
- ಬಿ.ಎಸ್‌ಸಿ. ವಿದ್ಯಾರ್ಥಿಗಳಿಗಾಗಿ ಒಂದು ತಿಂಗಳ ಗಣಿತ ಶಿಬಿರವನ್ನು 2023 ರ ಜೂನ್ 1 ರಿಂದ 30 ರವರೆಗೆ ಬೆ.10 ರಿಂದ 1:30 ರವರೆಗೆ ತಾರಾಲಯದಲ್ಲಿ ಆಯೋಜಿಸಲಾಗಿದೆ
- ಸೂರ್ಯ ನಡುನೆತ್ತಿಗೆ ಬರುವ ಸಮಯದಲ್ಲಿ ‘ಶೂನ್ಯ ನೆರಳಿನ ದಿನ’ವು ಘಟಿಸುತ್ತದೆ. ಈ ಘಟನೆಯು ಬೆಂಗಳೂರಿನಲ್ಲಿ 2023 ಏಪ್ರಿಲ್ 25ರಂದು ಮಧ್ಯಾಹ್ನ 12:17ಕ್ಕೆ ಮತ್ತು 13 ಡಿಗ್ರಿ ಉತ್ತರ ರೇಖಾಂಶದ ಮೇಲಿರುವ ಇತರ ಸ್ಥಳಗಳಲ್ಲಿ ವಿವಿಧ ಸಮಯದಲ್ಲಿ ಈ ಶೂನ್ಯ ನೆರಳಿನ ಘಟನೆಯು ಸಂಭವಿಸುತ್ತದೆ. ಯಾವುದೇ ಲಂಬ ವಸ್ತುವಿನ ನೆರಳು ನೆಲಕ್ಕೆ ಬೀಳುವುದಿಲ್ಲ .
- ತಾರಾಲಯವು ಸಹಾಯಕರ ಹುದ್ದೆಗೆ ಅರ್ಜಿಯನ್ನು ಆಹ್ವಾನಿಸಿದೆ. ಕೊನೆಯ ದಿನಾಂಕ 07.03.2023.
- 21ನೇ ಡಿಸೆಂಬರ್ 2022 ರಂದು ತಾರಾಲಯವು ಹಮ್ಮಿಕೊಂಡಿದ್ದ 'ವಿಜ್ಞಾನ ರಸಪ್ರಶ್ನೆ' ಕಾರ್ಯಕ್ರಮದ ಅಂತಿಮ ಸುತ್ತಿನಲ್ಲಿ ಮೈಸೂರು ವಿಭಾಗದ ಮಾಸ್ಟರ್ ಚಿನ್ಮಯ್ ಜಿ. ಕೆ. ಅವರು ಮೊದಲ ಸ್ಥಾನವನ್ನು ಪಡೆದಿದ್ದಾರೆ.
- "ಹ್ಯೂಮನ್ ಸ್ಪೇಸ್ ಫ್ಲೈಟ್ ಎಕ್ಸ್ಪೋ – 2022" ಅನ್ನು ಇಸ್ರೋ ಸಂಸ್ಥೆಯ ಅಧ್ಯಕ್ಷರಾದ ಶ್ರೀಯುತ ಎಸ್. ಸೋಮನಾಥ್ ಅವರು 21ನೇ ಜುಲೈ 2022 ರಂದು ಉದ್ಘಾಟಿಸಿದರು.
- "ಅಂತಾರಾಷ್ಟ್ರೀಯ ಚಂದ್ರ ದಿನಾಚರಣೆ" ಯ ಕಾರ್ಯಕ್ರಮಗಳನ್ನು ಬೇಸ್ ಸಂಸ್ಥೆಯ ಅಧ್ಯಕ್ಷರಾದ ಶ್ರೀಯು ಎ. ಎಸ್. ಕಿರಣ್ ಕುಮಾರ್ ಅವರು 20ನೇ ಜುಲೈ 2022 ರಂದು ಉದ್ಘಾಟಿಸಿದರು. “ಅಂತರ್ರಾಷ್ಟ್ರೀಯ ಚಂದ್ರ ದಿನಾಚರಣೆ”ಯ ಅಂಗವಾಗಿ ಜವಾಹರಲಾಲ್ ನೆಹರು ತಾರಾಲಯವು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಕ್ಷಮಾತಾ ನಿರ್ಮಾಣ ಕಾರ್ಯಕ್ರಮ ಕಾರ್ಯಾಲಯದ ಸಹಯೋಗದೊಂದಿಗೆ ೨೦ನೇ ಜುಲೈ 2022 ರಂದು ಕಮ್ಮಟ ಮತ್ತು ಉಪನ್ಯಾಸಗಳನ್ನು ಹಮ್ಮಿಕೊಳ್ಳುತ್ತಿದೆ. ಆಸಕ್ತರು ಕಛೇರಿಯಲ್ಲಿ ನೋಂದಾಯಿಸಿ. ಕಾರ್ಯಕ್ರಮಗಳ ಕುರಿತ ಮಾಹಿತಿ ಈ ಕೆಳಕಂಡಂತಿದೆ: ಇಸ್ರೋ ಸಂಸ್ಥೆಯ ಮಾಜಿ ಅಧ್ಯಕ್ಷರು ಹಾಗೂ ಬೇಸ್/ತಾರಾಲಯದ ಅಧ್ಯಕ್ಷರಾದ ಡಾ. ಎ. ಎಸ್. ಕಿರಣ್ ಕುಮಾರ್ ಅವರಿಂದ ಬೆಳಿಗ್ಗೆ 10:30 ಕ್ಕೆ ಉದ್ಘಾಟನೆ. ʼಚಟುವಟಿಕೆಗಳಲ್ಲಿ ಚಂದ್ರʼ: ಬೆಳಿಗ್ಗೆ 11 ರಿಂದ ಮಧ್ಯಾಹ್ನ 1:30 ರವರೆಗೆ ಕಮ್ಮಟ. ಕೊಂಡಿ: https://zoom.us/j/92424390161?pwd=cE9TbU95YXpXSGFFR3YrRGhMMzVMdz09 ತಾರಾಲಯದ ಸಹಾಯಕ ನಿರ್ದೇಶಕರಾದ ಶ್ರೀ ಎಚ್. ಆರ್. ಮಧುಸೂದನ್ ಅವರಿಂದ “ಚಂದ್ರನ ಅಂಗಳದಲ್ಲಿ” ಕುರಿತ ಮೊದಲ ಉಪನ್ಯಾಸ, ಮಧ್ಯಾಹ್ನ 2:30 ಕ್ಕೆ ಕೊಂಡಿ: https://zoom.us/j/95638259291?pwd=OC9kS3FxalpxU0owRzJ1a2srN1hKUT09 ಇಸ್ರೋ ಸಂಸ್ಥೆಯ ವಿಜ್ಞಾನ ಕಾರ್ಯಕ್ರಮ ಕಾರ್ಯಾಲಯದ ನಿರ್ದೇಶಕರಾದ ಡಾ. ತೀರ್ಥ ಪ್ರತಿಮ್ ದಾಸ್ ಅವರಿಂದ “A Journey with the Moon” ಕುರಿತ ಎರಡನೇ ಉಪನ್ಯಾಸ (ಆಂಗ್ಲದಲ್ಲಿ), ಮಧ್ಯಾಹ್ನ 3:30 ಕ್ಕೆ ಕೊಂಡಿ: https://zoom.us/j/96207890119?pwd=cFNEK0FyL0JjeWk1UDV4c0d5bVdYZz09
- 21.06.2020 ರಂದು ಜೆಎನ್‌ಪಿಯಲ್ಲಿ ಭಾಗಶಃ ಸೂರ್ಯಗ್ರಹಣದ ಫೋಟೋಗಳನ್ನು ಸೆರೆಹಿಡಿಯಲಾಗಿದೆ
- "ವಾರ್ಷಿಕ ಸೂರ್ಯಗ್ರಹಣ" 2019 ರ ಡಿಸೆಂಬರ್ 26 ರಂದು ಬೆಂಗಳೂರಿನ ಜವಾಹರ್ ಲಾಲ್ ನೆಹರು ಗ್ರಹದಲ್ಲಿ ಸೆರೆಹಿಡಿಯಲಾಗಿದೆ
- ಸೈನ್ಸ್ ಇನ್ ಆಕ್ಷನ್ - ಪ್ರದರ್ಶನವನ್ನು 30 ಆಗಸ್ಟ್ 2019 ರಂದು ಬ್ಲೂನ ಬಿ ವಿ ಜಗದೀಶ್ ವಿಜ್ಞಾನ ಕೇಂದ್ರದ ಸ್ಥಾಪಕ ನಿರ್ದೇಶಕ ಡಾ.ಕೆ.ಎಸ್.ನಟರಾಜ್ ಉದ್ಘಾಟಿಸಿದರು
- ಡಾ. ಬಿ ಎಸ್ ಶೈಲಾಜಾ ಬರೆದ 'ಆಕಾಶದಲ್ಲಿ ಏನಿದೆ? ಏಕಿದೆ?' ಪುಸ್ತಕವನ್ನು ಶ್ರೀ ಎ ಎಸ್ ಕಿರಣ್ ಕುಮಾರ್ ಅವರು ಮಾರ್ಚ್ 16, 2019 ರಂದು ಪ್ಲಾನೆಟೇರಿಯಂನಲ್ಲಿ ಬಿಡುಗಡೆ ಮಾಡಿದರು
- "ಹ್ಯುಮಾನಿಟೀಸ್ ಜರ್ನಿ ಆಫ್ ಡಿಸ್ಕವರಿ" ಎಂಬ ವಿಶೇಷ ಉಪನ್ಯಾಸ ಮತ್ತು ನಾಸಾದ ಮಾಜಿ ಮುಖ್ಯಸ್ಥ ಪ್ರೊ. ಚಾರ್ಲ್ಸ್ ಬೋಲ್ಡನ್ ಅವರ ಸಂವಾದ ಅಧಿವೇಶನ
- 21.05.2023 ರಂದು ಸಂಜೆ 5:30 ಕ್ಕೆ “ಎಕ್ಸ್ಟ್ರೀಮ್ ಪ್ಲಾನೆಟ್ಸ್” ಎಂಬ ಚಲನಚಿತ್ರವನ್ನು ಪ್ರದರ್ಶಿಸಲಾಗುತ್ತಿದೆ.
- ಬಿ.ಎಸ್‌ಸಿ. ವಿದ್ಯಾರ್ಥಿಗಳಿಗಾಗಿ ʼಫ್ರಮ್ ವೆಬ್ ಆಫ್ ಲೈಫ್ ಟು ಯೂನಿವರ್ಸ್ʼ ಎಂಬ ಬೇಸಿಗೆ ಶಬಿರವನ್ನು 23ನೇ ಮೇ ಯಿಂದ 3ನೇ ಜೂನ್ 2023 ರವರೆಗೆ ಆಯೋಜಿಸಲಾಗಿವೆ. ನೋಂದಣಿ ಮಾಡಲು https://taralaya.org/summer-programmes.html
- 5ನೇ ಮೇ 2023 ರಂದು ರಾತ್ರಿ 8:44 ರಿಂದ ಮಧ್ಯರಾತ್ರಿ 01:01 ರವರೆಗೆ ಪಾರ್ಶ್ವಛಾಯಾಗ್ರಹಣವು ಬೆಂಗಳೂರಿನಲ್ಲಿ ಸಂಭವಿಸುತ್ತಿದೆ. ಚಂದ್ರಗ್ರಹಣವನ್ನು ಬರಿಗಣ್ಣಿನಿಂದ ಅಥವಾ ದೂರದರ್ಶಕದ ಮೂಲಕ ನೋಡಬಹುದು. ತಾರಾಲಯದಲ್ಲಿ ಸಾರ್ವಜನಿಕರಿಗಾಗಿ ಹಲವಾರು ಕಾರ್ಯಕ್ರಮಗಳನ್ನು ಗ್ರಹಣ ದಿನದಂದು ಆಯೋಜಿಸಲಾಗಿದೆ. 2023 ರ ಮೇ 5 ರಂದು ಪಾರ್ಶ್ವಛಾಯಾಗ್ರಹಣದ ನೇರ ಪ್ರಸಾರವನ್ನು ವೀಕ್ಷಿಸಿ - https://youtube.com/live/lcSxnOPx08Y?feature=share
- ತಾರಾಲಯವು ಎಚ್.ಆರ್ ಟ್ರೈನಿ ಕಾರ್ಯಕ್ರಮಕ್ಕಾಗಿ ಪದವೀಧರ ಅಥವಾ ಸೆಕ್ರೆಟೇರಿಯಲ್/ಕಮರ್ಷಿಯಲ್ ಪ್ರಾಕ್ಟೀಸ್ ಡಿಪ್ಲೊಮಾ ಪಡೆದವರಿಂದ ಅರ್ಜಿಗಳನ್ನು ಆಹ್ವಾನಿಸುತ್ತಿದೆ.
- ಕಾಪಿ ವಿತ್ ಕ್ಯೂರಿಯಾಸಿಟಿ ಉಪನ್ಯಾಸವು 16.04.2023 ರಂದು ಸಂಜೆ 4 ಗಂಟೆಗೆ ತಾರಾಲಯದಲ್ಲಿ ನಡೆಯಲಿದೆ.̤
- ತಾರಾಲಕ್ಕೆ ಭೇಟಿ ನೀಡುವ ಜನರಿಗೆ ವಿಜ್ಞಾನ ಪ್ರದರ್ಶಿಕೆಗಳನ್ನು ವಿವರಿಸಲು ಉತ್ಸುಕ ಸ್ವಯಂ ಸೇವಕರನ್ನು ಆಹ್ವಾನಿಸಲಾಗುತ್ತಿದೆ.
- ಮಾಸಿಕ ವಿಜ್ಞಾನ ಚಲನಚಿತ್ರವನ್ನು 23 ಮಾರ್ಚ್ 2023 ರಂದು ಸಂಜೆ 5:30 ಕ್ಕೆ ನಿಗದಿಪಡಿಸಲಾಗಿದೆ. ಪ್ರವೇಶ ಉಚಿತ.
- 2ನೇ ಏಪ್ರಿಲ್ 2023 ರ ಸಂಜೆ 6:30 ಕ್ಕೆ ಆಕಾಶ ವೀಕ್ಷಣಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಶುಲ್ಕ ತಲಾ ರೂ.50/-.
- 2ನೇ ಏಪ್ರಿಲ್ 2023 ರ ಸಂಜೆ 5:15 – 6:15 ರವರೆಗೆ ಖಗೋಳ ವಿಜ್ಞಾನಕ್ಕೆ ಸಂಬಂಧಪಟ್ಟ ಪ್ರಶ್ನೆಗಳನ್ನು ತಾರಾಲಯದ ತಜ್ಞರನ್ನು ಕೇಳಬಹುದು. ಪ್ರವೇಶ ಉಚಿತ.
- “25.02.2023 ರಂದು ನಡೆಯಬೇಕಿದ್ದ 'ಬುಕ್ ಲಾಂಚ್ ಇವೆಂಟ್ ' ಫಾರ್ ಐಥಿಂಕ್ ಬಯಲಾಜಿ ಕಾರ್ಯಕ್ರಮವನ್ನು ಕಾರಣಾಂತರಗಳಿಂದ ಮುಂದೂಡಲಾಗಿದೆ. ಮುಂದಿನ ದಿನಾಂಕವನ್ನು ತಿಳಿಸಲಾಗುವುದು.
- “ಬುಕ್ ಲಾಂಚ್ ಈವೆಂಟ್ ಫಾರ್ ಐಥಿಂಕ್ ಬಯಾಲಜಿ” ಕಾರ್ಯಕ್ರಮವು 25ನೇ ಫೆಬ್ರವರಿ 2023 ರಂದು ಬೆಳಿಗ್ಗೆ 10.30 ಕ್ಕೆ ತಾರಾಲಯದಲ್ಲಿ ನಡೆಯಲಿದೆ. ಜೀವಶಾಸ್ತ್ರ ವಿಷಯದ ಕುರಿತು ವ್ಯಾಸಂಗ ಮಾಡುತ್ತಿರುವ ಹಾಗೂ ಶಿಕ್ಷರು ಈ ಲಿಂಕಿನ ಮೂಲಕ ನೋಂದಾಯಿಸಿ https://forms.gle/1aV1swxs7BneJ5wBA ಪಾಲ್ಗೊಳ್ಳಬಹುದಾಗಿದೆ.
- “ಈ ತಿಂಗಳ ಕಾಪಿ ವಿತ್ ಕ್ಯೂರಿಯಾಸಿಟಿ ಉಪನ್ಯಾಸವು “ವೇಸ್ ಆಫ್ ಕಂಪ್ಯೂಟಿಂಗ್” ವಿಷಯದ ಕುರಿತು 26ನೇ ಫೆಬ್ರವರಿ 2023 ರಂದು ಸಂಜೆ 4 ಗಂಟೆಗೆ ತಾರಾಲಯದಲ್ಲಿ ನಡೆಯಲಿದೆ.
- “ಈ ಬಾರಿಯ ವಿಜ್ಞಾನ ಕೂಟವು “ಧೂಮಕೇತುಗಳು: ಇವುಗಳ ಹುಡುಕಾಟ ಮತ್ತು ಹೆಸರಿಡುವ ಬಗೆ” ಕುರಿತು 12.02.2023 ರಂದು ಸಂಜೆ 4 ಗಂಟೆಗೆ ನಡೆಯಲಿದೆ. ಪ್ರವೇಶ ಉಚಿತ.
- “19.02.2023 ರಂದು ಮಧ್ಯಾಹ್ನ 12.30 ಕ್ಕೆ ʼಸನ್, ಅರೋರೇ ಅಂಡ್ ದಿ ರಿಯಾಲಿಟಿಸ್ ಆಫ್ ರಿಸರ್ಚ್ ಲೈಫ್ʼ ವಿಷಯದ ಕುರಿತು ಪದವಿ ವಿದ್ಯಾರ್ಥಿಗಳಿಗಾಗಿ ಒಂದು ವಿಶೇಷ ಉಪನ್ಯಾಸ. ಪ್ರವೇಶ ಉಚಿತ.
- "ಪಲ್ಸಾರ್ಸ್: ಟೈಮ್ಕೀಪರ್ಸ್ ಆಫ್ ದಿ ಕಾಸ್ಮಾಸ್"
ಯು.ಎಸ್.ಎ. ನ ವೆಸ್ಟ್ ವರ್ಜೀನಿಯಾ ಯೂನಿವರ್ಸಿಟಿಯ ಫಿಸಿಕ್ಸ್ ಅಂಡ್ ಅಸ್ಟ್ರಾನಮಿಯ ಎಬರ್ಲಿ ಡಿಸ್ಟಿಂಗ್ವಿಷ್ಡ್ ಪ್ರೊಫೆಸರ್ ಆದ ಪ್ರೊ. ಮೌರಾ ಮೆಕ್ಲಾಫಿನ್ ಅವರಿಂದ 29ನೇ ಜನವರಿ 2023 ರಂದು ಸಂಜೆ 4 ಗಂಟೆಗೆ ತಾರಾಲಯದಲ್ಲಿ ಆಯೋಜಿಸಲಾಗಿದೆ. - “೧ನೇ ಫೆಬ್ರವರಿ 2023 ರಂದು ರಾತ್ರಿ ೧೦ ಗಂಟೆಯಿಂದ ಮುಂಜಾವು ೪:೩೦ ರವರೆಗೆ ರಾತ್ರಿ ಆಕಾಶ ವೀಕ್ಷಣಾ ಕಾರ್ಯಕ್ರಮವನ್ನು ತಾರಾಲಯವು ಹಮ್ಮಿಕೊಂಡಿದೆ. ಈ ಕಾರ್ಯಕ್ರಮವು ರಾತ್ರಿ ಆಕಾಶ ಪರಿಚಯ, ಬರಿಗಣ್ಣಿನ ವೀಕ್ಷಣೆ, ಜೆಮಿನಿಡ್ಸ್ ಉಲ್ಕಾವೃಷ್ಟಿ ವೀಕ್ಷಣೆಯನ್ನು ಒಳಗೊಂಡಿದೆ. ಶುಲ್ಕ ತಲಾ ರೂ.೫೦೦/-. ೧೩ ವರ್ಷ ಮೇಲ್ಪಟ್ಟ ಆಸಕ್ತರು [email protected] ಕ್ಕೆ ಇಮೇಲ್ ಕಳುಹಿಸುವ ಮೂಲಕ ನೋಂದಾಯಿಸಬಹುದು.
- “27ನೇ ಜನವರಿ 2023 ರಿಂದ ಸಂಜೆ 4 ರಿಂದ 7 ರವರೆಗೆ ಮೂರು ದಿನಗಳ ಕಮ್ಮಟವನ್ನು ಆಯೋಜಿಸಲಾಗಿದೆ. ಈ ಕಾರ್ಯಕ್ರಮವು ಖಗೋಳ ಶಾಸ್ತ್ರಕ್ಕೆ ಸಂಬಂಧಿಸಿದ ಚರ್ಚೆ, ಮಾದರಿಗಳ ನಿದರ್ಶನ ಮತ್ತು ಆಕಾಶ ಮಂದಿರದ ಒಳಗೆ ಮತ್ತು ಸಾಧ್ಯವಾದಲ್ಲಿ ನೈಜ ಆಕಾಶದಲ್ಲಿಯೂ ನಕ್ಷತ್ರ ಪುಂಜಗಳನ್ನು ಗುರುತಿಸುವುದು ಮೊದಲಾದ ಚಟುವಟಿಕೆಗಳನ್ನು ಒಳಗೊಂಡಿರುತ್ತದೆ.
- “ಹಗಲಿನ ಖಗೋಳಶಾಸ್ತ್ರ ಚಟುವಟಿಕೆಗಳು” ಎಂಬ ಒಂದು ದಿನದ ಕಮ್ಮಟವನ್ನು ಬಾಲಕಿಯರಿಗಾಗಿ 20ನೇ ಜನವರಿ 2023 ರಂದು ಆಯೋಜಿಸಲಾಗಿದೆ. ಪ್ರವೇಶ ಉಚಿತ. ಭಾಗವಹಿಸಲಿಚ್ಛಿಸುವವರು [email protected] ಗೆ ತಮ್ಮ ವಿವರಗಳನ್ನು ಕಳುಹಿಸಬಹುದಾಗಿದೆ.
- ಜಯನಗರದ ನ್ಯಾಷನಲ್ ಕಾಲೇಜಿನ ಬಿ. ವಿ. ಜಗದೀಶ್ ವಿಜ್ಞಾನ ಕೇಂದ್ರದ ಸಹಯೋಗದೊಂದಿಗೆ 2023 ರ ಜನವರಿ 6 ರಿಂದ 8 ರವರೆಗೆ “ವಿಜ್ಞಾನ ಪ್ರದರ್ಶನ”ವನ್ನು ಆಯೋಜಿಸಲಾಗುತ್ತಿದೆ. ಎಲ್ಲರಿಗೂ ಸ್ವಾಗತ.
- ಈ ತಿಂಗಳ ವಿಜ್ಞಾನ ಕೂಟವು ʼಆದಿತ್ಯ ಎಲ್1 ಮಿಷನ್ʼ ಕುರಿತು 8ನೇ ಜನವರಿ 2023 ರಂದು ಸಂಜೆ 4 ರಿಂದ 5:30 ರವರೆಗೆ ನಡೆಯಲಿದೆ. ಪ್ರವೇಶ ಉಚಿತ.
- 1ನೇ ಜನವರಿ 2023 ರ ಸಂಜೆ 6:30 ಕ್ಕೆ ಆಕಾಶ ವೀಕ್ಷಣಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಶುಲ್ಕ ತಲಾ ರೂ.50/-.
- 1ನೇ ಜನವರಿ 2023 ರ ಸಂಜೆ 6:30 ಕ್ಕೆ ಆಕಾಶ ವೀಕ್ಷಣಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಶುಲ್ಕ ತಲಾ ರೂ.50/-.
- 1ನೇ ಜನವರಿ 2023 ರ ಸಂಜೆ 5:15 – 6:15 ರವರೆಗೆ ಖಗೋಳ ವಿಜ್ಞಾನಕ್ಕೆ ಸಂಬಂಧಪಟ್ಟ ಪ್ರಶ್ನೆಗಳನ್ನು ತಾರಾಲಯದ ತಜ್ಞರನ್ನು ಕೇಳಬಹುದು. ಪ್ರವೇಶ ಉಚಿತ.
- ವಿಜ್ಞಾನ ಕೂಟ 11.12.2022 ಸಂಜೆ 4 ಗಂಟೆಗೆ̤ ಈ ಬಾರಿಯ ವಿಜ್ಞಾನ ಕೂಟದಲ್ಲಿ ಮರಳು ಮತ್ತಿತರ ಗ್ರಾನುಲಾರ್ ವಸ್ತುಗಳಲ್ಲಿ ಕಂಡುಬರುವ ಕೆಲವು ವಿಶಿಷ್ಟ ವಿದ್ಯಮಾನಗಳನ್ನು ನಿದರ್ಶನಗಳ ಮೂಲಕ ಚರ್ಚಿಸಲಾಗುವುದು. ಪ್ರವೇಶ ಉಚಿತ.
- ತಾರಾಲಯದಲ್ಲಿ ರಾತ್ರಿ ಆಕಾಶ ವೀಕ್ಷಣೆ - (ನೋಂದಣಿ ಮುಕ್ತಾಯವಾಗಿದೆ.) : ೧೩ನೇ ಡಿಸೆಂಬರ್ ೨೦೨೨ ರಂದು ರಾತ್ರಿ ೧೦ ಗಂಟೆಯಿಂದ ಮುಂಜಾವು ೪:೩೦ ರವರೆಗೆ ರಾತ್ರಿ ಆಕಾಶ ವೀಕ್ಷಣಾ ಕಾರ್ಯಕ್ರಮವನ್ನು ತಾರಾಲಯವು ಹಮ್ಮಿಕೊಂಡಿದೆ. ಈ ಕಾರ್ಯಕ್ರಮವು ರಾತ್ರಿ ಆಕಾಶ ಪರಿಚಯ, ಬರಿಗಣ್ಣಿನ ವೀಕ್ಷಣೆ, ಜೆಮಿನಿಡ್ಸ್ ಉಲ್ಕಾವೃಷ್ಟಿ ವೀಕ್ಷಣೆಯನ್ನು ಒಳಗೊಂಡಿದೆ. ಶುಲ್ಕ ತಲಾ ರೂ.೫೦೦/-. ೧೩ ವರ್ಷ ಮೇಲ್ಪಟ್ಟ ಆಸಕ್ತರು [email protected] ಕ್ಕೆ ಇಮೇಲ್ ಕಳುಹಿಸುವ ಮೂಲಕ ನೋಂದಾಯಿಸಬಹುದು.
- ತಾರಾಲಯವು Junior Outreach Coordinator ಮತ್ತು Junior Education Assistant ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸುತ್ತಿದೆ. ಕೊನೆಯ ದಿನಾಂಕ 11ನೇ ಜನವರಿ 2023.
- ಜವಾಹರ್ಲಾಲ್ ನೆಹರು ತಾರಾಲಯವು ಅಮೃತ ಮಹೋತ್ಸವದ ಆಚರಣೆಯ ಅಂಗವಾಗಿ ಗ್ರಾಮಾಂತರ ಪ್ರದೇಶದ ಸರ್ಕಾರಿ ಶಾಲೆಗಳಲ್ಲಿ “ರಾತ್ರಿ ಆಕಾಶ ಪರಿಚಯ” ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಿದೆ. ಆಸಕ್ತ ಶಾಲೆಗಳು [email protected], [email protected] ಗೆ ತಮ್ಮ ಕೋರಿಕೆಯನ್ನು ಕಳುಹಿಸಬಹುದು.
- ಜವಾಹರ್ಲಾಲ್ ನೆಹರು ತಾರಾಲಯವು ವಿಶೇಷ ಚೇತನರಿಗಾಗಿ ಎರಡು ತಂಡಗಳ ಒಂದು ದಿನದ ಕಮ್ಮಟವನ್ನು ೭ ಮತ್ತು ೮ನೇ ಡಿಸೆಂಬರ್ ೨೦೨೨ ರಂದು ಬೆಳಿಗ್ಗೆ ೧೦:೩೦ ರಿಂದ ಮಧ್ಯಾಹ್ನ ೩:೩೦ ರವರೆಗೆ ಆಯೋಜಿಸುತ್ತಿದೆ. ಆಸಕ್ತರು [email protected] ಗೆ ಸಂದೇಶ ಕಳುಹಿಸುವ ಮೂಲಕ ನೋಂದಾಯಿಸಬಹುದು. ಪ್ರವೇಶ ಉಚಿತ ಮತ್ತು ಮೊದಲು ಬಂದವರಿಗೆ ಆದ್ಯತೆ.
- ವಿಜ್ಞಾನ ಕೂಟ
- ತಾರಾಲಯದಲ್ಲಿ ರಾತ್ರಿ ಆಕಾಶ ವೀಕ್ಷಣೆ
೧೭ನೇ ನಂಬರ್ ೨೦೨೨ ರಂದು ರಾತ್ರಿ ೧೦ ಗಂಟೆಯಿಂದ ಮುಂಜಾವು ೪:೩೦ ರವರೆಗೆ ರಾತ್ರಿ ಆಕಾಶ ವೀಕ್ಷಣಾ ಕಾರ್ಯಕ್ರಮವನ್ನು ತಾರಾಲಯವು ಹಮ್ಮಿಕೊಂಡಿದೆ. ಈ ಕಾರ್ಯಕ್ರಮವು ರಾತ್ರಿ ಆಕಾಶ ಪರಿಚಯ, ಬರಿಗಣ್ಣಿನ ವೀಕ್ಷಣೆ, ಲಿಯೊನಿಡ್ ಉಲ್ಕಾವೃಷ್ಟಿ ವೀಕ್ಷಣೆಯನ್ನು ಒಳಗೊಂಡಿದೆ. ಶುಲ್ಕ ತಲಾ ರೂ.೫೦೦/-. ೧೩ ವರ್ಷ ಮೇಲ್ಪಟ್ಟ ಆಸಕ್ತರು [email protected] ಕ್ಕೆ ಇಮೇಲ್ ಕಳುಹಿಸುವ ಮೂಲಕ ನೋಂದಾಯಿಸಬಹುದು. - ವಿಜ್ಞಾನ ಪ್ರದರ್ಶನ : 18-10-2022 ದಿಂದ 20-10-2022
2022 ರ ನವಂಬರ್ 18 ರಿಂದ 20 ರವರೆಗೆ ʼವಿಜ್ಞಾನ ಪ್ರದರ್ಶನʼವನ್ನು ತಾರಾಲಯದಲ್ಲಿ ಏರ್ಪಡಿಸಲಾಗಿದೆ. ಆಸಕ್ತ ಶಾಲೆಗಳು ಮಾದರಿಗಳನ್ನು ಪ್ರದರ್ಶಿಸಲು ಕಛೇರಿಯನ್ನು ಸಂಪರ್ಕಿಸಿ.
ನೋಂದಣಿ ಅರ್ಜಿ
ಕೊನೆಯ ದಿನಾಂಕ: 10.11.2022 - ಪಾರ್ಶ್ವ ಸೂರ್ಯಗ್ರಹಣ ೨೦೨೨ ರ ಅಕ್ಟೋಬರ್ ೨೫ ರಂದು ಬೆಂಗಳೂರಿನಲ್ಲಿ ಸಂಜೆ ೫:೧೨ ರಿಂದ ೫:೫೫ ವರೆಗೆ ಗೋಚರಿಸಲಿದೆ. ಸೂರ್ಯಾಸ್ತ ಸಂಜೆ ೫:೫೫ . ಪಶ್ಚಿಮದ ದಿಕ್ಕಿನಲ್ಲಿ ಗ್ರಹಣವನ್ನು ವೀಕ್ಷಿಸಬಹುದಾಗಿದೆ. ಗ್ರಹಣವನ್ನು ಸುರಕ್ಷಿತವಾಗಿ ವೀಕ್ಷಿಸಲು ಸೌರ ಕನ್ನಡಕದ ಬಳಕೆ ಹೆಚ್ಚು ಸೂಕ್ತ. ದೂರದರ್ಶಕವನ್ನು ಬಳಸುವವರು ಪರದೆ ಮೇಲೆ ಸೂರ್ಯನ ಬಿಂಬ ಮೂಡುವಂತೆ ವ್ಯವಸ್ಥೆಯನ್ನು ಮಾಡಿ ವೀಕ್ಷಿಸುವುದು ಹೆಚ್ಚು ಸುರಕ್ಷಿತ.
- “ಬಲ ಮತ್ತು ಒತ್ತಡ” ವಿಷಯದ ಕುರಿತು ಒಂದು ದಿನದ ಕಾರ್ಯಾಗಾರವನ್ನು ಪ್ರೌಢಶಾಲಾ ಶಿಕ್ಷಕರಿಗಾಗಿ ೧೫ನೇ ಸೆಪ್ಟೆಂಬರ್ ೨೦೨೨ ರಂದು ಬೆ.೧೦:೩೦ ರಿಂದ ೩”೩೦ ರವರೆಗೆ ನಡೆಯಲಿದೆ. ನೋಂದಣಿ ಕೊಂಡಿ: https://in.bookmyshow.com/events/forces-and-pressure/ET00339412
- ಶಿಕ್ಷಕರ ದಿನಾಚರಣೆಯನ್ನು ೧೭ನೇ ಸೆಪ್ಟೆಂಬರ್ ೨೦೨೨ ಕ್ಕೆ ಮುಂದೂಡಲಾಗಿದೆ. ವಿವರಗಳನ್ನು ಸದ್ಯದಲ್ಲೇ ಪ್ರಕಟಿಸಲಾಗುವುದು.
- ತಿಂಗಳ ವಿಜ್ಞಾನ ಕೂಟ ಕಾರ್ಯಕ್ರಮವು ʼಗಣಿತ ವಿನೋದʼ ವಿಷಯದ ಕುರಿತು ೧೧ನೇ ಸೆಪ್ಟೆಂಬರ್ ೨೦೨೨ ರಂದು ಸಂಜೆ ೪ ರಿಂದ ೫:೩೦ ರವರೆಗೆ ನಡೆಯಲಿದೆ. ಪ್ರವೇಶ ಉಚಿತ.
- ಆಕಾಶ ವೀಕ್ಷಣೆ
- ಆಸ್ಟ್ರೋಸಾಟ್ ಅವರಿಂದ ಹೊಸ ಅನ್ವೇಷಣೆ
- ವರ್ಗಕ್ಕಾಗಿ ಪಠ್ಯಕ್ರಮ ಆಧಾರಿತ ವೀಡಿಯೊ
ಬೆಂಗಳೂರು ಅಸೋಸಿಯೇಷನ್ ಫಾರ್ ಸೈನ್ಸ್ ಎಜುಕೇಷನ್ (ಬೇಸ್)
ಬೆಂಗಳೂರು ಅಸೋಸಿಯೇಷನ್ ಫಾರ್ ಸೈನ್ಸ್ ಎಜುಕೇಷನ್ (ಬೇಸ್) ಸಂಸ್ಥೆಯ ಧ್ಯೇಯ ವಿಜ್ಞಾನವನ್ನು ಜನಪ್ರಿಯಗೊಳಿಸುವುದು ಮತ್ತು ಅನೌಪಚಾರಿಕ ವಿಜ್ಞಾನ ಶಿಕ್ಷಣಗಳನ್ನು ಪರಿಚಯಿಸುವುದಾಗಿದೆ. ಇದರೊಂದಿಗೆ ಜವಾಹರ್ ಲಾಲ್ ನೆಹರು ತಾರಾಲಯ (ಜನೆತಾ) ದಲ್ಲಿ ಬೇಸ್ ತನ್ನ ವೈಜ್ಞಾನಿಕ ಕೇಂದ್ರವನ್ನು ಸ್ಥಾಪಿಸಿದೆ. ಎಲ್ಲ ಹಂತಗಳಲ್ಲೂ ಅನೌಪಚಾರಿಕ ವಿಜ್ಞಾನ ಶಿಕ್ಷಣದ ಅರಿವನ್ನು ಮೂಡಿಸುವಲ್ಲಿ ಈ ಸಂಸ್ಥೆಯು ಕೇಂದ್ರಬಿಂದುವಾಗಿ ಹೊರಹೊಮ್ಮಿದೆ.
ವಿಜ್ಞಾನ ಶಿಕ್ಷಣ
ಸಂಶೋಧನೆ ಮತ್ತು ಬೋಧನೆಯಲ್ಲಿ ವೃತ್ತಿಯನ್ನು ಮುಂದುವರೆಸಲು ವಿಜ್ಞಾನ ವಿದ್ಯಾರ್ಥಿಗಳಲ್ಲಿ ಸೃಜನಶೀಲ ಪ್ರತಿಭೆಗಳನ್ನು ಗುರುತಿಸಿ ಪೋಷಿಸುವ ಮತ್ತು ಎಲ್ಲಾ ಹಂತಗಳಲ್ಲಿ ಗುಣಮಟ್ಟದ ವಿಜ್ಞಾನ ಶಿಕ್ಷಣವನ್ನು ನೀಡುವುದು..
ಮತ್ತಷ್ಟು ಓದಿವಿಜ್ಞಾನವನ್ನು ಜನಪ್ರಿಯಗೊಳಿಸುವುದು
ಹಗಲು ಆಕಾಶ ಮಂದಿರವು ತಾರಾಲಯದ ಬಹುಮುಖ್ಯ ಆಕರ್ಷಣೆಯಾಗಿದೆ. 15 ಮೀ. ಅರ್ಧಗೋಳಾಕಾರದ ಮೇಲೆ ಪ್ರೊಜೆಕ್ಟರ್‍ಗಳ ಸಹಾಯದಿಂದ ಪ್ರದರ್ಶಿಸಲಾಗುತ್ತದೆ.
ಮತ್ತಷ್ಟು ಓದಿಪ್ರಸ್ತುತ ಪ್ರದರ್ಶನಗಳು
ನಮ್ಮ ಸೌರವ್ಯೂಹ - (ಸಾರಾಂಶ)
ಕನ್ನಡ ಮ. 2:30
ಆಂಗ್ಲ ಮ.12:30
ಬಾನಂಗಳದ ಬಾಣಬಿರುಸು - (ಸಾರಾಂಶ)
ಕನ್ನಡ : ಮಧ್ಯಾಹ್ನ 3:30
ಆಂಗ್ಲ : ಸಂಜೆ 4:30
ಶನಿವಾರ ಮತ್ತು ಭಾನುವಾರಗಳಂದು ಹೆಚ್ಚುವರಿ ಪ್ರದರ್ಶನ:
ಗಗನಯಾನದ ನವೋದಯ – (ಸಾರಾಂಶ)
ಕನ್ನಡ: ಬೆಳಿಗ್ಗೆ 11:30
ಆಂಗ್ಲ: ಬೆಳಿಗ್ಗೆ 10:30

ಕ್ಯಾಂಪಸ್ ಯೋಜನೆ
ಜವಾಹರ್ ಲಾಲ್ ನೆಹರು ತಾರಾಲಯವು ನಗರದ ಹೃದಯ ಭಾಗದಲ್ಲಿದೆ; ನಗರದ ರೈಲ್ವೇ ನಿಲ್ದಾಣದಿಂದ ಕೇವಲ 2 ಕಿ.ಮೀ. ದೂರದಲ್ಲಿ.

ವಿಕಲಚೇತನರ ಮಾಹಿತಿಗಾಗಿ
ನಮ್ಮ ಕ್ಯಾಂಪಸ್ ಅನ್ನು ವಿಕಲಚೇತನರ ಸ್ನೇಹಪರವಾಗಿಸಲು ನಾವು ಶ್ರಮಿಸಿದ್ದೇವೆ.

ಸೌಲಭ್ಯಗಳು
ಆವರಣದಲ್ಲಿ ಉತ್ತಮ ವಾಹನ ನಿಲುಗಡೆ ಸ್ಥಳವಿದೆ, ನಂದಿನಿ ಮಳಿಗೆಯಲ್ಲಿ ಸಿಹಿತಿನಿಸುಗಳು ಮತ್ತು ಪಾನೀಯಗಳನ್ನು ಆನಂದಿಸಬಹುದು.

ಎಫ್. ಎ.ಕ್ಯೂ
ನಿಮ್ಮ ಸಾಮಾನ್ಯ ಪ್ರಶ್ನೆಗಳಿಗೆ ನಾವು ಉತ್ತರಗಳನ್ನು ಪಟ್ಟಿ ಮಾಡಿದ್ದೇವೆ.

ತಾರಾಲಯವನ್ನು ತಲುಪುವುದು ಹೇಗೆ
ನಗರದ ಹೃದಯಭಾಗದಲ್ಲಿರುವ ತಾರಾಲಯವನ್ನು ತಲುಪುವುದು ತುಂಬಾ ಸುಲಭ.
