ತಾರಾಲಯದ ಸದಸ್ಯತ್ವ ಕೂಟ

ಸಾರ್ವಜನಿಕರಿಗೆ ಸದಸ್ಯತ್ವ

ಸಾರ್ವಜನಿಕರಿಗೆ ಆಸಕ್ತಿದಾಯಕವಾದ ಅನೇಕ ಚಟುವಟಿಕೆಗಳನ್ನು ತಾರಾಲಯವು ವರ್ಷದುದ್ದಕ್ಕೂ ಆಯೋಜಿಸುತ್ತದೆ.

ಪತ್ರಿಕಾ ಪ್ರಕಟಣೆ ಹಾಗೂ ಜಾಲತಾಣಗಳಲ್ಲೂ ಮಾಹಿತಿ ಲಭ್ಯವಿರುತ್ತದೆ. ಸಾರ್ವಜನಿಕರು ವಾರ್ಷಿಕ ರೂ.200/- ಚಂದಾಹಣ ಪಾವತಿಸಿ ಕೂಟದ ಸದಸ್ಯರಾಗಬಹುದು.

ತಾರಾಲಯದ ಆಸಕ್ತಿದಾಯಕ ಚಟುವಟಿಕೆಗಳ ಬಗ್ಗೆ ಕೂಟದ ಸದಸ್ಯರಿಗೆ ಮಿಂಚಂಚೆ (ಇಮೇಲ್) ಮೂಲಕ ತಿಳಿಸಲಾಗುವುದು. ಇದಲ್ಲದೆ, ಆಕಾಶ ಮಂದಿರದ ಪ್ರವೇಶಕ್ಕಾಗಿ 2 ಉಚಿತ ಟಿಕೆಟ್‍ಗಳು ಮತ್ತು 20 ರಿಯಾಯಿತಿ ಕೂಪನ್‍ಗಳು ನೀಡಲಾಗುವುದು.


ಶಾಲಾ ಸದಸ್ಯತ್ವ

ಶಾಲಾ ಶಿಕ್ಷಕರು, ವಿದ್ಯಾರ್ಥಿಗಳಿಗೆ ತಾರಾಲಯವು ಹಲವಾರು ಶೈಕ್ಷಣಿಕ ಚಟುವಟಿಕೆಗಳು ಹಾಗೂ ವಿಜ್ಞಾನ ಪ್ರದರ್ಶನಗಳನ್ನು ಏರ್ಪಡಿಸುತ್ತದೆ. ಇವೆಲ್ಲದರ ಸಂಪೂರ್ಣ ಉಪಯೋಗ ಪಡೆಯಲು ಶಾಲೆಗಳು ರೂ.2500/- ವಾರ್ಷಿಕ ಚಂದಾಹಣ ಪಾವತಿಸಿ ಶಾಲಾ ಸದಸ್ಯತ್ವ ಪಡೆಯಬಹುದು. ಸದಸ್ಯತ್ವ ಹೊಂದಿರುವ ಶಾಲೆಗಳು ಪಡೆಯುವ ಸೌಲಭ್ಯಗಳು ಕೆಳಕಂಡಂತಿವೆ :-

  • ಖಗೋಳ ವಿಜ್ಞಾನದ ಮಾದರಿಗಳನ್ನು ಮತ್ತು ವಿಜ್ಞಾನ ಚಲನಚಿತ್ರಗಳನ್ನು ಎವಲು ಪಡೆಯಬಹುದು.
  • ಆಕಾಶ ಮಂದಿರದ ಪ್ರದರ್ಶನಕ್ಕಾಗಿ ರೂ.1500/- ರ ರಿಯಾಯಿತಿ ಕೂಪನ್ ಅನ್ನು ನೀಡಲಾಗುವುದು. ಈ ಕೂಪನ್ ಅನ್ನು ಇಡೀ ಆಕಾಶ ಮಂದಿರವನ್ನು ಕಾಯ್ದಿರಿಸಲು ಬಳಸಬಹುದು ಅಥವಾ ತಾರಾಲಯದ ಪ್ರದರ್ಶನ ಒಂದಕ್ಕೆ 50 ವಿದ್ಯಾರ್ಥಿಗಳಿಗೆ ಉಚಿತ ಪ್ರವೇಶಕ್ಕೆ ಬಳಸಬಹುದು.
  • ಸದಸ್ಯತ್ವ ಹೊಂದಿರುವ ಶಾಲೆಯಲ್ಲಿ ಅಥವಾ ತಾರಾಲಯದಲ್ಲಿ ವೈಜ್ಞಾನಿಕ ವಿಷಯಗಳ ಬಗ್ಗೆ ಒಂದು ಬಾರಿ ಅತಿಥಿ ಉಪನ್ಯಾಸವನ್ನು ಏರ್ಪಡಿಸುವ ಅವಕಾಶವಿದೆ.
  • ತಾರಾಲಯದಲ್ಲಿ ಲಭ್ಯವಿರುವ ಸಲಕರಣೆಗಳ ಸಹಾಯದಿಂದ ಬುಧವಾರದಿಂದ ಶುಕ್ರವಾರದವರೆಗೆ ಸದಸ್ಯತ್ವ ಶಾಲೆಯ ಬೋಧಕರು ಬೋಧನಾ ಸಭೆ ಆಯೋಜಿಸಲು ಅವಕಾಶವಿದೆ.
  • ಶೈಕ್ಷಣಿಕ ಗ್ರಂಥಾಲಯ ಬಳಸಬಹುದು
  • ಶಿಕ್ಷಕರು ಹಾಗೂ ವಿದ್ಯಾರ್ಥಿಗಳಿಗಾಗಿ ತಾರಾಲಯದಲ್ಲಿ ನಡೆಸಲಾಗುವ ಕಮ್ಮಟಗಳು ಹಾಗೂ ವಿಜ್ಞಾನ ಪ್ರದರ್ಶನಗಳ ಬಗ್ಗೆ ಮಾಹಿತಿ ದೊರೆಯುವುದು.
  • ಕೂಟದ ಸದಸ್ಯತ್ವ ಫಲಕಗಳನ್ನು ಪ್ರದರ್ಶಿಸಲು ಅನುಮತಿ ಇದೆ.
  • ಶಿಕ್ಷಕರಿಗಾಗಿ ಆಯೋಜಿಸುವ ಕಮ್ಮಟಗಳಲ್ಲಿ, ಸದಸ್ಯ ಶಾಲೆಯ ಶಿಕ್ಷಕರಿಗೆ ನೋಂದಣಿ ಶುಲ್ಕದ ಮೇಲೆ 50% ರಿಯಾಯಿತಿ ದೊರೆಯುವುದು.

ಸದಸ್ಯತ್ವದ ಅರ್ಜಿ

ಶೀಘ್ರ ಕೊಂಡಿಗಳು

 

ವೆಬ್ಸೈಟ್ ಸಂದರ್ಶಕ ಕೌಂಟರ್

ಸೋಮವಾರ ಮತ್ತು ಎರಡನೇ ಮಂಗಳವಾರದಂದು ರಜೆ