ಘಟನಾವಳಿಗಳು

ಗುರು ಮತ್ತು ಶನಿ ಗ್ರಹಗಳ ಅದ್ಭುತ ಯುತಿ      

19ನೇ ಡಿಸೆಂಬರ್ 2020 ರಂದು ತಾರಾಲಯದ ಆವರಣದಿಂದ ಸೆರೆಹಿಡಿದ ಛಾಯಾಚಿತ್ರಗಳು.

ಜೂನ್ 21, 2020 ತಾರೀಖು ಕಂಕಣ ಸೂರ್ಯಗ್ರಹಣದ ಪ್ರಯುಕ್ತ ತಾರಾಲಯದಲ್ಲಿ ಗ್ರಹಣದ ವೀಕ್ಷಣೆಗೆ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿತ್ತು.      

ಗ್ರಹಣದ ಕುರಿತು ಮಾಹಿತಿ, ಪ್ರಾತ್ಯಕ್ಷಿಕೆ ಮತ್ತು ಆನಿಮೇಷನ್ ಗಳ ಸಹಾಯದಿಂದ ನೆರೆದಿದ್ದ ಮಾಧ್ಯಮ ವರದಿಗಾರರಿಗೆ ಗ್ರಹಣದ ಬಗ್ಗೆ ಸಂಕ್ಷಿಪ್ತ ವಿವರಣೆ ನೀಡುವುದರ ಜೊತೆಗೆ ನಾನಾ ಭಾಗಗಳಲ್ಲಿ ಗ್ರಹಣದ ಗೋಚರ, ಪ್ರಮಾಣ ಮತ್ತು ಗೋಚರಣೆಯ ಕಾಲಗಳ ಬಗ್ಗೆ ಮಾಹಿತಿಯನ್ನು ನೀಡಲಾಯಿತು. ತಾರಾಲಯದಲ್ಲಿ ಗ್ರಹಣ ವೀಕ್ಷಣೆಗೆ ಸೂಕ್ತವಾದ ಆರು ದೂರದರ್ಶಕಗಳ ವ್ಯವಸ್ಥೆಯನ್ನು ಮಾಡಲಾಗಿತ್ತು. ಭಾರತೀಯ ಖಭೌತ ಸಂಸ್ಥೆ, ಬೆಂಗಳೂರು, ಇವರ ಸಹಾಯದಿಂದ ಸಿಲೋಸ್ಟ್ಯಾಟ್ ಉಪಕರಣವನ್ನು ಅಳವಡಿಸಿ, ಅದರ ಸಹಾಯದಿಂದ ಪರದೆಯ ಮೇಲೆ ಸೂರ್ಯಗ್ರಹಣದ ದೃಶ್ಯಾವಳಿಗಳನ್ನು ಬಿಂಬಿಸಲಾಯಿತು.

1 2 3 4 5 6 NEXT

ಶೀಘ್ರ ಕೊಂಡಿಗಳು

 

ವೆಬ್ಸೈಟ್ ಸಂದರ್ಶಕ ಕೌಂಟರ್

ಸೋಮವಾರ ಮತ್ತು ಎರಡನೇ ಮಂಗಳವಾರದಂದು ರಜೆ