ವಿಶೇಷ ಉಪನ್ಯಾಸ

ವಿಶೇಷ ಉಪನ್ಯಾಸಗಳು

ಸ್ಥಳೀಯ ಪ್ರತಿಷ್ಠಿತ ಸಂಸ್ಥೆಗಳ ಸಹಯೋಗದೊಂದಿಗೆ ವಿಜ್ಞಾನ ವಿಷಯವಾಗಿ ದೇಶ-ವಿದೇಶಗಳ ವಿವಿಧ ಸಂಶೋಧನಾ ಸಂಸ್ಥೆಯ ಹಿರಿಯ ವಿಜ್ಞಾನಿಗಳಿಂದ ಸಾರ್ವಜನಿಕರಿಗೆ ಉಪನ್ಯಾಸ ಕಾರ್ಯಕ್ರಮಗಳನ್ನು ತಾರಾಲಯವು ಆಯೋಜಿಸುತ್ತಿದೆ. ಉಚಿತ ಪ್ರವೇಶವಿರುವ ಈ ಉಪನ್ಯಾಸಗಳ ಆಯೋಜನೆ ಕುರಿತಾಗಿ ಮಾಹಿತಿಯನ್ನು ಪತ್ರಿಕಾ ಪ್ರಕಟಣೆ, ಅಂತರ್ಜಾಲ ಮತ್ತು ಇತರೆ ಮಾಧ್ಯಮಗಳ ಮೂಲಕ ಆಸಕ್ತರಿಗೆ ತಿಳಿಸಲಾಗುವುದು.


ಕಾಪಿ ವಿತ್ ಕ್ಯೂರಿಯಾಸಿಟಿ' 10.06.2018 ರಂದು ಸಂಜೆ 4 ಗಂಟೆಗೆ ಯು.ಕೆ.ಯ ಯೂನಿವರ್ಸಿಟಿ ಆಫ್ ಬ್ರಿಸ್ಟೋಲ್ ನ ಪ್ರೊ. ಮೈಕೆಲ್ ಬೆರ್ರಿ ಅವರಿಂದ “ಹೌ ಕ್ವಾಂಟಮ್ ಫಿಸಿಕ್ಸ್ ಡೆಮಾಕ್ರಟೈಸ್ಡ್ ಮ್ಯೂಸಿಕ್ : ಎ ಮೆಡಿಟೇಷನ್ ಆನ್ ಫಿಸಿಕ್ಸ್ ಅಂಡ್ ಟೆಕ್ನಾಲಜಿ” ವಿಷಯದ ಬಗ್ಗೆ ಕಾಪಿ ವಿತ್ ಕ್ಯೂರಿಯಾಸಿಟಿ ಮಾಲಿಕೆಯಡಿಯಲ್ಲಿ ಉಪನ್ಯಾಸವನ್ನು ತಾರಾಲಯದಲ್ಲಿ ಏರ್ಪಡಿಸಲಾಗಿದೆ. ಪ್ರವೇಶ ಉಚಿತ.


27.05.2018 ರಂದು ಸಂಜೆ 4 ಗಂಟೆಗೆ ಬೆಂಗಳೂರಿನ ರಾಮನ್ ಸಂಶೋಧನಾ ಸಂಸ್ಥೆಯ ಥಿಯರೆಟಿಕಲ್ ಫಿಸಿಸಿಸ್ಟ್ ಆದ ಪ್ರೊ. ಜೋಸೆಫ್ ಸ್ಯಾಮ್ಯುಲ್ ಅವರಿಂದ ‘ಬ್ಲ್ಯಾಕ್ ಹೋಲ್ಸ್ ಅಂಡ್ ಸ್ಟೀಮ್ ಎಂಜಿನ್ಸ್’ ವಿಷಯದ ಬಗ್ಗೆ ಕಾಪಿ ವಿತ್ ಕ್ಯೂರಿಯಾಸಿಟಿ ಮಾಲಿಕೆಯಡಿಯಲ್ಲಿ ಉಪನ್ಯಾಸವನ್ನು ತಾರಾಲಯದಲ್ಲಿ ಏರ್ಪಡಿಸಲಾಗಿದೆ.


ದಿ.22.04.2018 ರಂದು ಸಂಜೆ 4 ಗಂಟೆಗೆ ಪ್ಯಾರಿಸ್ ನ ಇ.ಎಸ್.ಪಿ.ಸಿ.ಐ. ಸಂಸ್ಥೆಯ ಸಹಾಯಕ ಪ್ರಾಧ್ಯಾಪಕರಾದ ಪ್ರೊ. ಜೋರಾನಾ ಜೆರಾವಿಕ್ ಅವರಿಂದ ‘ಟುವರ್ಡ್ಸ್ ಲೈಫ್ ಇನ್ ಎ ಜಾರ್’ ವಿಷಯದ ಬಗ್ಗೆ ಕಾಪಿ ವಿತ್ ಕ್ಯೂರಿಯಾಸಿಟಿ ಮಾಲಿಕೆಯಡಿಯಲ್ಲಿ ಉಪನ್ಯಾಸವನ್ನು ತಾರಾಲಯದಲ್ಲಿ ಏರ್ಪಡಿಸಲಾಗಿದೆ.


'ಶೂನ್ಯ ನೆರಳಿನ ದಿನ'ದ ಕುರಿತು ಒಂದು ವಿಶೇಷ ಉಪನ್ಯಾಸವನ್ನು 24.04.2018ರಂದು ಬೆಳಿಗ್ಗೆ 11 ರಿಂದ 12 ರವರೆಗೆ ಏರ್ಪಡಿಸಲಾಗಿದೆ. ಈ ಘಟನೆಯನ್ನು ಪ್ರಾತ್ಯಕ್ಷಿಕೆಗಳ ಮೂಲಕ ಮಧ್ಯಾಹ್ನ 12:17 ಕ್ಕೆ ಆವರಣದಲ್ಲಿ ನಿರೂಪಿಸಲಾಗುತ್ತದೆ. ಪ್ರವೇಶ ಉಚಿತ.


ದಿ.25.03.2018 ರಂದು ಸಂಜೆ 4 ಗಂಟೆಗೆ ಬೆಂಗಳೂರಿನ ರಾಷ್ಟ್ರೀಯ ಜೀವ ವಿಜ್ಞಾನ ಕೇಂದ್ರದ ಪ್ರೊ. ಶ್ಯಾನನ್ ಓಲ್ಸನ್ ಅವರಿಂದ ‘ಎಂಡ್ಲೆಸ್ ಫಾರ್ಮ್ಸ್ ಮೋಸ್ಟ್ ಬ್ಯೂಟಿಫುಲ್’ ವಿಷಯದ ಬಗ್ಗೆ ಕಾಪಿ ವಿತ್ ಕ್ಯೂರಿಯಾಸಿಟಿ ಮಾಲಿಕೆಯಡಿಯಲ್ಲಿ ಉಪನ್ಯಾಸವನ್ನು ತಾರಾಲಯದಲ್ಲಿ ಏರ್ಪಡಿಸಲಾಗಿದೆ.


ದಿ.25.02.2018 ರಂದು ಸಂಜೆ 4 ಗಂಟೆಗೆ ಬೆಂಗಳೂರಿನ ರಾಮನ್ ಸಂಶೋಧನಾ ಸಂಸ್ಥೆಯ ಸಹಾಯಕ ಪ್ರಾಚಾರ್ಯರಾದ ಪ್ರೊ. ಊರ್ಬಸಿ ಸಿಂಗ್ ಅವರಿಂದ ‘ಫ್ಯಾಸಿನೇಟಿಂಗ್ ವರ್ಲ್ಡ್ ಆಫ್ ಫೋಟಾನ್ಸ್, ಸೂಪರ್ ಪೊಸಿಷನ್ ಅಂಡ್ ಎಂಟಾಂಗ್ಲ್ ಮೆಂಟ್’ ವಿಷಯದ ಬಗ್ಗೆ ಕಾಪಿ ವಿತ್ ಕ್ಯೂರಿಯಾಸಿಟಿ ಉಪನ್ಯಾಸ ಮಾಲಿಕೆಯಡಿಯಲ್ಲಿ ತಾರಾಲಯದಲ್ಲಿ ಏರ್ಪಡಿಸಲಾಗಿದೆ.