ಅವಲೋಕನ

ಜವಾಹರ್ ಲಾಲ್ ನೆಹರು ತಾರಾಲಯವು ಬೇಸ್‍ನ ಆಡಳಿತಕ್ಕೆ ಒಳಪಟ್ಟಿದೆ. ಅನೌಪಚಾರಿಕ ವಿಜ್ಞಾನ ಶಿಕ್ಷಣ ಮತ್ತು ವಿಜ್ಞಾನವನ್ನು ಜನಪ್ರಿಯಗೊಳಿಸುವುದು ಈ ಸಂಸ್ಥೆಯ ಗುರಿಯಾಗಿದೆ.

1989ರಲ್ಲಿ ಆರಂಭವಾದ ತಾರಾಲಯವು ಭಾರತದಲ್ಲಿ ಪ್ರಮುಖ ಸಂಸ್ಥೆಯಾಗಿ ಹೊರಹೊಮ್ಮಿದೆ. ಪ್ರತಿವರ್ಷ ಸರಿಸುಮಾರು 2.5 ಲಕ್ಷ ವೀಕ್ಷಕರನ್ನು ಇದು ಆಕರ್ಷಿಸುತ್ತಿದೆ. ಇದರಲ್ಲಿ ಬಹುಪಾಲು ವಿದ್ಯಾರ್ಥಿಗಳೇ ಆಗಿದ್ದಾರೆ. 15.0 ಮೀ. ನ ಗುಮ್ಮಟ ಹೊಂದಿರುವ ಆಕಾಶಮಂದಿರಕ್ಕೆ ಅತ್ಯಾಧುನಿಕ ಹೈಬ್ರಿಡ್ ಪ್ರೊಜೆಕ್ಷನ್ ಸಿಸ್ಟಮ್ ಅನ್ನು ಅಳವಡಿಸಲಾಯಿತು. ತಾರಾಲಯದಲ್ಲಿ ಆಕಾಶಮಂದಿರದ ಪ್ರದರ್ಶನಗಳಲ್ಲದೆ, ಪ್ರತಿ ತಿಂಗಳೂ ನಕ್ಷತ್ರ ವೀಕ್ಷಣೆ ಕಾರ್ಯಕ್ರಮ, ವಿಜ್ಞಾನ ಚಲನಚಿತ್ರಗಳು, ಖಗೋಳ ಘಟನೆಗಳ ವೀಕ್ಷಣೆಗಳನ್ನು ಏರ್ಪಡಿಸಲಾಗುತ್ತದೆ.

ನಮ್ಮ ಶೈಕ್ಷಣಿಕ ಚಟುವಟಿಕೆಗಳಾದ ರಿಸರ್ಚ್ ಎಜುಕೇಷನ್ ಅಡ್ವಾನ್ಸ್‍ಮೆಂಟ್ ಪ್ರೋಗ್ರಾಂ (ರೀಪ್), ಶಾಲಾ ವಿದ್ಯಾರ್ಥಿಗಳಿಗೆ ವಾರಾಂತ್ಯದ ತರಗತಿಗಳು, ಬೇಸಿಗೆ ಶಿಬಿರಗಳು, ವಿಜ್ಞಾನ ಪ್ರದರ್ಶನಗಳು ಹಾಗೂ ಕಾರ್ಯಗಾರಗಳು – ಇವೆಲ್ಲವೂ ಸಾವಿರಾರು ಸಂಖ್ಯೆಯಲ್ಲಿ ವಿದ್ಯಾರ್ಥಿಗಳನ್ನು ಆಕರ್ಷಿಸುತ್ತದೆ. ಸುಮಾರು 100 ಮಂದಿ ವಿದ್ಯಾರ್ಥಿಗಳು ಭಾರತ ಮಾತ್ರವಲ್ಲದೇ ವಿದೇಶದಲ್ಲಿನ ಪ್ರಮುಖ ಸಂಶೋಧನಾ ಸಂಸ್ಥೆಗಳಲ್ಲಿ ಸ್ನಾತಕೋತ್ತರ ಪದವಿಗೆ ಅರ್ಹತೆ ಪಡೆದಿದ್ದಾರೆ. ರಾಮನ್ ಸಂಶೋಧನಾ ಸಂಸ್ಥೆ, ಭಾರತೀಯ ವಿಜ್ಞಾನ ಸಂಸ್ಥೆ, ವೈಲ್ಡ್ ಲೈಫ್ ರಿಸರ್ಚ್ ಇನ್ಸ್‍ಟಿಟ್ಯೂಟ್, ಆಕ್ಸ್ಫರ್ಡ್ ವಿಶ್ವವಿದ್ಯಾನಿಲಯ, ಮಿಚಿಗನ್ ಸ್ಟೇಟ್ ಯೂನಿವರ್ಸಿಟಿ, ಡೆಲ್ಫ್ಟ್ ಯೂನಿವರ್ಸಿಟಿ, ಸ್ಟೇಟ್ ಯೂನಿವರ್ಸಿಟಿ ನ್ಯೂಯಾರ್ಕ್, ಬಫೆಲೋ ಯೂನಿವರ್ಸಿಟಿ, ಯೂನಿವರ್ಸಿಟಿ ಆಫ್ ಫ್ಲೋರಿಡಾ, ಕಾರ್ನಲ್ ಯೂನಿವರ್ಸಿಟಿ ಸೇರಿದಂತೆ ವಿಶ್ವದಾದ್ಯಂತ ಪ್ರಮುಖ ಸಂಶೋಧನಾ ಸಂಸ್ಥೆಗಳಲ್ಲಿ ಬೇಸ್ ವಿದ್ಯಾರ್ಥಿಗಳು ಸ್ನಾತಕೋತ್ತರ ಪದವಿಗೆ ಅರ್ಹತೆ ಪಡೆದಿದ್ದಾರೆ.

ತಾರಾಲಯದಲ್ಲಿ ಬೇಸ್ ಸ್ಥಾಪಿಸಿರುವ ವಿಜ್ಞಾನ ಕೇಂದ್ರವು ಎಲ್ಲಾ ವಯೋಮಾನದ ಜನರಿಗೆ ಅನೌಪಚಾರಿಕ ವಿಜ್ಞಾನ ಶಿಕ್ಷಣದ ಕೇಂದ್ರಬಿಂದುವಾಗಿದೆ. ತಾರಾಲಯದ ವಿಶಾಲ ಆವರಣದಲ್ಲಿರುವ ವಿಜ್ಞಾನ ವನದಲ್ಲಿ 40ಕ್ಕೂ ಹೆಚ್ಚು ಪ್ರದರ್ಶಿಕೆಗಳಿಗಳನ್ನು ಅಭಿವೃದ್ಧಿಪಡಿಸಲಾಗಿದೆ. ಇಲ್ಲಿ ಭೇಟಿ ನೀಡುವ ಲಕ್ಷಾಂತರ ಜನ ಈ ಪ್ರದರ್ಶಿಕೆಗಳ ಸಹಾಯದಿಂದ ವಿಜ್ಞಾನವನ್ನು ಬಹಳ ಕ್ರಿಯಾಶೀಲವಾಗಿ ಅರ್ಥೈಸಿಕೊಳ್ಳುತ್ತಿದ್ದಾರೆ.

ತಾರಾಲಯ ಮತ್ತು ವಿಜ್ಞಾನ ಕೇಂದ್ರದ ಚಟುವಟಿಕೆಗಳಿಂದಾಗಿ ಬೇಸ್ ವಿಜ್ಞಾನ ಕ್ಷೇತ್ರದ ಪ್ರಚಾರದಲ್ಲಿ ಒಂದು ಅತ್ಯುನ್ನತ ಸಂಸ್ಥೆ ಎಂದು ಹೆಸರುವಾಸಿಯಾಗಿದೆ.

ಶೀಘ್ರ ಕೊಂಡಿಗಳು

 

ವೆಬ್ಸೈಟ್ ಸಂದರ್ಶಕ ಕೌಂಟರ್

ಸೋಮವಾರ ಮತ್ತು ಎರಡನೇ ಮಂಗಳವಾರದಂದು ರಜೆ