ವಿಜ್ಞಾನ ದಿನ

28ನೇ ಫೆಬ್ರವರಿ 2021 ರಂದು ರಾಷ್ಟ್ರೀಯ ವಿಜ್ಞಾನ ದಿನಾಚರಣೆಯ ಪ್ರಯುಕ್ತ "2020 ರ ವೈಜ್ಞಾನಿಕ ಸಾಧನೆ"ಗಳ ಕುರಿತ ಭಿತ್ತಿ ಚಿತ್ರಗಳ ಪ್ರದರ್ಶನವನ್ನು ಆಯೋಜಿಸಿದೆ

ಜವಾಹರ್ ಲಾಲ್ ನೆಹರು ತಾರಾಲಯವು ದಿನಾಂಕ 28ನೇ ಫೆಬ್ರವರಿ 2021 ರಂದು ರಾಷ್ಟ್ರೀಯ ವಿಜ್ಞಾನ ದಿನಾಚರಣೆಯ ಪ್ರಯುಕ್ತ "2020 ರ ವೈಜ್ಞಾನಿಕ ಸಾಧನೆ"ಗಳ ಕುರಿತ ಭಿತ್ತಿ ಚಿತ್ರಗಳ ಪ್ರದರ್ಶನವನ್ನು ಆಯೋಜಿಸಿದೆ. 2020 ರ ನೊಬೆಲ್ ಪ್ರಶಸ್ತಿಗಳು, ನಾಸಾದ ಪರ್ಸೀವರೆನ್ಸ್, ಚಂದ್ರನ ಕುರಿತ ಯೋಜನೆ ಚಾಂಗ್ ಎ5, ಇನ್ಫೊಸಿಸ್ ಪ್ರಶಸ್ತಿಯ ಸಾಧಕರು ಇತ್ಯಾದಿ ವಿಚಾರಗಳ ಕುರಿತ ಭಿತ್ತಿಚಿತ್ರಗಳನ್ನು ಈ ಪ್ರದರ್ಶನದಲ್ಲಿ ಕಾಣಬಹುದು. ಎಲ್ಲರಿಗೂ ಸ್ವಾಗತ.


"ರಾಷ್ಟ್ರೀಯ ವಿಜ್ಞಾನ ದಿನಾಚರಣೆ - 2021 "

ಜವಾಹರ್ ಲಾಲ್ ನೆಹರು ತಾರಾಲಯವು ರಾಷ್ಟ್ರೀಯ ವಿಜ್ಞಾನ ದಿನಾಚರಣೆಯ ಪ್ರಯುಕ್ತ "ನೇರ ವಿಧಾನಗಳಿಂದ ಗುರುತ್ವದ ಅಲೆಗಳ ಶೋಧವಾಗಿ ಐದು ವರ್ಷ"ಗಳಾಗಿರುವ ಈ ಸಂದರ್ಭದಲ್ಲಿ ಸಾರ್ವಜನಿಕರಿಗಾಗಿ ಎರಡು ಉಪನ್ಯಾಸಗಳನ್ನು 28.02.2021 ರಂದು ಆಯೋಜಿಸಿದೆ.

ಫಾರ್ಮ್ ತೆರೆಯಲು ಇಲ್ಲಿ ಕ್ಲಿಕ್ ಮಾಡಿ..


"ರಾಷ್ಟ್ರೀಯ ಗಣಿತ ದಿನಾಚರಣೆ"

ರಾಷ್ಟ್ರೀಯ ಗಣಿತ ದಿನಾಚರಣೆಯ ಅಂಗವಾಗಿ 'ವಿಜ್ಞಾನದ ಮೇಲೆ ರಾಮನ್ ಪರಿಣಾಮ' ವಿಷಯದ ಕುರಿತು ಒಂದು ದಿನದ ಕಮ್ಮಟವನ್ನು 28ನೇ ಫೆಬ್ರವರಿ 2020 ರಂದು ಬೆಳಿಗ್ಗೆ 10:30 ರಿಂದ ಮಧ್ಯಾಹ್ನ 1:30 ರವರೆಗೆ ಏರ್ಪಡಿಸಲಾಗಿದೆ. ಪ್ರವೇಶ ಉಚಿತ.


"ಕಾಗದದ ಚಟುವಟಿಕೆಗಳಲ್ಲಿ ಖಗೋಳ ಶಾಸ್ತ್ರ"

28ನೇ ಫೆಬ್ರವರಿ 2019 ರಂದು ಬೆ.10:30 ರಿಂದ ಮ.3:30 ರವರೆಗೆ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯ ಅಂಗವಾಗಿ ಸಾರ್ವಜನಿಕರಿಗಾಗಿ ಒಂದು ದಿನದ ವಿಶೇಷ ಕಾರ್ಯಾಗಾರವನ್ನು ಆಯೋಜಿಸಿದೆ. ನೋಂದಣಿ ಉಚಿತ.


ಪ್ರತಿ ವರ್ಷ 28ನೇ ಫೆಬ್ರವರಿ ಯಂದು ತಾರಾಲಯವು “ರಾಷ್ಟ್ರೀಯ ವಿಜ್ಞಾನ ದಿನ”ವನ್ನು ಆಚರಿಸುತ್ತದೆ. ವಿಷಯಾಧಾರಿತ ಭಿತ್ತಿ ಚಿತ್ರಗಳ ಪ್ರದರ್ಶನ, ಶಿಕ್ಷಕರಿಗಾಗಿ ವಿಚಾರ ಗೋತ್ರಗಳು ಹಾಗೂ ಕಾರ್ಯಾಗಾರಗಳನ್ನು ಏರ್ಪಡಿಸಲಾಗುತ್ತದೆ.

ವಿಜ್ಞಾನ ದಿನದ ಸಂದರ್ಭದಲ್ಲಿ ಪ್ರದರ್ಶನಗೊಂಡ ವಿಷಯಾಧಾರಿತ ಭಿತ್ತಿ ಚಿತ್ರಗಳು :-

ಭೂಮಿ ಮತ್ತು ಗಣಿತಶಾಸ್ತ್ರ

ಗಣಿತ ಶಾಸ್ತ್ರ

ಪ್ರಾಣಿ ಚಕ್ಷು

ದೂರದರ್ಶಕಗಳು

ಶೀಘ್ರ ಕೊಂಡಿಗಳು

 

ವೆಬ್ಸೈಟ್ ಸಂದರ್ಶಕ ಕೌಂಟರ್

ಸೋಮವಾರ ಮತ್ತು ಎರಡನೇ ಮಂಗಳವಾರದಂದು ರಜೆ