ಕಮ್ಮಟಗಳು

'ಶಿಕ್ಷಕರ ಸಭೆ'

ವರ್ಷವಿಡೀ ನಡೆಯುವ ಕಮ್ಮಟಗಳ ಕುರಿತು ಚರ್ಚಿಸಲು 'ಶಿಕ್ಷಕರ ಸಭೆ'ಯನ್ನು 23ನೇ ಜೂನ್ 2018 ರಂದು ಬೆ. 11 ರಿಂದ 12 ರವರೆಗೆ ನಡೆಸಲಾಗುವುದು. ಪ್ರವೇಶ ಉಚಿತ.


'ವಿಜ್ಞಾನ ಪ್ರಯೋಗಗಳು' – 13ನೇ ಮೇ 2018

10ನೇ ಜೂನ್ 2018 ರಂದು ಮಧ್ಯಾಹ್ನ 3 ಗಂಟೆಗೆ ಈ ತಿಂಗಳ ವಿಜ್ಞಾನ ಕೂಟವನ್ನು ಪ್ರೌಢಶಾಲೆ ಮತ್ತು ಮೇಲ್ಪಟ್ಟ ವಿದ್ಯಾರ್ಥಿಗಳಿಗೆ ಹಮ್ಮಿಕೊಳ್ಳಲಾಗಿದೆ. ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವವನ್ನು ಬೆಳೆಸುವ ಉದ್ದೇಶವಿರುವ ಈ ಕಾರ್ಯಕ್ರಮದಲ್ಲಿ ಹಲವಾರು ವೈಜ್ಞಾನಿಕ ವಿದ್ಯಮಾನಗಳ ಬಗ್ಗೆ ಚರ್ಚಿಸಲಾಗುವುದು. ಆಸಕ್ತಿಯಿರುವ ಸಾರ್ವಜನಿಕರೂ ಭಾಗವಹಿಸಬಹುದಾಗಿದೆ. ನೈಸರ್ಗಿಕ/ಕೃತಕ ಉಪಗ್ರಹಗಳು ಮತ್ತು ಮಾನವಕುಲದ ಮೇಲೆ ಅವುಗಳ ಪಾತ್ರ ಮತ್ತು ಪ್ರಭಾವದ ಕುರಿತು ಚರ್ಚೆಯನ್ನು ನಡೆಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ. ಪ್ರವೇಶ ಉಚಿತ.


ಪ್ರತಿ ತಿಂಗಳ ಎರಡನೇ ಭಾನುವಾರದಂದು ಮಧ್ಯಾಹ್ನ 3 ಗಂಟೆಗೆ ಪ್ರೌಢಶಾಲೆ ಮತ್ತು ಪದವಿ ಪೂರ್ವ ವಿದ್ಯಾರ್ಥಿಗಳಿಗಾಗಿ ವಿಜ್ಞಾನ ಕೂಟವನ್ನು ಹಮ್ಮಿಕೊಳ್ಳಲಾಗುತ್ತಿದೆ. ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವವನ್ನು ಬೆಳೆಸುವ ಉದ್ದೇಶವಿರುವ ಈ ಕಾರ್ಯಕ್ರಮದಲ್ಲಿ ಹಲವಾರು ವೈಜ್ಞಾನಿಕ ವಿದ್ಯಮಾನಗಳ ಬಗ್ಗೆ ಚರ್ಚಿಸಲಾಗುವುದು.


ಜವಾಹರ್ ಲಾಲ್ ನೆಹರು ತಾರಾಲಯವು ವಿದ್ಯಾರ್ಥಿಗಳಿಗಾಗಿ ‘ಶೂನ್ಯ ನೆರಳಿನ ದಿನ’ ವಿಷಯದ ಬಗ್ಗೆ ಅರ್ಧ ದಿನದ ಕಮ್ಮಟವನ್ನು ಏರ್ಪಡಿಸುತ್ತಿದೆ. ‘ಶೂನ್ಯ ನೆರಳಿನ ದಿನ’ಕ್ಕೆ ಸಂಬಂಧಪಟ್ಟ ಭೂಮಿಯ ಆವರ್ತನೆ ಮತ್ತು ಪರಿಭ್ರಮಣೆ, ಅಕ್ಷಾಂಶಗಳಾದ ಸಮಭಾಜಕ ವೃತ್ತ, ಕರ್ಕಾಟಕ ವೃತ್ತ ಮತ್ತು ಮಕರ ಸಂಕ್ರಾಂತಿ ವೃತ್ತ ಇವುಗಳ ಪ್ರಾಮುಖ್ಯತೆ, ಸ್ಥಳೀಯ ಸಮಯದ ಅಳತೆ ಮುಂತಾದವುಗಳ ವಿವರಣೆಯನ್ನು ಈ ಕಮ್ಮಟವು ಒಳಗೊಂಡಿರುತ್ತದೆ. ಶೂನ್ಯ ನೆರಳಿನ ದಿನವನ್ನು ವಿವಿಧ ಪ್ರದರ್ಶಿಕೆಗಳ ಮೂಲಕ ಗಮನಿಸುವುದು ಮತ್ತು ನೆರಳುಗಳ ಮೂಲಕ ಭೂಮಿಯ ಸುತ್ತಳತೆಯನ್ನು ಲೆಕ್ಕಾಚಾರ ಮಾಡುವುದೂ ಸಹ ಸೇರಿರುತ್ತದೆ.


ಏಪ್ರಿಲ್ ತಿಂಗಳ 24ನೇ ತಾರೀಖಿನಂದು ಘಟಿಸುವ ‘ಶೂನ್ಯ ನೆರಳಿನ ದಿನ’ದ ಪ್ರಯುಕ್ತ ಜವಾಹರ್ ಲಾಲ್ ನೆಹರು ತಾರಾಲಯವು ಶಿಕ್ಷಕರು ಮತ್ತು ಬೇಸಿಗೆ ಶಿಬಿರಗಳನ್ನು ಆಯೋಜಿಸುವವರಿಗಾಗಿ ‘ಶೂನ್ಯ ನೆರಳಿನ ದಿನ’ ವಿಷಯದ ಬಗ್ಗೆ ಅರ್ಧ ದಿನದ ಕಮ್ಮಟವನ್ನು 17ನೇ ಏಪ್ರಿಲ್ 2018ರಂದು ಏರ್ಪಡಿಸುತ್ತಿದೆ.


'ಖಗೋಳೀಯ ಛಾಯಾಚಿತ್ರಗಳ ಸಂಸ್ಕರಣೆ'

ಜವಾಹರ್ ಲಾಲ್ ನೆಹರು ತಾರಾಲಯವು ಸಾರ್ವಜನಿಕರಿಗಾಗಿ ಖಗೋಳೀಯ ಛಾಯಾಚಿತ್ರಗಳ ಸಂಸ್ಕರಣೆಯ ಬಗ್ಗೆ ಒಂದು ದಿನದ ಕಾರ್ಯಾಗಾರವನ್ನು 20ನೇ ಮೇ 2018ರಂದು ಆಯೋಜಿಸಿದೆ. ಖ್ಯಾತ ಖಗೋಳ ಛಾಯಾಚಿತ್ರಕಾರರಾದ ಶ್ರೀ ಅಜಯ್ ತಲ್ವಾರ್ ರವರ ಖಗೋಳೀಯ ಛಾಯಾಚಿತ್ರಗಳ ಸಂಗ್ರಹದಿಂದ ಆಯ್ದ ಕೆಲವು ಛಾಯಾಚಿತ್ರಗಳನ್ನು ಈ ಕಾರ್ಯಾಗಾರದಲ್ಲಿ ಬಳಸಿಕೊಳ್ಳಲಾಗುತ್ತದೆ. ಕಾರ್ಯಾಗಾರದಲ್ಲಿ ಪಾಲ್ಗೊಳ್ಳುವವರು ಇದಾಗಲೇ ಇಂತಹ ಪ್ರಯತ್ನದಲ್ಲಿ ಕಂಡಿರುವ ಯಶಸ್ಸು ಅಥವಾ ವೈಫಲ್ಯದ ಬಗೆಗೂ ಇಲ್ಲಿ ಚರ್ಚಿಸಬಹುದು. ಶ್ರೀ ಅಜಯ್ ತಲ್ವಾರ್ ರವರು ನಡೆಸಿಕೊಡುವ ಈ ಕಾರ್ಯಾಗಾರವು ನೈಜ ಛಾಯಾಚಿತ್ರಗಳು ಮತ್ತು ದತ್ತಾಂಶಗಳ ಸಂಸ್ಕರಣೆಯನ್ನು ಒಳಗೊಂಡಿರುತ್ತದೆ.


‘ನಿಸ್ತಂತು ಸಂವಹನ’ - ಕುರಿತು ವಿಜ್ಞಾನ ಕೂಟ

ಪ್ರತಿ ತಿಂಗಳ ಎರಡನೇ ಭಾನುವಾರದಂದು ಮಧ್ಯಾಹ್ನ 3 ಗಂಟೆಗೆ ಪ್ರೌಢಶಾಲೆ ಮತ್ತು ಪದವಿ ಪೂರ್ವ ವಿದ್ಯಾರ್ಥಿಗಳಿಗಾಗಿ ವಿಜ್ಞಾನ ಕೂಟವನ್ನು ಹಮ್ಮಿಕೊಳ್ಳಲಾಗುತ್ತಿದೆ. ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವವನ್ನು ಬೆಳೆಸುವ ಉದ್ದೇಶವಿರುವ ಈ ಕಾರ್ಯಕ್ರಮದಲ್ಲಿ ಹಲವಾರು ವೈಜ್ಞಾನಿಕ ವಿದ್ಯಮಾನಗಳ ಬಗ್ಗೆ ಚರ್ಚಿಸಲಾಗುವುದು. ನಿಸ್ತಂತು ಸಂವಹನ ಕ್ಷೇತ್ರದಲ್ಲಿನ ಆರಂಭದ ದಿನಗಳಿಂದ ಇಂದಿನವರೆಗಿನ ಅಭಿವೃದ್ಧಿಯ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವುದೇ ಈ ಕಾರ್ಯಕ್ರಮದ ಉದ್ದೇಶವಾಗಿದೆ.


‘ದೂರದರ್ಶಕ ತಯಾರಿಸುವ ಕಮ್ಮಟ’

ಜವಾಹರ್ ಲಾಲ್ ನೆಹರು ತಾರಾಲಯವು ಸಾರ್ವಜನಿಕರಿಗಾಗಿ ದೂರದರ್ಶಕಗಳನ್ನು ತಯಾರಿಸುವ ಐದು ದಿನಗಳ ಕಾರ್ಯಾಗಾರವನ್ನು 2018ರ ಮೇ 15ರಿಂದ 19ರವರೆಗೆ ಆಯೋಜಿಸಿದೆ. ಈ ಕಾರ್ಯಾಗಾರದಲ್ಲಿ ಭಾಗವಹಿಸುವವರು 150 ಮಿ.ಮಿ. ನ್ಯೂಟೋನಿಯನ್ ದೂರದರ್ಶಕವನ್ನು ಮಾಡಬಹುದಾಗಿದೆ. ಖಗೋಳ ಶಾಸ್ತ್ರ ಮತ್ತು ನ್ಯೂಟೋನಿಯನ್ ದೂರದರ್ಶಕಗಳ ಕುರಿತಾದ ಉಪನ್ಯಾಸಗಳು ಮತ್ತು ಚರ್ಚೆ ಈ ಕಾರ್ಯಾಗಾರದ ಭಾಗವಾಗಿರುತ್ತದೆ.


ವಿಜ್ಞಾನ ಕೂಟ – 11.03.2018ರಂದು

ಪ್ರತಿ ತಿಂಗಳ ಎರಡನೇ ಭಾನುವಾರದಂದು ಪ್ರೌಢಶಾಲೆ ಮತ್ತು ಪದವಿ ಪೂರ್ವ ವಿದ್ಯಾರ್ಥಿಗಳಿಗಾಗಿ ಮಧ್ಯಾಹ್ನ 3:00 ಗಂಟೆಗೆ ವಿಜ್ಞಾನ ಕೂಟವನ್ನು ಹಮ್ಮಿಕೊಳ್ಳಲಾಗುತ್ತಿದೆ. ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವವನ್ನು ಬೆಳೆಸುವ ಉದ್ದೇಶವಿರುವ ಈ ಕಾರ್ಯಕ್ರಮದಲ್ಲಿ ಹಲವಾರು ವೈಜ್ಞಾನಿಕ ವಿದ್ಯಮಾನಗಳ ಬಗ್ಗೆ ಚರ್ಚಿಸಲಾಗುವುದು. ವಿಜ್ಞಾನದ ಕೆಲವು ಪ್ರಯೋಗಗಳ ಪ್ರದರ್ಶನ ಮತ್ತು ಅವುಗಳ ಹಿಂದಿನ ವೈಜ್ಞಾನಿಕ ವಿಷಯವನ್ನು ತಿಳಿಯಪಡಿಸುವುದು ಇದರ ಉದ್ದೇಶವಾಗಿದೆ. ಇ.ಎಮ್. ಡಿಡಕ್ಷನ್, ಲೈಟ್ ಪ್ರಪೋಗೇಷನ್ ಮುಂತಾದವುಗಳನ್ನು ಪ್ರಯೋಗಗಳ ಮೂಲಕ ಚರ್ಚಿಸಲಾಗುವುದು.