ರೀಪ್

ರೀಪ್ – ಬಿ.ಎಸ್ ಸಿ. ವಿದ್ಯಾರ್ಥಿಗಳಿಗಾಗಿ

2020 ರ ರೀಪ್ ತರಗತಿಗಳ ನೋಂದಣಿ ಮುಚ್ಚಲಾಗಿದೆ. ಹೆಚ್ಚಿನ ಮಾಹಿತಿಗಾಗಿ https://taralaya.org/sow.html https://taralaya.org/reap.html

ನಮ್ಮ ಎಲ್ಲಾ ಶೈಕ್ಷಣಿಕ ಚಟುವಟಿಕೆಗಳ ಪಿರಮಿಡಿನಲ್ಲಿ ರೀಪ್ ಉತ್ತುಂಗದಲ್ಲಿದೆ. ವಿದ್ಯಾರ್ಥಿಗಳಿಗಾಗಿ ರೂಪಿಸುವ ಕಾರ್ಯಕ್ರಮಗಳಲ್ಲಿ ಇದು ಅತ್ಯಂತ ಕ್ಲಿಷ್ಟವಾಗಿದ್ದು. ಬಲವಾದ ವಿಜ್ಞಾನ ದಲ್ಲಿ ಚಟುವಟಿಕೆ ಸಹಿತ ಆಸಕ್ತಿ ಬೆಳೆಸಿ,ಯುವಜನತೆಯಲ್ಲಿ ಸಂಶೋಧನಾ ಮನೋಭಾವ

ತೀವ್ರಗೊಳಿಸುವ ಧ್ಯೇಯ ಹೊಂದಿದೆ. ಭೌತಶಾಸ್ತ್ರ ವಿಷಯದಲ್ಲಿನ ಈ ಮೂರು ವರ್ಷಗಳ ಕಾರ್ಯಕ್ರಮವು ಕಾಲೇಜು ಪದವಿ ಪಠ್ಯಕ್ರಮದ ಜೊತೆಗೆ ಪೂರಕವಾಗಿದೆ. ವಿದ್ಯಾರ್ಥಿಗಳಿಗೆ ವಿಜ್ಞಾನ ಶಿಕ್ಷಣದಲ್ಲಿ ಆಸಕ್ತಿ ಬೆಳೆಸಿಕೊಂ0ಡು ಇದೆ ಕ್ಷೇತ್ರದಲ್ಲಿ ವೃತ್ತಿಜೀವನ ರೂಪಿಸುವಂತೆ ಮಾಡುವುದು ಡಿeಚಿಠಿ ನ ಪ್ರಾಥಮಿಕ ಉದ್ದೇಶ.

ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್, ರಾಮನ್ ರಿಸರ್ಚ್ ಇನ್ಸ್ಟಿಟ್ಯೂಟ್, ಇಂಟರ್ನ್ಯಾಷನಲ್ ಸೆಂಟರ್ ಫಾರ್ ರ್ಥಿಯೊರೆಟಿಕಲ್ ಸೈನ್ಸಸ್, ಟಿಐಎಫ್ಆರ್, ಬೆಂಗಳೂರು ಮತ್ತು ಆಸ್ಟ್ರೋಫಿಸಿಕ್ಸ್ ಇಂಡಿಯನ್ ಇನ್ಸ್ಟಿಟ್ಯೂಟ್ಗಳ ಸಕ್ರಿಯ ಬೆಂಬಲ ಈ ಕಾರ್ಯಕ್ರಮಕ್ಕೆ ದೊರಕಿದೆ. ಇಲ್ಲಿನ ಭೋದಕ ವರ್ಗ ಮತ್ತುವಿಶ್ವವಿದ್ಯಾಲಯಗಳ ಅಧ್ಯಾಪಕವರ್ಗ --BSc ಮತ್ತು BE ವಿದ್ಯಾರ್ಥಿಗಳಿಗೆ ಬೋಧಿಸುತ್ತಾರೆ.

ಈ ಉಪನ್ಯಾಸಗಳ ಮೂಲಕ ವಿಜ್ಞಾನದಲ್ಲಿನ ಕೆಲವು ಮೂಲ ಪರಿಕಲ್ಪನೆಗಳ ಸಮಸ್ಯೆಗಳನ್ನು ಬಗೆಹರಿಸುವಿಕೆ, ಪ್ರಯೋಗಗಳು ಮತ್ತು ಕಂಪ್ಯೂಟರ್ಗಳ ಬಳಕೆಯ ಮಹತ್ವವನ್ನು ವಿದ್ಯಾರ್ಥಿಗಳು ತಿಳಿಯಬಹುದು. ಪ್ರಸ್ತುತ ಆಸಕ್ತಿಯುತ ವಿಷಯಗಳಲ್ಲಿ ಸಂಶೋಧನೆಗೆ ತೊಡಗಿಕೊಳ್ಳಲೂ ಈ ಬೋಧನಾ ತರಗತಿಗಳು ಉತ್ತೇಜಿಸುತ್ತವೆ.

ಮೊದಲ ವರ್ಷದ ಮೂಲ ವಿಷಯಗಳಿಗೆ ಪೂರಕವಾಗಿ ಎರಡನೇ ವರ್ಷದ ಪಠ್ಯವಿಷಯ ರೂಪುಗೊಂಡಿದೆ.

ಜನವರಿ ಮತ್ತು ಫೆಬ್ರುವರಿ ತಿಂಗಳಲ್ಲಿ ಕಾವಲೂ ರಿನ-- ವೈನು ಬಪ್ಪು ವೀಕ್ಷಣಾಲಯಕ್ಕೆ-- ಫೀಲ್ಡ್ ಟ್ರಿಪ್ಗಳನ್ನು ಆಯೋಜಿಸಲಾಗುತ್ತದೆ.

ಇಲ್ಲಿ ವಿದ್ಯಾರ್ಥಿಗಳು ಖಾಗೋಳೀಯ ವಿಷಯದ ಅವಲೋಕನ ಮಾಡಬಹುದು.

ಮೂರನೇ ವರ್ಷದಲ್ಲಿ, ವಿದ್ಯಾರ್ಥಿಗಳು ವಿಜ್ಞಾನಿಗಳ ಮಾರ್ಗದರ್ಶನದಲ್ಲಿ ಒಂದು ಸಂಶೋಧನಾ ಸಂಸ್ಥೆಯಲ್ಲಿ ಅಥವಾ ಜವಾಹರಲಾಲ್ ನೆಹರು ತಾರಾಲಯದಲ್ಲಿ ಪ್ರೊಜೆಕ್ಟ್ಗಳನ್ನು ಮಾಡುತ್ತಾರೆ. ಸಂಶೋಧನಾ ವಾತಾವರಣ ಹಾಗು ಸಂಶೋಧನಾ ಮನೋಭಾವನೆಯ ಅನುಭವ ನೀಡುವುದು ಇದರ ಉದ್ದೇಶವಾಗಿದೆ.

ಹಲವಾರು ವಿದ್ಯಾರ್ಥಿಗಳು ಈ ಕಾರ್ಯಕ್ರಮದಿಂದ ಅಪಾರವಾಗಿ ಪ್ರಯೋಜನ ಪಡೆಯುತ್ತಿದ್ದಾರೆ ಮತ್ತು Ph.d. ಹಾಗು ಪೋಸ್ಟ್ ಡಾಕ್ಟರಲ್ ಸಂಶೋಧನೆ ನಡೆಸುತ್ತಿದ್ದಾರೆ .ಕೆಲವರು ಈಗಾಗಲೇ ಸಂಶೋಧನಾ ಸಂಸ್ಥೆಗಳಲ್ಲಿ ಬೋಧಕರಾಗಿ ತರಬೇತಿ ನೀಡುತ್ತಿದ್ದಾರೆ. ಮತ್ತ್ತು ಕೆಲವರೂ ಬೋಧನಾವೃತ್ತಿ ಆಯ್ದುಕೊಂಡು ತಾರಾಲಯದ ಎಲ್ಲ ಶಿಕ್ಷಣದ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದಾರೆ.

ಆಗಸ್ಟ್ ಮೊದಲ ವಾರದಲ್ಲಿ ಖಇಂP ನ ಮೊದಲ ವರ್ಷ ಪ್ರಾರಂಭವಾಗುತ್ತದೆ. ಜುಲೈನಲ್ಲಿ ನೋಂದಣಿ ಪ್ರಾರಂಭವಾಗುತ್ತದೆ.

ಭೌತಶಾಸ್ತ್ರದ ವಿದ್ಯಾರ್ಥಿಗಳಿಗಾಗಿ ರೀಪ್ ಕಾರ್ಯಕ್ರಮವಿರುವಂತೆ ಜೀವಶಾಸ್ತ್ರದ ಪದವಿ ವಿದ್ಯಾರ್ಥಿಗಳಿಗಾಗಿ ಬಯೋ-ರೀಪ್ ಎಂಬ ಕಾರ್ಯಕ್ರಮವನ್ನು ಭಾರತೀಯ ವಿಜ್ಞಾನ ಸಂಸ್ಥೆಯ ಸಹಯೋಗದೊಂದಿಗೆ ಪ್ರಾರಂಭಿಸಲಾಯಿತು. 2011-12ರಲ್ಲಿ ಈ ಕಾರ್ಯಕ್ರಮವು ವ್ಯವಸ್ಥಿತವಾಗಿ ಮೂರನೇ ವರ್ಷವನ್ನು ಪ್ರವೇಶಿಸಿತು.

ಬಯೋ-ರೀಪ್ ಕಾರ್ಯಕ್ರಮವು ಅದರ ಔಪಚಾರಿಕ ಮತ್ತು ರಚನಾತ್ಮಕ ಹಂತದಕಾರ್ಯಕ್ರಮ ವನ್ನು IISC ಸಹಯೋಗದೊಂದಿಗೆ ಮೂರನೇ ವರ್ಷವನ್ನು ಪ್ರವೇಶಿಸಿತು.

ಆಗಸ್ಟ್ ಮೊದಲ ವಾರದಲ್ಲಿ ಬಯೋ - ರೀಪ್ ನ ಮೊದಲ ವರ್ಷ ಪ್ರಾರಂಭವಾಗುತ್ತದೆ. ಜುಲೈನಲ್ಲಿ ನೋಂದಣಿ ಪ್ರಾರಂಭವಾಗುತ್ತದೆ..


ಶೀಘ್ರ ಕೊಂಡಿಗಳು

 

ವೆಬ್ಸೈಟ್ ಸಂದರ್ಶಕ ಕೌಂಟರ್

ಸೋಮವಾರ ಮತ್ತು ಎರಡನೇ ಮಂಗಳವಾರದಂದು ರಜೆ