳು ಇತ್ಯಾದಿಗಳು ವೀಕ್ಷಕರನ್ನು ಆಕರ್ಷಿಸುತ್ತದೆ. ಇಲ್ಲಿನ ದೃಶ್ಯಾವಳಿಗಳು ಸುಂದರ ನಿರೂಪಣೆ ಹಾಗೂ ಸಂಗೀತದ ಜೊತೆಗೆ ಜೋಡಣೆಯಾಗಿದ್ದು ಮನಸೂರೆಗೊಳ್ಳುತ್ತವೆ. ಅತ್ಯುತ್ತಮ ಪ್ರೊಜೆಕ್ಷನ್ ವ್ಯವಸ್ಥೆಯಿಂದಾಗಿ ಆಕರ್ಷಕವಾಗಿದೆ.

ತಾರಾಲಯಗಳ ಪರದೆಗಳು ಚಿತ್ರಮಂದಿರಗಳ ಪರದೆಗಿಂತ ಭಿನ್ನವಾಗಿವೆ. ರಾತ್ರಿಯ ಆಕಾಶವನ್ನು ಮೂಡಿಸಲು ಕಡುಗಪ್ಪು ಹಿನ್ನೆಲೆಯನ್ನು ಹೊಂದುವುದು ಪ್ರಪಂಚದಾದ್ಯಂತವಿರುವ ಎಲ್ಲಾ ತಾರಾಲಯಗಳ ಮುಖ್ಯ ಧ್ಯೇಯವಾಗಿದೆ. ಬೆಂಗಳೂರಿನ ಜವಾಹರ್ ಲಾಲ್ ನೆಹರು ತಾರಾಲಯ ಈ ಧ್ಯೇಯವನ್ನು ಸಾಧಿಸಿದೆ.

ಫುಲ್ ಡೋಂ ಪ್ರೊಜೆಕ್ಟರ್‍ಗಾಗಿ ತಾರಾಲಯವು ಹೈಬ್ರಿಡ್ ತಾಂತ್ರಿಕತೆಯ ಪ್ರೊಜೆಕ್ಟರ್‍ಗಳನ್ನು ಅಳವಡಿಸಿದೆ. ಜರ್ಮನಿಯ ಕಾರ್ಲ್ ಝೈಸ್ ಕಂಪನಿ ವಿನ್ಯಾಸಗೊಳಿಸಿ ತಯಾರಿಸಿದ ZKP4 ಎಂಬ ಅತ್ಯುತ್ತಮವಾದ ಸ್ಟಾರ್ ಪ್ರೊಜೆಕ್ಟರ್ ಆಕಾಶಮಂದಿರದ ಮಧ್ಯಭಾಗದಲ್ಲಿದೆ. ZKP4 ಒಂದು ಆಪ್ಟೋ ಮೆಕಾನಿಕಲ್ ಪ್ರೊಜೆಕ್ಟರ್ ಆಗಿದ್ದು ಯಾವುದೇ ಪ್ರದೇಶ, ಯಾವುದೇ ದಿನಾಂಕ ಮತ್ತು ಸಮಯದಲ್ಲಿ ನಿಗದಿತ ನಕ್ಷತ್ರದ ಸ್ಥಾನವನ್ನು ನಿಖರವಾಗಿ ಸೂಚಿಸುವ ಸಾಮಥ್ರ್ಯವಿದೆ. ZKP4 ದೈನಿಕ ಹಾಗೂ ವಾರ್ಷಿಕ ಚಲನಗಳು, ಸಾವಿರಾರು ವರ್ಷಗಳ ಪೂರ್ವ ಹಾಗೂ ಭವಿಷ್ಯತ್ತಿನ ಆಕಾಶದ ಚಿತ್ರಣವನ್ನು ನಿಖರವಾಗಿ ನಿರೂಪಿಸುವುದರಿಂದ ಉತ್ತಮ ಕಲಿಕಾ ಉಪಕರಣವಾಗಿದೆ. ZKP4 ಹೆಚ್ಚಿನ ಸಾಮಥ್ರ್ಯದ ಎಲ್.ಇ.ಡಿ. ದೀಪಗಳನ್ನು ಬಳಸುತ್ತವೆ.


ZKP4 ಜೊತೆಗೆ ಕಾರ್ಲ್ ಝೈಸ್ ಸಂಸ್ಥೆಯು ತಯಾರಿಸಿರುವ “ಗಿಇಐಗಿಇಖಿ” ಹೆಸರಿನ ಡಿಜಿಟಲ್ ಪ್ರೊಜೆಕ್ಟರ್‍ಗಳನ್ನು ಸಮ್ಮಿಳಿತಗೊಳಿಸಲಾಗಿದೆ. ಇವುಗಳ ಸೂಕ್ತ ಜೋಡಣೆಯಿಂದಾಗಿ ಗುಮ್ಮಟದ ಮೇಲೆ ನೈಜವಾದ ರಾತ್ರಿಯ ಆಕಾಶದ ಹಾಗೂ 4ಏ ರೆಸೊಲ್ಯೂಶನ್‍ಗಳ ಚಿತ್ರಣ ಮೂಡಿ ವೀಕ್ಷಕರಿಗೆ ಆಕಾಶದಲ್ಲಿ ಲೀನವಾಗುವ ಅನುಭವ ನೀಡುತ್ತವೆ. ಡಿಜಿಟಲ್ ಪ್ರೊಜೆಕ್ಟರ್‍ಗಳು ನಿಗದಿತ ಸ್ಥಾನದ ಹೊರತು ಇತರೆ ಭಾಗದಲ್ಲಿ ಬೆಳಕು ಸೂಸುವುದಿಲ್ಲವಾದ ಕಾರಣ ನೈಜ ಆಕಾಶದ ಅನುಭವವನ್ನು ನೋಡುಗರಿಗೆ ಕೊಡುತ್ತದೆ.

ಆಕಾಶ ಮಂದಿರದಲ್ಲಿ 5.1 ಸರೌಂಡ್ ವ್ಯವಸ್ಥೆಯನ್ನು ಅಳವಡಿಸಿದೆ. ಇದರಿಂದ ಅತ್ಯುನ್ನತ ಮಟ್ಟದ ಧ್ವನಿಗ್ರಹಣದ ಅನುಭವ ಸಿಗುತ್ತದೆ.

ಮಿನಿ ಡೋಂ :

ಮಿರರ್ ಡೋಂ ಪ್ರಕ್ಷೇಪಕ ವ್ಯವಸ್ಥೆಯ ಮರುಬಳಕೆಯ ಉದ್ದೇಶದಿಂದ - ಲಭ್ಯವಿದ್ದ ಬೊಧನಾ ಕೊಠಡಿಯನ್ನು 40 ಆಸನಗಳ ಡಿಜಿಟಲ್ ಹವಾನಿಯಂತ್ರಿತ ಆಕಾಶ ಮಂದಿರವನ್ನಾಗಿ ಪರಿವರ್ತಿಸಲಾಗಿದೆ.

ತಾರಾಲಯದ ಶೈಕ್ಷಣಿಕ ಕಾರ್ಯಕ್ರಮಗಳಲ್ಲಿ ಈ ಮಿನಿ ಡೋಂನ ಸೌಲಭ್ಯವನ್ನು ಖಗೋಳ ಶಾಸ್ತ್ರ ಬೊಧನೆಗಾಗಿ ಬಳಸಲಾಗುತ್ತಿದೆ.

ಈ ಮಿನಿ ಡೋಂ ಸೌಲಭ್ಯ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳಿಗೆ ಕೋರಿಕೆ ಮೇರೆಗೆ ವೀಕ್ಷಣೆಗೆ ಲಭ್ಯವಿದೆ.

ಆಸನಗಳು – 40