ಇತಿಹಾಸ

ತಾರಾಲಯವು 1989ರಲ್ಲಿ ಬೆಂಗಳೂರು ನಗರ ಪಾಲಿಕೆ ಅಂದರೆ ಈಗಿನ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವತಿಯಿಂದ ಸ್ಥಾಪಿಸಲಾದ ಸಂಸ್ಥೆ. ನಂತರ 1992ರಲ್ಲಿ ಸ್ಥಾಪಿತವಾದ ಬೆಂಗಳೂರು ಅಸೋಯೇಷನ್ ಫಾರ್ ಸೈನ್ಸ್ ಎಜುಕೇಷನ್(ಬೇಸ್)ನ ಆಡಳಿತಕ್ಕೆ ತಾರಾಲಯವನ್ನು ವಹಿಸಲಾಯಿತು. ಬೇಸ್ ಸಂಸ್ಥೆಯು ಕರ್ನಾಟಕ ಸೊಸೈಟೀಸ್ ರಿಜಿಸ್ಟ್ರೇಷನ್ ಆಕ್ಟ್ ಅಡಿಯಲ್ಲಿ ನೋಂದಣಿಯಾದ ಸ್ವಾಯತ್ತ ಸಂಸ್ಥೆಯಾಗಿದೆ. ಇದು ಕರ್ನಾಟಕ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯಿಂದ ವಾರ್ಷಿಕ ಅನುದಾನ ಪಡೆಯುತ್ತಿದೆ.

ಬೇಸ್‍ನ ಆಡಳಿತ ಮಂಡಳಿಯು ಪ್ರಖ್ಯಾತ ಶಿಕ್ಷಣ ತಜ್ಞರು, ವಿಜ್ಞಾನಿಗಳು ಮತ್ತು ಕರ್ನಾಟಕ ಸರ್ಕಾರದ ಹಿರಿಯ ಅಧಿಕಾರಿಗಳನ್ನು ಒಳಗೊಂಡಿದೆ. ವಿಜ್ಞಾನವನ್ನು ಜನಪ್ರಿಯಗೊಳಿಸುವ ಕಾರ್ಯಕ್ರಮಗಳು ಮತ್ತು ಅನೌಪಚಾರಿಕ ವಿಜ್ಞಾನ ಶಿಕ್ಷಣದ ಮೂಲಕ ತಾರಾಲಯವು ರಾಷ್ಟ್ರೀಯ ಮಟ್ಟದ ಅತ್ಯುನ್ನತ ತಾರಾಲಯ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ.

ಮಾಜಿ ನಿರ್ದೇಶಕರು

ಪ್ರೊ. ಸಿ. ವಿ. ವಿಶ್ವೇಶ್ವರ - ಸಂಸ್ಥಾಪಕ ನಿರ್ದೇಶಕರು (1989 -1992) (1993-2016)

ಡಾ. ಜಿ. ಎಸ್. ಡಿ. ಬಾಬು – ಭಾರತೀಯ ಖಭೌತ ಸಂಸ್ಥೆಯ ನಿವೃತ್ತ ಮತ್ತು ಎಮ್. ಪಿ. ಬಿರ್ಲಾ ಇನ್ಸ್‍ಟಿಟ್ಯೂಟ್ ಆಫ್ ಫಂಡಮೆಂಟಲ್ ರಿಸರ್ಚ್‍ನ ಹಾಲಿ ನಿರ್ದೇಶಕರು (1992-1993)

ಪ್ರೊ. ಸಿ. ಎಸ್. ಶುಕ್ರೆ – ರಾಮನ್ ಸಂಶೋಧನಾ ಸಂಸ್ಥೆ (2006-2011)

ಡಾ. ಬಿ. ಎಸ್. ಶೈಲಜಾ - ತಾರಾಲಯದ ಪ್ರಸ್ತುತ ಆಹ್ವಾನಿತ ವಿಜ್ಞಾನಿ (2012-2017)

ಶೀಘ್ರ ಕೊಂಡಿಗಳು

 

ವೆಬ್ಸೈಟ್ ಸಂದರ್ಶಕ ಕೌಂಟರ್

ಸೋಮವಾರ ಮತ್ತು ಎರಡನೇ ಮಂಗಳವಾರದಂದು ರಜೆ