ಪ್ರಕಟಣೆಗಳು

17ನೇ ಏಪ್ರಿಲ್ 2021 ರಂದು "ಆಚ್ಛಾದನೆ"       Click here for more..

2021 ರ ಏಪ್ರಿಲ್ 17 ರ ಶನಿವಾರದಂದು ಆಚ್ಛಾದನೆ ಎಂಬ ಖಗೋಳೀಯ ಘಟನೆ ನಡೆಯುತ್ತದೆ. ಬಾಲಚಂದ್ರನು ಮಂಗಳ ಗ್ರಹದ ಮುಂದೆ ಚಲಿಸಿ, ಚಂದ್ರ 17:39 ಗಂಟೆಯಿಂದ 19:33 ಗಂ (IST) ಗೆ ಮಂಗಳ ಗ್ರಹವನ್ನು ಆವರಿಸುತ್ತದೆ. ಬೆಂಗಳೂರಿನ ಜವಾಹರಲಾಲ್ ನೆಹರು ತಾರಾಲಯವು ಈ ಘಟನೆಯನ್ನು 19:00 ರಿಂದ 19:45 ಗಂಟೆಯವರೆಗೆ (ಐಎಸ್‌ಟಿ) ನೇರ ಪ್ರಸಾರ ಮಾಡಲು ವ್ಯವಸ್ಥೆ ಮಾಡುತ್ತಿದೆ. ಕಾರ್ಯಕ್ರಮದ ಕೊಂಡಿಯನ್ನು ನಮ್ಮ ಜಾಲತಾಣ(www.taralaya.org)ದಲ್ಲಿ ಪಡೆಯಬಹುದು. ಸದ್ಯ ಕೋವಿಡ್-19 ರ ಪರಿಸ್ಥಿತಿಯಿಂದಾಗಿ, ತಾರಾಲಯದ ಆವರಣದಲ್ಲಿ ಸಾರ್ವಜನಿಕರ ವೀಕ್ಷಣೆಗೆ ಯಾವುದೇ ವ್ಯವಸ್ಥೆ ಇರುವುದಿಲ್ಲ.

ಬೇಸಿಗೆ ಶಿಬಿರಗಳು - 2021       Click here for more..

ಜವಾಹರ್ ಲಾಲ್ ನೆಹರು ತಾರಾಲಯವು ಈ ಬಾರಿಯ ಬೇಸಿಗೆ ಶಿಬಿರಗಳನ್ನು ಮೈಕ್ರೋ ಸಾಫ್ಟ್ ಟೀಮ್ಸ್ (ಆನ್ಲೈನ್) ಮೂಲಕ ನಡೆಸುತ್ತಿದೆ. ಆಸಕ್ತ ವಿದ್ಯಾರ್ಥಿಗಳು ಬುಕ್ ಮೈ ಶೋ ಜಾಲತಾಣದಲ್ಲಿ ಪಾವತಿಸಿ ನೋಂದಾಯಿಸಬಹುದಾಗಿದೆ.

"ಶೂನ್ಯ ನೆರಳಿನ ದಿನ"ದ ಕುರಿತು ಕಾರ್ಯಾಗಾರ       Click here for more..

ಜವಾಹರ್ ಲಾಲ್ ನೆಹರು ತಾರಾಲಯವು ವಿದ್ಯಾರ್ಥಿಗಳಿಗಾಗಿ "ಶೂನ್ಯ ನೆರಳಿನ ದಿನ" ವಿಷಯದ ಬಗ್ಗೆ ಎರಡು ದಿನದ ಕಮ್ಮಟವನ್ನು 23 ಮತ್ತು 24 ಏಪ್ರಿಲ್ 2021 ರಂದು ಬೆ.11 ರಿಂದ ಮ.1 ಗಂಟೆಯವರೆಗೆ ಆನ್ಲೈನ್ ಮೂಲಕ ಏರ್ಪಡಿಸುತ್ತಿದೆ. "ಶೂನ್ಯ ನೆರಳಿನ ದಿನ"ಕ್ಕೆ ಸಂಬಂಧಪಟ್ಟ ಭೂಮಿಯ ಆವರ್ತನೆ ಮತ್ತು ಪರಿಭ್ರಮಣೆ, ಅಕ್ಷಾಂಶಗಳಾದ ಸಮಭಾಜಕ ವೃತ್ತ, ಕರ್ಕಾಟಕ ವೃತ್ತ ಮತ್ತು ಮಕರ ಸಂಕ್ರಾಂತಿ ವೃತ್ತ ಇವುಗಳ ಪ್ರಾಮುಖ್ಯತೆ, ಸ್ಥಳೀಯ ಸಮಯದ ಅಳತೆ ಮುಂತಾದವುಗಳ ವಿವರಣೆಯನ್ನು ಈ ಕಮ್ಮಟವು ಒಳಗೊಂಡಿರುತ್ತದೆ. ಶೂನ್ಯ ನೆರಳಿನ ದಿನವನ್ನು ವಿವಿಧ ಪ್ರದರ್ಶಿಕೆಗಳ ಮೂಲಕ ಗಮನಿಸುವುದು ಮತ್ತು ನೆರಳುಗಳ ಮೂಲಕ ಭೂಮಿಯ ಸುತ್ತಳತೆಯನ್ನು ಲೆಕ್ಕಾಚಾರ ಮಾಡುವುದೂ ಸಹ ಸೇರಿರುತ್ತದೆ. ಭಾಗವಹಿಸುವಿಕೆಯನ್ನು ಬುಕ್ ಮೈ ಶೋ ಜಾಲತಾಣದ ಮೂಲಕ ತಲಾ ರೂ.100/- ಗಳನ್ನು ಪಾವತಿಸಿ ನೋಂದಾಯಿಸಬಹುದು. ಮೊದಲು ಬಂದ 35 ವಿದ್ಯಾರ್ಥಿಗಳಿಗೆ ಅವಕಾಶ. ಕಾರ್ಯಕ್ರಮದ ಕೊಂಡಿಯನ್ನು ನೋಂದಾಯಿತ ಅಭ್ಯರ್ಥಿಗಳಿಗೆ ಮುಂಚಿತವಾಗಿ ತಿಳಿಸಲಾಗುವುದು.

ದಿ.11.04.2021 ರಂದು ಸಂ.4 - 5:30 ರವರೆಗೆ ವಿಜ್ಞಾನ ಕೂಟ – ವಿಷಯ "ಸಂಚರಣೆ"       Click here for more..

ಈ ಬಾರಿಯ ವಿಜ್ಞಾನ ಕೂಟದಲ್ಲಿ, ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಾದ ಬೆಳವಣಿಗೆಗಳಿಂದ ಸಂಚರಣೆ ವ್ಯವಸ್ಥೆಯಲ್ಲಾಗಿರುವ ಮಹತ್ತರ ಬೆಳವಣಿಗೆಗಳ ಕುರಿತು ಚರ್ಚಿಸಲಾಗುವುದು. ಜನಸಾಮಾನ್ಯರ ವೈಯಕ್ತಿಕ ವಾಹನಗಳಿಂದ ಹಿಡಿದು ಬೃಹತ್ ಹಡಗುಗಳು ಹಾಗೂ ಬಾಹ್ಯಾಕಾಶ ವಾಹನಗಳ ನಿರ್ಮಾಣದಲ್ಲೂ ತಂತ್ರಜ್ಞಾನ ಕ್ಷೇತ್ರದ ಬೆಳವಣಿಗೆಗಳು ಬಹು ಮುಖ್ಯ ಪಾತ್ರ ವಹಿಸುತ್ತವೆ. ಹಾಗೆಯೇ ಈ ಎಲ್ಲಾ ಬಗೆಯ ವಾಹನಗಳ ಸಂಚಾರ ವ್ಯವಸ್ಥೆಗೆ ಡಾಟಾ ಅನಾಲಿಟಿಕ್ಸ್ ಅತಿ ಮುಖ್ಯವೆನಿಸುತ್ತದೆ. ಆಯಾಕಟ್ಟಿನ ಪ್ರದೇಶದಲ್ಲುಂಟಾದ ಒಂದು ಘಟನೆ ಜಾಗತಿಕ ಸಂಚಾರ ವ್ಯವಸ್ಥೆಯನ್ನೇ ಬುಡಮೇಲು ಮಾಡಬಲ್ಲುದು. ಇಂತಹ ವಿಚಾರಗಳ ಕುರಿತು ಚರ್ಚಿಸುವುದೇ ಈ ಕೂಟದ ಧ್ಯೇಯವಾಗಿದೆ.

4ನೇ ಏಪ್ರಿಲ್ 2021 ರಂದು "ನಕ್ಷತ್ರ ವೀಕ್ಷಣೆ"       Click here for more..

ತಿಂಗಳ ಕಾರ್ಯಕ್ರಮ "ನಕ್ಷತ್ರ ವೀಕ್ಷಣೆ" ಎಂಬ ಆಕಾಶ ವೀಕ್ಷಣಾ ಕಾರ್ಯಕ್ರಮವನ್ನು 4ನೇ ಏಪ್ರಿಲ್ 2021 ರ ಸಂಜೆ 6:30 ಕ್ಕೆ ಹಮ್ಮಿಕೊಳ್ಳಲಾಗಿದೆ. ಶುಲ್ಕ ತಲಾ ರೂ.50/-.

ತಿಂಗಳ ಚಲನಚಿತ್ರ - "ದಿ ಪ್ರೈವೇಟ್ ಲೈಫ್ ಆಫ್ ಪ್ಲಾಂಟ್ಸ್"       Click here for more..

ಈ ತಿಂಗಳ ವಿಜ್ಞಾನ ಚಲನಚಿತ್ರ "ದಿ ಪ್ರೈವೇಟ್ ಲೈಫ್ ಆಫ್ ಪ್ಲಾಂಟ್ಸ್" 21ನೇ ಮಾರ್ಚ್ 2021 ರಂದು ಸಂಜೆ 5:30 ಕ್ಕೆ ಪ್ರದರ್ಶಿತಗೊಳ್ಳುತ್ತಿದೆ. ಪ್ರವೇಶ ಉಚಿತ.

ದಿ.14.03.2021 ರಂದು ಸಂ.4 - 5:30 ರವರೆಗೆ ವಿಜ್ಞಾನ ಕೂಟ - "ಗುರುತ್ವ"       Click here for more..

ಈ ಬಾರಿಯ ವಿಜ್ಞಾನ ಕೂಟದಲ್ಲಿ ಗುರುತ್ವದ ಕುರಿತ ವಿಚಾರಧಾರೆಯು ಆರ್ಕಿಮಿಡೀಸ್ ಅವರ ಕಾಲಮಾನದವರೆಗೂ ಹೇಗೆ ಬದಲಾವಣೆ ಹೊಂದಿತು ಎಂಬುದನ್ನು ಚರ್ಚಿಸಲಾಗುವುದು. ಇತ್ತೀಚೆಗೆ ಪತ್ತೆಯಾದ ಗುರುತದ್ವದ ಅಲೆಗಳು ಮತ್ತು ಭೌತಶಾಸ್ತ್ರ ಹಾಗೂ ಖಗೋಳಶಾಸ್ತ್ರಗಳಿಗೆ ಸಂಬಂಧಿಸಿದಂತೆ ಈ ಅಲೆಗಳ ಪತ್ತೆಯ ಮಹತ್ವದ ಬಗ್ಗೆಯೂ ಇಲ್ಲಿ ಚರ್ಚಿಸಲಾಗುವುದು.

2021 ರ ಏಪ್ರಿಲ್ ತಿಂಗಳಿನಲ್ಲಿ "ದೂರದರ್ಶಕ ಜೋಡಣಾ ಕಮ್ಮಟ"       Click here for more..

1 ರಿಂದ 4 ನೇ ಏಪ್ರಿಲ್ 2021 ರವರೆಗೆ ನಾಲ್ಕು ದಿನಗಳ ದೂರದರ್ಶಕಗಳನ್ನು ಜೋಡಿಸುವ ಕಾರ್ಯಾಗಾರವನ್ನು ಶಾಲೆಗಳು, ವಿಜ್ಞಾನ ಕೇಂದ್ರಗಳು ಮತ್ತು ಸಾರ್ವಜನಿಕರಿಗಾಗಿ ಆಯೋಜಿಸಿದೆ. ಈ ಕಾರ್ಯಾಗಾರದಲ್ಲಿ ಭಾಗವಹಿಸುವವರು 6" ನ್ಯೂಟೋನಿಯನ್ ದೂರದರ್ಶಕವನ್ನು ತಯಾರಿಸಿ ಕೊಂಡೊಯ್ಯಬಹುದಾಗಿದೆ. ಈ ಕಾರ್ಯಾಗಾರದಲ್ಲಿ ಖಗೋಳ ಶಾಸ್ತ್ರ ಮತ್ತು ನ್ಯೂಟೋನಿಯನ್ ದೂರದರ್ಶಕಗಳ ಕುರಿತಾದ ಉಪನ್ಯಾಸಗಳು ಮತ್ತು ಚರ್ಚೆಗಳು ಇರುತ್ತವೆ.

20ನೇ ಮಾರ್ಚ್ 2021 ರಂದು ಸಂಜೆ 5 – 7:30 ರವರೆಗೆ "ಆಕಾಶ ವೀಕ್ಷಣಾ ಕಾರ್ಯಕ್ರಮ"        Click here for more..

ಬೆಂಗಳೂರು ಅಸೋಸಿಯೇಷನ್ ಫಾರ್ ಸೈನ್ಸ್ ಎಜುಕೇಷನ್ ಸಂಸ್ಥೆಯು ಜವಾಹರ್ ಲಾಲ್ ನೆಹರು ತಾರಾಲಯದಲ್ಲಿ ಖಗೋಳ ವೀಕ್ಷಣಾಸಕ್ತರಿಗೆ "ಆಕಾಶ ವೀಕ್ಷಣೆ" ಕಾರ್ಯಕ್ರಮವನ್ನು ಏರ್ಪಡಿಸಿದೆ. ಈ ಕಾರ್ಯಕ್ರಮದಲ್ಲಿ ನಕ್ಷತ್ರಗಳು, ನಕ್ಷತ್ರಪುಂಜಗಳು ಮತ್ತು ಇತರ ಕಾಯಗಳನ್ನು ಗುರುತಿಸುವ ವಿಧಾನಗಳನ್ನು ತಿಳಿಸಲಾಗುವುದು. ಶುಭ್ರ ಆಕಾಶ ದೊರೆತಲ್ಲಿ ಮಾತ್ರ ದೂರದರ್ಶಕದ ಮೂಲಕ ವೀಕ್ಷಿಸಬಹುದಾಗಿದೆ. ನೋಂದಣಿ ಶುಲ್ಕ ತಲಾ ರೂ.150/-.

7ನೇ ಮಾರ್ಚ್ 2021 ರಂದು "ಖಗೋಳ ವಿಜ್ಞಾನ: ಕೇಳಿ - ತಿಳಿ"       Click here for more..

"ಖಗೋಳ ವಿಜ್ಞಾನ: ಕೇಳಿ - ತಿಳಿ" ಎಂಬ ಕಾರ್ಯಕ್ರಮವು 7ನೇ ಮಾರ್ಚ್ 2021 ರಂದು ಸಂಜೆ 5.15 ರಿಂದ 6.15 ರವರೆಗೆ ನಡೆಯುತ್ತಿದೆ. ಖಗೋಳ ವಿಜ್ಞಾನಕ್ಕೆ ಸಂಬಂಧಪಟ್ಟ ಪ್ರಶ್ನೆಗಳನ್ನು ತಾರಾಲಯದ ತಜ್ಞರೊಂದಿಗೆ ಚರ್ಚಿಸಿ ಉತ್ತರವನ್ನು ಕಂಡುಕೊಳ್ಳಬಹುದಾಗಿದೆ. ತಮ್ಮ ಪ್ರಶ್ನೆಗಳನ್ನು ಮೊದಲೇ ಮಿಂಚಂಚೆ(anandmy@taralaya.org)ಯ ಮೂಲಕ ಕಳುಹಿಸಬಹುದಾಗಿದೆ. ಪ್ರವೇಶ ಉಚಿತ.

1 2 3 4 5 6 7 8 9 10 11 12 13 14 15 16 17 NEXT

ಶೀಘ್ರ ಕೊಂಡಿಗಳು

 

ವೆಬ್ಸೈಟ್ ಸಂದರ್ಶಕ ಕೌಂಟರ್

ಸೋಮವಾರ ಮತ್ತು ಎರಡನೇ ಮಂಗಳವಾರದಂದು ರಜೆ