ಅನ್ಯಗ್ರಹಗಳ ಅನ್ವೇಷಣೆ :ಸೌರವ್ಯೂಹದಲ್ಲಿ ಪಯಣ - (ಸಾರಾಂಶ)
ಕನ್ನಡ ಮಧ್ಯಾಹ್ನ 2:30
ಆಂಗ್ಲ ಮಧ್ಯಾಹ್ನ 12:30


ಬಾನಂಗಳದ ಬಾಣಬಿರುಸು - (ಸಾರಾಂಶ)
ಕನ್ನಡ : ಮಧ್ಯಾಹ್ನ 3:30
ಆಂಗ್ಲ : ಸಂಜೆ 4:30

ವಾರಾಂತ್ಯಗಳಲ್ಲಿ ಹೆಚ್ಚುವರಿ ಪ್ರದರ್ಶನಗಳು.

ಗಗನಯಾನದ ನವೋದಯ – (ಸಾರಾಂಶ)

ಕನ್ನಡ : ಬೆಳಿಗ್ಗೆ 11:30
ಆಂಗ್ಲ : ಬೆಳಿಗ್ಗೆ 10:30

150 ಟೆಕೆಟ್ ಗಳು “ಬುಕ್ ಮೈ ಶೋ” ಜಾಲತಾಣದಲ್ಲಿ ಲಭ್ಯವಿದ್ದು, ಉಳಿದ 50 ಟಿಕೆಟ್ ಗಳನ್ನು ಪ್ರತಿ ಪ್ರದರ್ಶನದ ಅರ್ಧ ಗಂಟೆ ಮುಂಚಿತವಾಗಿ ಕೌಂಟರ್ ನಲ್ಲಲಿ ನೀಡಲಾಗುವುದು.


ಸಾರ್ವಜನಿಕರಿಗಾಗಿ ನೈರ್ಮಲೀಕರಣ ವ್ಯವಸ್ಥೆಯ ವಿವರಗಳು:

ಕೊರೋನಾ ವೈರಸ್ ಅನ್ನು ನಿಯಂತ್ರಿಸಲು ಸರ್ಕಾರ ಸೂಚಿಸಿರುವ ಎಲ್ಲಾ ಅಗತ್ಯ ಪ್ರಮಾಣಿತ ಕ್ರಮಗಳ ಅನುಸರಣೆಯ ವಿವರ ಕೆಳಕಂಡಂತಿದೆ:

·         ಸಾರ್ವಜನಿಕರ ಉಷ್ಣಾಂಶ ತಪಾಸಣೆ

·         ಟಿಕೆಟ್ ಬೂತ್‍ನ ಪ್ರವೇಶ ದ್ವಾರ ಮತ್ತು ಆಕಾಶ ಮಂದಿರದ ನಿರ್ಗಮನ ದ್ವಾರಗಳಲ್ಲಿ ಕೈ ತೊಳೆಯುವ ವ್ಯವಸ್ಥೆ

·         ಭೌತಿಕ ಅಂತರವನ್ನು ಕಾಯ್ಜುಕೊಳ್ಳಲು ನೆಲದ ಮೇಲೆ ಗುರುತುಗಳನ್ನು ಮಾಡಲಾಗಿದೆ.

·         ಆನ್‍ಲೈನ್ ಟೆಕೆಟ್ ಕಾಯ್ದಿರಿಸುವಿಕೆ ಮತ್ತು ಟಿಕೆಟ್ ಬೂತ್‍ನಲ್ಲಿ ಯು.ಪಿ.ಐ. ಉಪಯೋಗಿಸಿ ಡಿಜಿಟಲ್ ಪಾವತಿ ವ್ಯವಸ್ಥೆ

·         ಕೈಗೆ ಹಚ್ಚುವ ಸ್ಯಾನಿಟೈಸರ್ ಅನ್ನು ಹಲವು ಕಡೆ ಇರಿಸಲಾಗಿದೆ

·         ಆಕಾಶ ಮಂದಿರದಲ್ಲಿ ಭೌತಿಕ ಅಂತರ ಕಾಯ್ದುಕೊಳ್ಳಲು ಒಂದಾದ ನಂತರ ಒಂದು ಆಸನವು ಮಾತ್ರ ಕುಳಿತುಕೊಳ್ಳಲು ಲಭ್ಯವಿರುವಂತೆ ವ್ಯವಸ್ಥೆ ಮಾಡಲಾಗಿದೆ. ಇದರಿಂದಾಗಿ ಕೇವಲ 110 ಆಸನಗಳು ಮಾತ್ರ ಲಭ್ಯವಿರುತ್ತವೆ.ಸರ್ಕಾರ ಸೂಚಿತ ಕ್ರಮಗಳಲ್ಲದೆಈ ಕೆಳಗಿನ ಹೆಚ್ಚುವರಿ ವ್ಯವಸ್ಥೆಯನ್ನು ಸಾರ್ವಜನಿಕರಿಗಾಗಿ ತಾರಾಲಯವು ಮಾಡುತ್ತಿದೆ:

·         ಶೌಚಾಲಯದ ನಲ್ಲಿಗಳನ್ನು (ಕೈಗಳಿಂದ ಮುಟ್ಟದೆಯೇ) ಕಾಲಿನಿಂದ ಒತ್ತಿ ಬಳಸಬಹುದಾಗಿದೆ.

·         ಕಟ್ಟಡ ಮತ್ತು ಆಕಾಶ ಮಂದಿರದಲ್ಲಿ ನೈರ್ಮಲ್ಯ ಕಾಪಾಡಲು ಫಾಗಿಂಗ್ ವ್ಯವಸ್ಥೆಯನ್ನು ಮಾಡಲಾಗಿದೆ.

·         ಆಕಾಶ ಮಂದಿರ ಮತ್ತು ಪ್ರದರ್ಶನ ಕೊಠಡಿಯಲ್ಲಿನ ವಾತಾವರಣವನ್ನು ಶುಚಿಗೊಳಿಸಲು ಹವಾ ನಿಯಂತ್ರಕ ಕೊಠಡಿಯಲ್ಲಿ ಅಲ್ಟ್ರಾ ವೈಲೆಟ್ ಜರ್ಮಿಸಿಡಲ್ ಇರಾಡಿಯೇಷನ್ ಉಪಕರಣವನ್ನು ಬಳಸಲಾಗುತ್ತಿದೆ. ಈ ಮೇಲಿನ ವ್ಯವಸ್ಥೆಗಳಿಗೆ ಬೆಂಗಳೂರಿನ ಮೆ. ಕಿವಾನಿ ಲ್ಯಾಬ್ ವೇ ಇಂಡಿಯಾ ಪ್ರೈ. ಲಿ. ಸಂಸ್ಥೆಯು ರೋಟರಿ ಲೇಕ್ ಸೈಡ್ ಸಂಸ್ಥೆಯ ಮೂಲಕ ನೀಡಿದ ದೇಣಿಗೆಯನ್ನು ಬಳಸಲಾಗಿದೆ.


ಸೋಮವಾರ ಮತ್ತು ತಿಂಗಳ ಎರಡನೇ ಮಂಗಳವಾರದಂದು ರಜೆ