ಡಾ. ಬಿ. ಎಸ್. ಶೈಲಜಾ

ಡಾ. ಬಿ. ಎಸ್. ಶೈಲಜಾ ಅವರ 1994 ರಲ್ಲಿ ಜವಾಹರ್ ಲಾಲ್ ನೆಹರು ತಾರಾಲಯವನ್ನು ಸೇರಿದರು. ತಾರಾಲಯದ ಪ್ರದರ್ಶನಗಳ ತಯಾರಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಸಾಮಾನ್ಯ ಜನತೆಗೆ ಖಗೋಳಶಾಸ್ತ್ರವನ್ನು ಕಲಿಸುವ ನಿಟ್ಟಿನಲ್ಲಿ 3 ದಿನ ಮತ್ತು 5 ದಿನಗಳ ಕಮ್ಮಟಗಳಾದ ‘ಯೂನಿವರ್ಸ್ ಇನ್ ದಿ ಕ್ಲಾಸ್ ರೂಮ್’, ‘ರಾತ್ರಿ ಆಕಾಶದ ಪರಿಚಯ’ ಎಂಬ ಕಾರ್ಯಕ್ರಮಗಳನ್ನು ಆರಂಭಿಸಿದರು. ಪ್ರತಿ ತಿಂಗಳ ಮೊದಲ ಭಾನುವಾರದಂದು ನಡೆಯುತ್ತಿರುವ ಆಕಾಶ ವೀಕ್ಷಣಾ ಕಾರ್ಯಕ್ರಮವಾದ ‘ನಕ್ಷತ್ರ ವೀಕ್ಷಣೆ’ ಯನ್ನೂ ಸಹ 2000 ಇಸವಿಯಲ್ಲಿ ಇವರೇ ಆರಂಭಿಸಿದ್ದಾರೆ. 2000 ಇಸವಿಯಲ್ಲಿ ವಿದ್ಯುಕ್ತವಾಗಿ ಬಿ.ಎಸ್ಸಿ. ವಿದ್ಯಾರ್ಥಿಗಳಿಗೆ ಆರಂಭವಾದ ರೀಪ್ ಕಾರ್ಯಕ್ರಮಕ್ಕೆ ಖಗೋಳಶಾಸ್ತ್ರ ಮತ್ತು ಖಭೌತ ವಿಜ್ಞಾನವನ್ನು ಅವರು ನಿವೃತ್ತಿ ಹೊಂದುವವರೆಗೂ ಬೋದಿಸಿದ್ದಾರೆ. ಹಲವಾರು ವಿದ್ಯಾರ್ಥಿಗಳಿಗೆ ಆಸಕ್ತಿಯುತ ಖಗೋಳ ಪ್ರಾಜೆಕ್ಟ್ ಗಳ ಮಾರ್ಗದರ್ಶನವನ್ನು ನೀಡಿದ್ದಾರೆ.

ಕ್ಲೆಮೆಂಟೈನ್ ಎಂಬ ಗಗನನೌಕೆ ತೆಗೆದ ಚಂದ್ರನ ಮೇಲ್ಮೈ ಚಿತ್ರಗಳ ಸಹಾಯದಿಂದ ಚಂದ್ರನ ಕುಳಿಗಳನ್ನು ಅಭ್ಯಸಿಸಿ ಅವುಗಳ ರಚನೆಯ ಅವಧಿಯನ್ನು ತಿಳಿಯಬಹುದಾಗಿದೆ. ರೀಪ್ ವಿದ್ಯಾರ್ಥಿಗಳು ತಮ್ಮ ಅಧ್ಯಯನದ ಅಂಗವಾಗಿ ವೇಣುಬಾಪು ವೀಕ್ಷಣಾಲಯದಲ್ಲಿ ರೋಹಿತ ದರ್ಶಕದ ಮೂಲಕ ವಿಶ್ಲೇಷಿಸಿದ ಹಲವು ನಕ್ಷತ್ರಗಳ ರೋಹಿತಗಳ ಒಂದು ಭಂಡಾರವೇ ಸೃಷ್ಟಿಯಾಗಿದೆ. ಇವುಗಳಲ್ಲದೆ ಅನೇಕ ಕ್ಷುದ್ರಗ್ರಹ ಮತ್ತು ಧೂಮಕೇತುಗಳನ್ನು ಸಹ ಅಭ್ಯಸಿಸಲಾಗಿದೆ. ಇವುಗಳಲ್ಲಿ ವಿಶೇಷ ಎನ್ನಬಹುದಾದದ್ದು ಚಂದ್ರಗ್ರಹಣ ಸಮಯದಲ್ಲಿ ಪಡೆದ ರೋಹಿತ. ಅವರು ಅನೇಕ ಶೈಕ್ಷಣಿಕ ಸಮಿತಿ, ಪಠ್ಯಪುಸ್ತಕ ಸಮಿತಿ, ಅಧ್ಯಯನ ಸಮಿತಿ ಮತ್ತು ಅನೇಕ ವಿಜ್ಞಾನ ಕೇಂದ್ರ ಮತ್ತು ವಸ್ತುಸಂಗ್ರಹಾಲಯದ ಮಾರ್ಗದರ್ಶನ ಸಮಿತಿಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ.

ಮುನ್ನೂರಕ್ಕೂ ಹೆಚ್ಚು ಜನಪ್ರಿಯಲೇಖನಗಳನ್ನು ಮತ್ತು ಪ್ರಜಾವಾಣಿ ಪತ್ರಿಕೆಯಲ್ಲಿ ಅನೇಕ ಸಾಪ್ತಾಹಿಕ ಅಂಕಣಗಳನ್ನು ಬರೆದಿದ್ದಾರೆ. ಇವರ ‘ನಭಾವಲೋಕನ’ ಎಂಬ ಮಾಸಿಕ ಅಂಕಣ, 1999 ಆಗಸ್ಟ್ ನಿಂದ ಇಂದಿನವರೆಗೆ ಪ್ರಕಟವಾಗುತ್ತಿರುವುದು ಅತ್ಯಂತ ಗಮನಾರ್ಹವಾದುದು. ಇವರು ಹಿರಿಯ ವೈಜ್ಞಾನಿಕಾಧಿಕಾರಿಯಾಗಿ, ಉಪನಿರ್ದೇಶಕರಾಗಿ ನಂತರ 2012 ರಲ್ಲಿನಿರ್ದೇಶಕರಾಗಿ ನೇತೃತ್ವ ವಹಿಸಿದರು. ಕಾರ್ಲ್ ಝೈಸ್ ಕಂಪನಿಯ ಹೈಬ್ರಿಡ್ ಪ್ರೊಜೆಕ್ಷನ್ ಸಿಸ್ಟಮ್ ಅನ್ನು ಆಕಾಶಮಂದಿರಕ್ಕೆ ಅಳವಡಿಸಿದ್ದು ಮಾತ್ರವಲ್ಲದೇ, ಸಹೋದ್ಯೋಗಿಗಳು ಹಾಗೂ ಸ್ಥಳೀಯ ಪ್ರತಿಭಾನ್ವಿತರಸಹಾಯದಿಂದ ಭಾರತದಲ್ಲಿಯೇ ಮೊದಲನೇಯದಾದ ಹೈಬ್ರಿಡ್ ಪ್ರದರ್ಶನವನ್ನು ಯಶಸ್ವಿಯಾಗಿತಯಾರಿಸಲಾಯಿತು.ಇವರ ಆಡಳಿತದ ಸಮಯದಲ್ಲಿ ಸಮಾಂತರಭೂಗೋಳ, ಜಂತರ-ಮಂತರ್, ಪ್ರತಿಗುರುತ್ವ ಕುಟೀರಏಮ್ಸ್ ಕೊಠಡಿ - ಹೀಗೆ ಹಲವು ವಿನೂತನ ಮಾದರಿಗಳು ವಿಜ್ಞಾನವನಕ್ಕೆ ಸೇರ್ಪಡೆಯಾದವು..

ಶೈಲಜಾ ಅವರು ಭೌತವಿಜ್ಞಾನದಲ್ಲಿ ಎಮ್.ಎಸ್ಸಿ.ಯನ್ನು ಬೆಂಗಳೂರು ವಿಶ್ವವಿದ್ಯಾಲಯ ಹಾಗೂ ವೋಲ್ಫ್-ರೇಯೆ ಬೈನರಿ ಸ್ಟಾರ್ಸ್ ವಿಷಯದ ಮೇಲೆ ಪಿ.ಎಚ್ ಯನ್ನು ಭಾರತೀಯ ಖಭೌತ ಸಂಸ್ಥೆಯಲ್ಲಿ ಪಡೆದಿದ್ದಾರೆ. ಇವರ ಆಸಕ್ತಿಯುತ ವಿಷಯಗಳೆಂದರೆನೋವೆ, ವಿಶಿಷ್ಟ ನಕ್ಷತ್ರಗಳು ಹಾಗೂ ಧೂಮಕೇತುಗಳು. ಇವರು ನಿಯತಕಾಲಿಕೆಗಳಲ್ಲಿ 130 ಸಂಶೋಧನಾ ಪ್ರಬಂಧಗಳನ್ನು ಹಾಗೂ 17 ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಖಗೋಳಶಾಸ್ತ್ರದ ಇತಿಹಾಸದ ಕುರಿತು ಅತ್ಯಂತ ಆಸಕ್ತಿ ಹೊಂದಿದ್ದು, ಸದ್ಯದಲ್ಲಿ ಶಿಲಾಶಾಸನಗಳು, 17ನೇ ಶತಮಾನದ ಹಸ್ತಪ್ರತಿಗಳ ಅನುವಾದಮತ್ತು ವಿಶ್ಲೇಷಣೆ, ಸ್ಮಾರಕಗಳು, ಕಲಾಕೃತಿಗಳು ಮತ್ತು ದೇವಾಲಯಗಳ ಖಗೋಳೀಯ ಅಂಶಗಳು– ಈ ವಿಷಯಗಳ ಕುರಿತು ಅಧ್ಯಯನ ಮುಂದುವರೆಸಿದ್ದಾರೆ.

ಅವರ ಕೆಲವು ಪ್ರಕಟಣೆಗಳ ಕೊಂಡಿಯು ಈ ಕೆಳಕಂಡಂತಿದೆ: