- 3 ವರ್ಷದೊಳಗಿನ ಮಕ್ಕಳಿಗೆ ಆಕಾಶಮಂದಿರದೊಳಗೆ ಪ್ರವೇಶವಿರುವುದಿಲ್ಲ.
- ಯಾವುದೇ ಬಗೆಯ ತಿಂಡಿ ತಿನಿಸುಗಳು ಹಾಗೂ ನೀರಿನ ಬಾಟಲ್‍ಗಳನ್ನು ಆಕಾಶ ಮಂದಿರದೊಳಗೆ ನಿಷೇಧಿಸಲಾಗಿದೆ.
- ತಾರಾಲಯದ ಆವರಣದಲ್ಲಿ ಯಾವುದೇ ಪ್ರದರ್ಶಿಕೆಗಳನ್ನು ಸಾರ್ವಜನಿಕರು ಮುಟ್ಟಬಾರದು. ಆವರಣದಲ್ಲಿ ಸ್ವಚ್ಛತೆ ಹಾಗೂ ಶಿಸ್ತನ್ನು ಪಾಲಿಸಬೇಕು.
- ಸಾರ್ವಜನಿಕರ ಸಂಖ್ಯೆ ಹೆಚ್ಚಾಗಿದ್ದಲ್ಲಿ ಸಾಲಿನಲ್ಲಿರುವ ಒಬ್ಬ ವ್ಯಕ್ತಿಗೆ ಎರಡು ಟಿಕೆಟ್‍ಗಳನ್ನು ಮಾತ್ರ ನೀಡಲಾಗುವುದು.
- ತಾರಾಲಯದ ಪ್ರದರ್ಶನಕ್ಕೆ ಸಾರ್ವಜನಿಕರು ನಿಗದಿತ ಸಂಖ್ಯೆಗಿಂತ ಕಡಿಮೆ ಇದ್ದಲ್ಲಿ ಆ ಪ್ರದರ್ಶನವನ್ನು ರದ್ದು ಪಡಿಸಲಾಗುವುದು.
- ಆಕಾಶ ಮಂದಿರದ ಒಳಗೆ ಮೊಬೈಲ್ ಬಳಕೆ, ಬೆಳಕು ಬೀರುವ ಆಟಿಕೆಗಳು, ಡಿಸ್ಕೋ ಲೈಟ್, ಲೇಸರ್ ಪಾಯಿಂಟರ್ ಇವುಗಳನ್ನು ನಿಷೇಧಿಸಿದೆ.
