ಸೋ

2020 ನೇ ಸಾಲಿನ ವಾರಾಂತ್ಯದ ತರಗತಿಗಳ ನೋಂದಣಿ ಮುಚ್ಚಲಾಗಿದೆ. ಹೆಚ್ಚಿನ ಮಾಹಿತಿಗಾಗಿ https://taralaya.org/sow.html

ಬೇಸಿಗೆ ಶಿಬಿರದ ಪ್ರಭಾವದಿಂದ ಸಂಶೋಧನೆ ಕಡೆಗೆ ಪ್ರೇರಿತಗೊಂಡ ವಿದ್ಯಾರ್ಥಿಗಳು ಇನ್ನೂ ಆಳವಾದ ಅಧ್ಯಯನಕ್ಕಾಗಿ ತಾರಾಲಯಕ್ಕೆ ವಾರಾಂತ್ಯದಲ್ಲಿ ಭೇಟಿ ನೀಡಲು ಆಸಕ್ತಿ ತೋರುತ್ತಾರೆ. ಒಂದು ನಿರ್ದಿಷ್ಟ ವಿಷಯವನ್ನು ಹೆಚ್ಚು ಆಳವಾಗಿ ಅರ್ಥೈಸಿಕೊಳ್ಳುವಲ್ಲಿ ಅವರು ವಾರಾಂತ್ಯದಲ್ಲಿ ಕೆಲವು ಸಮಯ ಕಳೆಯುತ್ತಾರೆ. ಈ ಅವಧಿಯಲ್ಲಿ ವಿವಿಧ ವಿಷಯದ ಬಗ್ಗೆ ಚರ್ಚೆಗಳು, ಪ್ರದರ್ಶನಗಳು, ಗಣಿತ ಸೂತ್ರಗಳ ವಿಶ್ಲೇಷಣೆ ಮಾಡುವುದರ ಜೊತೆಗೆ ವಿವಿಧ ಸಂಶೋಧನಾ ಸಂಸ್ಥೆಗಳಿಗೆ ಭೇಟಿ ನೀಡಲಾಗುತ್ತದೆ.

ಹೈಸ್ಕೂಲ್ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ವಾರಾಂತ್ಯದ ತರಗತಿಗಳನ್ನು ನಡೆಸಲಾಗುತ್ತದೆ.ಈ ತರಗತಿಗಳು ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಲು ತರಬೇತಿ ಕೊಡುವ ಟ್ಯುಟೋರಿಯಲ್ ತರಗತಿಗಳಲ್ಲ. . ಈ ತರಗತಿಯ ಪ್ರಮುಖ ಗುರಿ ವಿವಿಧ ವೈಜ್ಞಾನಿಕ ವಿಚಾರಗಳ ಚರ್ಚೆ ,ಸಮಸ್ಯೆಗಳ ಪರಿಹಾರ ಮತ್ತು ಪ್ರಯೋಗಗಳ ಮೂಲಕ ವೈಜ್ಞಾನಿಕ ಪರಿಕಲ್ಪನೆಗಳ ಬಗ್ಗೆ ಸಂಪೂರ್ಣ ತಿಳುವಳಿಕೆಯನ್ನು ಒದಗಿಸುವುದೇ ಆಗಿದೆ. ಇದು ವಿದ್ಯಾರ್ಥಿಗಳಿಗೆ ವೈಜ್ಞಾನಿಕ ಸಂಶೋಧನೆಯ ಬಗ್ಗೆ ಸೂಕ್ತ ಮನೋಭಾವ ರೂಪಿಸುತ್ತದೆ.(ಮೂಡಿಸುವುದು)

ಪ್ರತಿ ಭಾನುವಾರ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಬೆಳಿಗ್ಗೆ ೧೦:30 ರಿಂದ ೧೨:30 ರ ವರೆಗೆ ಎರಡು ಗಂಟೆ ಅವಧಿಯ ತರಗತಿ ನಡೆಸಲಾಗುವುದು.

ಈ ತರಗತಿಗಳು ಜೂನ್ ತಿಂಗಳ ಕೊನೆಯ ಭಾನುವಾರ ಅಥವಾ ಜೂಲೈ ತಿಂಗಳ ಮೊದಲ ಭಾನುವಾರ ಆರಂಭ ವಾಗಿ -- ಫೆಬ್ರವರಿ ತಿಂಗಳ ಮೊದಲ ಭಾನುವಾರದ ವರೆಗೂ ನಡೆಯುವುದು.

ಪ್ರತಿ ವರ್ಷ, ಪ್ರೌಢಶಾಲಾ ವಿಜ್ಞಾನ ಪಠ್ಯದಲ್ಲಿ ಸೂಚಿಸಲಾದ ಒಂದು ವಿಷಯ ಕುರಿತು ವಿವರವಾದ ಚರ್ಚೆ ಮಾಡಲಾಗುವುದು. ತರ್ಕಬದ್ಧ ಚಿಂತನೆ ಹಾಗು ಸಮಸ್ಯೆಗಳ ಪರಿಹಾರದ ಬಗ್ಗೆ ಹೆಚ್ಚು ಒತ್ತು ಕೊಡಲಾಗುವುದು.

ಈ ತರಗತಿಗಳಲ್ಲಿ ನಡೆಸುವ ಆಳವಾದ ಚರ್ಚೆಗಳಿಗೆ ಯಾವುದೇ ಪಠ್ಯಕ್ರಮದ ನಿರ್ಬಂಧವಿಲ್ಲ. ಇದು ವಿಭಿನ್ನ ಕಲಿಕಾ ಸಾಮರ್ಥ್ಯವಿರುವ ವಿದ್ಯಾರ್ಥಿಗಳಿಗೆ ಸೂಕ್ತವಾಗಿದೆ. ನ್ಯೂಟನ್ನ ಚಲನ ಸೂತ್ರಗಳು ,ಆಪ್ಟಿಕ್ಸ್, ಎಲೆಕ್ಟ್ರಿಸಿಟಿ ಮತ್ತು 'ಮ್ಯಾಗ್ನೆಟಿಸಂ ಇತ್ಯಾದಿ ಇಲ್ಲಿ ಚರ್ಚೆ ಮಾಡುವ ವಿಷಯಗಳಲ್ಲಿ ಕೆಲವು. ಈ ತರಗತಿಗಳನಲ್ಲಿ ಮೂರುವರ್ಷವೂ ಹಾಜರಾದ ವಿದ್ಯಾರ್ಥಿಗಳು ಈ ಎಲ್ಲ ವಿಷಯಗಳನ್ನು ಕಲಿಯಬಹುದು. ಗರಿಷ್ಠ ವಿದ್ಯಾರ್ಥಿಗಳ ಸಂಖ್ಯೆ :೪೦.

PUC ವಿದ್ಯಾರ್ಥಿಗಳಿಗೆ :

ಪಿಯುಸಿ ವಿದ್ಯಾರ್ಥಿಗಳಿಗೆ ಭೌತಶಾಸ್ತ್ರದ ತರಗತಿಗಳನ್ನು ಭಾನುವಾರದಂದು ನಡೆಸಲಾಗುವುದು. ಮತ್ತೊಮ್ಮೆ, ಇವು ವೃತ್ತಿಪರ ಕೋರ್ಸುಗಳ ಪ್ರವೇಶ ಪರೀಕ್ಷೆಗಳಿಗೆ ತಯಾರಾಗಲು ನಡೆಸುವ ತರಬೇತಿಯಲ್ಲ. . ಭೌತಶಾಸ್ತ್ರದ ವಿಷಯಗಳನ್ನು ರೆರ್ಸ್ನಿಕ್ ಮತ್ತು ಹ್ಯಾ ಲಿಡೇ ಅವರ “fundamentals of physics “ ಪಠ್ಯದ ಮಟ್ಟದಲ್ಲಿ ಚರ್ಚಿಸಲಾಗುವುದು.

ಪ್ರಮುಖ ಭೌತ ಶಾಸ್ತ್ರದ ವಿಷಯಗಳು ಉದಾಹರಣೆಗೆ ಮೆಕ್ಯಾನಿಕ್ಸ್ ಮತ್ತು ವೇವ್ಸ್ ಇಂತಹ ವಿಷಯಗಳ ಬಗ್ಗೆ ಚರ್ಚೆ ಮತ್ತು ವಿಷಯಕ್ಕೆ ಸಂಬಂಧಿಸಿದ ಸಮಸ್ಯೆಗಳ ಪರಿಹಾರಕ್ಕೆ ವಿಶೇಷ ಒತ್ತು ಕೊಡಲಾಗುವುದು.

ಗರಿಷ್ಠ ಸಂಖ್ಯೆ ವಿದ್ಯಾರ್ಥಿಗಳು :೧೫
ಅವಧಿ:
ಜೂಲೈ-ಫೆಬ್ರವರಿ
ಸಮಯ: ಮಧ್ಯಾಹ್ನ ೨. ೩೦


ಶೀಘ್ರ ಕೊಂಡಿಗಳು

 

ವೆಬ್ಸೈಟ್ ಸಂದರ್ಶಕ ಕೌಂಟರ್

ಸೋಮವಾರ ಮತ್ತು ಎರಡನೇ ಮಂಗಳವಾರದಂದು ರಜೆ