ಸಾಮಾನ್ಯವಾಗಿ ಕೇಳಲ್ಪಡುವ ಪ್ರಶ್ನೆಗಳು

**ತಾರಾಲಯದ ವಿವಿಧ ಕಾರ್ಯಕ್ರಮಗಳ ಬಗ್ಗೆ ತಿಳಿಯುವುದು ಹೇಗೆ ?

ತಾರಾಲಯದ ಅಂತರ್ಜಾಲ ತಾಣ ಅಥವಾ ಪತ್ರಿಕಾ ಪ್ರಕಟಣೆಗಳನ್ನು ನೋಡಬಹುದು.
'ತಾರಾಲಯದ ಕೂಟ' ಸೇರಿದರೆ ಇನ್ನು ಹೆಚ್ಚಿನ ಉಪಯೋಗವಿದೆ.


**ನನ್ನ ಆರು ವರ್ಷದ ಮಗ ಖಗೋಳಶಾಸ್ತ್ರದಲ್ಲಿ ಆಸಕ್ತಿ ಹೊಂದಿದ್ದಾನೆ. ಅವನು ತಾರಾಲಯದ ಸಹಾಯವನ್ನು ಹೇಗೆ ಅತ್ಯುತ್ತಮವಾಗಿ ಬಳಸಿಕೊಳ್ಳಬಹುದು?

ತಾರಾಲಯದಲ್ಲಿ ಪ್ರತಿ ತಿಂಗಳು ಮೊದಲ ಭಾನುವಾರ "ನಕ್ಷತ್ರ ವೀಕ್ಷಣೆ" ಎಂಬ ಕಾರ್ಯಕ್ರಮವನ್ನು ನಡೆಸುತ್ತೇವೆ . ಮೂರನೇ ಭಾನುವಾರದಂದು ನಾವು ವಿಜ್ಞಾನ ಚಿತ್ರ ಪ್ರದರ್ಶನ ಏರ್ಪಡಿಸುತ್ತೇವೆ. ಇವೆರಡೂ ತುಂಬಾ ಸಹಾಯಕ.


**ನಾವು ಹತ್ತನೇ ತರಗತಿಯಲ್ಲಿನ ೩೦ ಮಕ್ಕಳನ್ನು ಪ್ರದರ್ಶನ ವೀಕ್ಷಣೆಗಾಗಿ ಕರೆತರಲು ಇಚ್ಛಿಸುತ್ತೇವೆ. ಕೇವಲ ೩೦ ಮಕ್ಕಳಿಗೆ ಬುಕಿಂಗ್ ಮಾಡಲು ಸಾಧ್ಯವೇ, ನಿಮ್ಮ ಸಲಹೆಯೇನು.?

ನಿಮ್ಮ ವಿದ್ಯಾರ್ಥಿಗಳನ್ನು ಸಾರ್ವಜನಿಕ ಪ್ರದರ್ಶನಗಳಿಗೆ ಮಧ್ಯಾಹ್ನದ ವೇಳೆ, ವಾರದ ದಿನಗಳಲ್ಲಿ ಕರೆತನ್ನಿ.


**ಬೇಸಿಗೆ ಶಿಬಿರಗಳ ಬಗ್ಗೆ ತಿಳಿಸಿ. ಒಂಭತ್ತು ವರ್ಷದ ನನ್ನ ಮಗನನ್ನು ತಾರಾಲಯದ ಕಾರ್ಯಕ್ರಮಗಳಿಗೆ ನೋಂದಾಯಿಸಬಹುದೇ ?

ಬೇಸಿಗೆಕಾರ್ಯಕ್ರಮಗಳು ಏಪ್ರಿಲ್ ತಿಂಗಳಿನಲ್ಲಿ ಪ್ರಾರಂಭವಾಗುತ್ತದೆ. ನಿಮ್ಮ ಮಗು ಮೂರನೇ ತರಗತಿ ಮುಗಿಸಿದ್ದರೆ, ಚಿಣ್ಣರ ಕಾರ್ಯಕ್ರಮಕ್ಕೆ ನೋಂದಾಯಿಸಬಹುದು.


**ಸಾರ್ವಜನಿಕರಿಗೆ ನಿಮ್ಮ ಗ್ರಂಥಾಲಯ ಬಳಸಲು ಅನುಮತಿಯಿದೆಯೇ ?

ಇಲ್ಲ. ತಾರಾಲಯದಲ್ಲಿ ವರ್ಷ ಪೂರ್ತಿ ನಡೆಯುವ ಕಾರ್ಯಕ್ರಮಗಳಿಗೆ ನೋಂದಾಯಿತರಾದ ವಿದ್ಯಾರ್ಥಿಗಳಿಗೆ ಮಾತ್ರ ಗ್ರಂಥಾಲಯ ಬಳಸಲು ಅನುಮತಿಯಿದೆ.


**ವಿದೇಶದಿಂದ ಬಂದಿರುವ ೧೦ ಮಂದಿಗೆ ಆಸನಗಳನ್ನು ಕಾಯ್ದಿರಿಸುವ ಸೌಲಭ್ಯವಿದೆಯೇ. ? ಆನ್ಲೈನ್ ಬುಕಿಂಗ್ ಸೌಲಭ್ಯವಿದೆಯೇ. ಹತ್ತು ಆಸನಗಳನ್ನು ಕಾಯ್ದಿರಿಸುವಿರಾ?

'ಬುಕ್ ಮೈ ಶೋ' ಅಂತರ್ಜಾಲದ ಮುಖಾಂತರ ನೇರವಾಗಿ ಕಾಯ್ದಿರಿಸುವ ಸೌಲಭ್ಯವಿದೆ.


** ನಾವು ತಾರಾಲಯದ ಆವರಣದಲ್ಲಿ ಎಷ್ಟು ಸಮಯವನ್ನು ಕಳೆಯಬಹುದು?

ಆಕಾಶ ಮಂದಿರದ ಪ್ರದರ್ಶನ: 40 ನಿಮಿಷಗಳು; ನಿರ್ದಿಷ್ಟ ಕಾರ್ಯಕ್ರಮದ ವರ್ಣಮಯ ಪೋಸ್ಟರ್ಗಳೊಂದಿಗೆ ಪ್ರದರ್ಶನ ವೀಕ್ಷಣೆ:15 ನಿಮಿಷಗಳು; ವಿಜ್ಞಾನ ವನಕ್ಕೆ ಭೇಟಿ : 35 ವಿಜ್ಞಾನ ಮಾದರಿಗಳನ್ನು ಪ್ರದರ್ಶಿಸಲಾಗಿದೆ : ಸುಮಾರು 30 ನಿಮಿಷಗಳು; ಅಗತ್ಯವಿರುವ ಒಟ್ಟು ಸಮಯ ಸುಮಾರು ಒಂದೂವರೆ ಗಂಟೆಗಳಿಂದ ಎರಡು ಗಂಟೆಗಳು.

ಶೀಘ್ರ ಕೊಂಡಿಗಳು

 

ವೆಬ್ಸೈಟ್ ಸಂದರ್ಶಕ ಕೌಂಟರ್

ಸೋಮವಾರ ಮತ್ತು ಎರಡನೇ ಮಂಗಳವಾರದಂದು ರಜೆ