ಜುಲೈ 3, 2022 ರಂದು ಬೆಳಿಗ್ಗೆ 11:30 ಕ್ಕೆ ನಡೆಯಲಿರುವ “ವಿಜ್ಞಾನ ರಸಪ್ರಶ್ನೆ ಸ್ಪರ್ಧೆ”ಗೆ ಪರೀಕ್ಷಾ ಕೊಂಡಿಯನ್ನು ಇಮೇಲ್ ಮತ್ತು ಎಸ್.ಎಮ್.ಎಸ್. ಮೂಲಕ ಎಲ್ಲಾ ಸ್ಪರ್ಧಿಗಳಿಗೆ ಕಳುಹಿಸಲಾಗಿದೆ. ಈ ಸಂದೇಶವನ್ನು ಸ್ವೀಕರಿಸದವರು ಜುಲೈ 1 ರಂದು ಕಛೇರಿಯನ್ನು ಸಂಪರ್ಕಿಸತಕ್ಕದ್ದು ಮೊ.94487 09066 ಅಥವಾ [email protected]


'ಕ್ಷುದ್ರಗ್ರಹಗಳ ದಿನ'

‘ಕ್ಷುದ್ರಗ್ರಹಗಳ ದಿನ’ದ ಅಂಗವಾಗಿ, ‘ಕ್ಷುದ್ರಗ್ರಹಗಳು’ ಮತ್ತು ‘ಅಪ್ಪಳಿಸುವ ಕಲ್ಲುಗಳು’ ವಿಷಯದ ಕುರಿತು ಕನ್ನಡದಲ್ಲಿ ಸಂವಾದಗಳು ಮತ್ತು ‘ಕ್ಷುದ್ರಗ್ರಹಗಳ ಅನ್ವೇಷಣೆಯಲ್ಲಿ ರೊಬೊಟಿಕ್ ನೌಕೆಗಳು’ ವಿಷಯದ ಕುರಿತು ಆಂಗ್ಲ ಭಾಷೆಯಲ್ಲಿ ಉಪನ್ಯಾಸವನ್ನು ಜೂನ್ 30, 2022 ರಂದು ಆಯೋಜಿಸಲಾಗಿದೆ. ಪ್ರವೇಶ ಉಚಿತ.
ಮತ್ತಷ್ಟು ಓದಿ
Asteroid day program ( morning session ) ಮತ್ತಷ್ಟು ಓದಿ
Asteroid day lecture : Dr. Guruprasad ಮತ್ತಷ್ಟು ಓದಿ


“ವಿಜ್ಞಾನ ರಸಪ್ರಶ್ನೆ ಸ್ಪರ್ಧೆ”

ಬೆಂಗಳೂರಿನ ಜವಾಹರ್‌ಲಾಲ್‌ ನೆಹರು ತಾರಾಲಯವು  ಸ್ವಾತಂತ್ರ್ಯದ ೭೫ನೇ ವರ್ಷದ ಅಮೃತ ಮಹೋತ್ಸವದ ಅಂಗವಾಗಿ 8, 9 ಮತ್ತು 10ನೇ ತರಗತಿಯ ವಿದ್ಯಾರ್ಥಿಗಳಿಗಾಗಿ ಕನ್ನಡದಲ್ಲಿ ರಾಜ್ಯ ಮಟ್ಟದ “ವಿಜ್ಞಾನ ರಸಪ್ರಶ್ನೆ ಸ್ಪರ್ಧೆ”ಯನ್ನು ಆಯೋಜಿಸುತ್ತಿದೆ.  ಕೊನೆಯ ದಿನಾಂಕ 24.06.2022
ರಂದು ಸಂಜೆ 4 ಗಂಟೆ.
ನೋಂದಾಯಿಸಲು ಕೊಂಡಿ: https://forms.gle/3RWEBUursALs3A4Y6
ವಿವರಗಳು: ಕೊಂಡಿ
ಮತ್ತಷ್ಟು ಓದಿ


ಇಸ್ರೋ ಸಂಸ್ಥೆಯ ಮಾಜಿ ನಿರ್ದೇಶಕರಾದ ಡಾ. ಸೀತಾ ಅವರಿಂದ "Indian Space Programs - A tribute to Prof. U R Rao" ವಿಷಯದ ಕುರಿತು ಒಂದು ವರ್ಚುವಲ್ ಉಪನ್ಯಾಸವನ್ನು 10.03.2022 ರಂದು ಸಂಜೆ 4 ಗಂಟೆಗೆ ಆಯೋಜಿಸುತ್ತಿದೆ.

ಕೊಂಡಿ: https://msteams.link/TP9B


ಭಾರತ ಸ್ವಾತಂತ್ರ್ಯದ ಅಮೃತಮಹೋತ್ಸವದ ಅಂಗವಾಗಿ ಜವಾಹರ್ ಲಾಲ್ ನೆಹರು ತಾರಾಲಯವು "ಸಂಶೋಧನಾ ಸಂಸ್ಥೆಗಳಲ್ಲಿ ಒಂದು ಸುತ್ತು" ಎಂಬ ಸಂಶೋಧನಾ ಕೇಂದ್ರಗಳ ವರ್ಚುಯಲ್ ಭೇಟಿ ಕಾರ್ಯಕ್ರಮವನ್ನು ಪ್ರಸ್ತುತ ಪಡಿಸುತ್ತಿದೆ. ವೈಜ್ಞಾನಿಕ ಸಂಶೋಧನೆಯಲ್ಲಿ ತೊಡಗಿಸಿಕೊಳ್ಳಲು ಆಸಕ್ತರಾದ ಪದವಿ ಪೂರ್ವ ಹಾಗೂ ಪದವಿ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾಗಿರುವ ಈ ನೇರ ಪ್ರಸಾರದ ಕಾರ್ಯಕ್ರಮದಲ್ಲಿ, ನಮ್ಮ ದೇಶದ ಕೆಲವು ಪ್ರಖ್ಯಾತ ಸಂಶೋಧನಾ ಸಂಸ್ಥೆಗಳಲ್ಲಿ ಲಭ್ಯವಿರುವ ಸೌಲಭ್ಯಗಳು ಹಾಗೂ ಪ್ರಸ್ತುತ ನಡೆಯುತ್ತಿರುವ ಸಂಶೋಧನೆಗಳನ್ನು ಪರಿಚಯಿಸುವ ಉದ್ದೇಶ ನಮ್ಮದಾಗಿದೆ.

ಮೊದಲ ಹಂತದಲ್ಲಿ 25, 26 ಮತ್ತು 28ನೇ ಫೆಬ್ರವರಿ ಮತ್ತು 2ನೇ ಮಾರ್ಚ್ 2022 ರಂದು ಸಂಜೆ 4:30 ರಿಂದ 6 ಗಂಟೆಯವರೆಗೆ ಆಯೋಜಿಸುತ್ತಿದೆ.

25ನೇ ಫೆಬ್ರವರಿ : https://msteams.link/PMY7

26ನೇ ಫೆಬ್ರವರಿ: https://msteams.link/QTUL

28ನೇ ಫೆಬ್ರವರಿ: https://msteams.link/4ALO

2ನೇ ಮಾರ್ಚ್: https://msteams.link/KV91


ಪ್ರಸಿದ್ಧ ಸಂಶೋಧನಾ ಸಂಸ್ಥೆಗಳ ಹಿರಿಯ ವಿಜ್ಞಾನಿಗಳು ಮತ್ತು ಭಾರತಕ್ಕೆ ಭೇಟಿ ನೀಡುವ ಪ್ರಖ್ಯಾತ ವಿಜ್ಞಾನಿಗಳಿಂದ ವಿಜ್ಞಾನದ ಬಗ್ಗೆ ಜನಪ್ರಿಯ ಉಪನ್ಯಾಸಗಳನ್ನು ತಾರಾಲಯವು ಆಯೋಜಿಸಿಸುತ್ತದೆ. ಈ ಉಪನ್ಯಾಸಗಳನ್ನು ತಾರಾಲಯದ ಇತರ ಪ್ರಧಾನ ವಿಜ್ಞಾನ ಸಂಸ್ಥೆಗಳ ಸಹಯೋಗದಲ್ಲಿ ಆಯೋಜಿಸುತ್ತದೆ. ಉಪನ್ಯಾಸಗಳ ಕುರಿತ ಪ್ರಕಟಣೆಗಳು ಪತ್ರಿಕೆಗಳಲ್ಲಿ, ನಮ್ಮ ಜಾಲತಾಣ ಮತ್ತು ತಾರಾಲಯ ಕೂಟದ ಸದಸ್ಯರಿಗೆ ಇಮೇಲ್ ಮೂಲಕ ಕಳುಹಿಸಲಾಗುತ್ತದೆ. ಈ ಉಪನ್ಯಾಸಗಳಿಗೆ ಪ್ರವೇಶ ಉಚಿತ.

ಉಪನ್ಯಾಸದ ವೀಡಿಯೋಗಳ ಯೂಟ್ಯೂಬ್ ಸಂಪರ್ಕ ಕೊಂಡಿ ( https://www.youtube.com/channel/UCIwAk620u6B-GWbvZPComTg/feed?activity_view=3 )


'ಕಾಪಿ ವಿತ್ ಕ್ಯೂರಿಯಾಸಿಟಿ'

12.01.2020ರಂದು ಸಂಜೆ 4 ಗಂಟೆಗೆ ಯ.ಎಸ್.ಎ. ನ ಯೂನಿವರ್ಸಿಟಿ ಆಫ್ ಇಲಿನಾಯ್ಸ್ ನ ಪ್ರೊ. ಸ್ಮಿತಾ ವಿಶ್ವೇಶ್ವರ ಅವರಿಂದ "ಆಫ್ ಸ್ಪೂಕಿ ಆಕ್ಷನ್ಸ್ ಅಂಡ್ ಅದರ್ ಕ್ವಾಂಟಮ್ ಕಾನಂಡ್ರಮ್ಸ್" ವಿಷಯದ ಬಗ್ಗೆ ಉಪನ್ಯಾಸವನ್ನು ತಾರಾಲಯದಲ್ಲಿ ಏರ್ಪಡಿಸಲಾಗಿದೆ. ಪ್ರವೇಶ ಉಚಿತ.


'ಕಾಪಿ ವಿತ್ ಕ್ಯೂರಿಯಾಸಿಟಿ'

22.09.2019ರಂದು ಸಂಜೆ 4 ಗಂಟೆಗೆ ಅಜೀಮ್ ಪ್ರೇಮ್ ಜೀ ಯೂನಿವರ್ಸಿಟಿಯ ಪ್ರೊಫೆಸರ್ ಆದ ಹರಿಣಿ ನಾಗೇಂದ್ರ ಅವರಿಂದ "ಥಿಂಕಿಂಗ್ ಎಕಲಾಜಿಕಲಿ ಅಬೌಟ್ ಇಂಡಿಯನ್ ಸಿಟೀಸ್" ವಿಷಯದ ಬಗ್ಗೆ ಉಪನ್ಯಾಸವನ್ನು ತಾರಾಲಯದಲ್ಲಿ ಏರ್ಪಡಿಸಲಾಗಿದೆ. ಪ್ರವೇಶ ಉಚಿತ.


ದಿ.24.08.2019 ರಂದು ನಡೆಯಲಿರುವ ಸಾರ್ವಜನಿಕ ಉಪನ್ಯಾಸದ ನೋಂದಣಿ ಪ್ರಕ್ರಿಯೆಯು ಮುಕ್ತಾಯವಾಗಿದೆ. ನೋಂದಾಯಿಸದವರಿಗೆ ಪ್ರವೇಶವಿಲ್ಲ.


ಶಿಕ್ಷಕರ ದಿನಾಚರಣೆಯ ಅಂಗವಾಗಿ 14ನೇ ಸೆಪ್ಟೆಂಬರ್ 2019 ರಂದು ವಿಶೇಷ ಉಪನ್ಯಾಸವನ್ನು ಶಿಕ್ಷಕರಿಗಾಗಿ ಆಯೋಜಿಸಲಾಗಿದೆ.


ಪ್ರೊ. ಆರ್. ನರಸಿಂಹ, ಪ್ರೊ. ಆರ್. ಎನ್. ಅಯ್ಯಂಗಾರ್ ಮತ್ತು ಡಾ. ಎಸ್. ಬಾಲಚಂದ್ರ ರಾವ್ ಅವರಿಂದ 24ನೇ ಆಗಸ್ಟ್ 2019 ರಂದು ಬೆ.9:30 ಕ್ಕೆ ಸಾರ್ವಜನಿಕ ಉಪನ್ಯಾಸ

ಜವಾಹರ್ ಲಾಲ್ ನೆಹರು ತಾರಾಲಯವು ಬೆಂಗಳೂರಿನ ಭವನ್ಸ್ ಗಾಂಧೀ ಸೆಂಟರ್ ಫಾರ್ ಹ್ಯೂಮನ್ ವ್ಯಾಲ್ಯೂಸ್ ಸಂಸ್ಥೆಯ ಸಹಯೋಗದೊಂದಿಗೆ ಪ್ರೊ. ಆರ್. ನರಸಿಂಹ, ಜೆ.ಎನ್.ಸಿ.ಎ.ಎಸ್.ಆರ್., ಪ್ರೊ. ಆರ್. ಎನ್. ಅಯ್ಯಂಗಾರ್, ಜೈನ್ ವಿಶ್ವವಿದ್ಯಾನಿಲಯ ಮತ್ತು ಡಾ. ಎಸ್. ಬಾಲಚಂದ್ರ ರಾವ್, ಜಿ.ಸಿ.ಎಸ್.ಎಚ್., ಅವರಿಂದ ಸಾರ್ವಜನಿಕ ಉಪನ್ಯಾಸಗಳನ್ನು ದಿನಾಂಕ 24ನೇ ಆಗಸ್ಟ್ 2019 ರಂದು ಬೆ.09:30 ಕ್ಕೆ ಏರ್ಪಡಿಲಾಗಿದೆ.


'ಕಾಪಿ ವಿತ್ ಕ್ಯೂರಿಯಾಸಿಟಿ'

18.08.2019ರಂದು ಸಂಜೆ 4 ಗಂಟೆಗೆ ಪುಣೆಯ ಐ.ಯು.ಸಿ.ಎ.ಎ. ಸಂಸ್ಥೆಯ ಪ್ರೊ. ಜಯಂತ್ ವಿ. ನಾರ್ಳೀಕರ್ ಅವರಿಂದ "ದಿ ಕಲ್ಚರ್ ಆಫ್ ಸೈನ್ಸ್” ವಿಷಯದ ಬಗ್ಗೆ ಉಪನ್ಯಾಸವನ್ನು ತಾರಾಲಯದಲ್ಲಿ ಏರ್ಪಡಿಸಲಾಗಿದೆ. ಪ್ರವೇಶ ಉಚಿತ.


ಪ್ರೊ. ಜಯಂತ್ ವಿ. ನಾರ್ಳೀಕರ್ ಅವರಿಂದ ಉಪನ್ಯಾಸ

ಪುಣೆಯ ಇಂಟರ್ ಯೂನಿವರ್ಸಿಟಿ ಸೆಂಟರ್ ಫಾರ್ ಅಸ್ಟ್ರಾನಮಿ ಅಂಡ್ ಅಸ್ಟ್ರೋಫಿಸಿಕ್ಸ್ ಸಂಸ್ಥೆಯ ಗೌರವಾನ್ವಿತ ಪ್ರಾಚಾರ್ಯರಾದ ಪ್ರೊ. ಜಯಂತ್ ವಿ. ನಾರ್ಳೀಕರ್ ಅವರಿಂದ 17ನೇ ಆಗಸ್ಟ್ 2019 ರಂದು ಸಂ.5:30 ಕ್ಕೆ 'ವೈ ಸ್ಟಡೀ ಅಸ್ಟ್ರಾನಮಿ' ವಿಷಯದ ಕುರಿತು ಸಾರ್ವಜನಿಕ ಉಪನ್ಯಾಸ.


'ಕಾಪಿ ವಿತ್ ಕ್ಯೂರಿಯಾಸಿಟಿ'

16.06.2019 ರಂದು ಮಧ್ಯಾಹ್ನ 3 ಗಂಟೆಗೆ ಅಲಹಾಬಾದ್ ನ ಹರೀಶ್-ಚಂದ್ರ ರಿಸರ್ಚ್ ಇನ್ಸ್ಟಿಟ್ಯೂಟ್ ನ ಪ್ರೊಫೆಸರ್ ಆದ ಪ್ರೊ. ಅದಿತಿ ದೇ ಅವರಿಂದ "ಕ್ವಾಂಟಮ್ ಟೆಕ್ನಾಲಜೀಸ್” ವಿಷಯದ ಬಗ್ಗೆ ಉಪನ್ಯಾಸವನ್ನು ತಾರಾಲಯದಲ್ಲಿ ಏರ್ಪಡಿಸಲಾಗಿದೆ. ಪ್ರವೇಶ ಉಚಿತ.


'ಕಾಪಿ ವಿತ್ ಕ್ಯೂರಿಯಾಸಿಟಿ'

26.05.2019 ರಂದು ಸಂಜೆ 4 ಗಂಟೆಗೆ ಮೆಡಿಕಲ್ ಯೂನಿವರ್ಸಿಟಿ ಆಫ್ ವಿಯನ್ನಾದ ಪ್ರೊಫೆಸರ್ ಆದ ಪ್ರೊ. ಸ್ಟೇಫನ್ ಥರ್ನರ್ ಅವರಿಂದ "ಎ ಫ್ಯೂ ಎಕ್ಸಾಂಪಲ್ಸ್ ಹೌ ದಿ ಸೈನ್ಸ್ ಆಫ್ ಕಾಂಪ್ಲೆಕ್ಸ್ ಸಿಸ್ಟಮ್ಸ್ ಚೇಂಜಸ್ ಅವರ್ ವ್ಯೂ ಆಫ್ ದಿ ವರ್ಲ್ಡ್” ವಿಷಯದ ಬಗ್ಗೆ ಉಪನ್ಯಾಸವನ್ನು ತಾರಾಲಯದಲ್ಲಿ ಏರ್ಪಡಿಸಲಾಗಿದೆ. ಪ್ರವೇಶ ಉಚಿತ.


'ಕಾಪಿ ವಿತ್ ಕ್ಯೂರಿಯಾಸಿಟಿ'

17.03.2019 ರಂದು ಸಂಜೆ 4 ಗಂಟೆಗೆ ಬೆಂಗಳೂರಿನ ಐ.ಐ.ಎಸ್.ಸಿ. ಸಂಸ್ಥೆಯ ಪ್ರೊ. ಜಯವಂತ್ ಎಚ್. ಅರಕೆರಿ ಅವರಿಂದ "ಹೌ ಫಿಷ್ ಸ್ವಿಮ್" ವಿಷಯದ ಬಗ್ಗೆ ಉಪನ್ಯಾಸವನ್ನು ತಾರಾಲಯದಲ್ಲಿ ಏರ್ಪಡಿಸಲಾಗಿದೆ. ಪ್ರವೇಶ ಉಚಿತ.


'ಕಾಪಿ ವಿತ್ ಕ್ಯೂರಿಯಾಸಿಟಿ'

10.02.2019 ರಂದು ಸಂಜೆ 4 ಗಂಟೆಗೆ ಮುಂಬೈನ ಟಿ.ಐ.ಎಫ್.ಆರ್.ನ ಪ್ರಾಚಾರ್ಯರಾದ ಪ್ರೊ. ಏಕನಾಥ್ ಘಾಟೆ ಅವರಿಂದ "ದ ತಾ ಆಫ್ ರಾಮಾನುಜನ್" ವಿಷಯದ ಬಗ್ಗೆ ಉಪನ್ಯಾಸವನ್ನು ತಾರಾಲಯದಲ್ಲಿ ಏರ್ಪಡಿಸಲಾಗಿದೆ. ಪ್ರವೇಶ ಉಚಿತ.


'ಕಾಪಿ ವಿತ್ ಕ್ಯೂರಿಯಾಸಿಟಿ'

20.01.2019ರಂದು ಸಂಜೆ 4 ಗಂಟೆಗೆ ಫ್ರೆಂಚ್ ವಿಶ್ವವಿಜ್ಞಾನಿ ಪ್ರೊ. ಫ್ರಾನ್ಕಾಯ್ಸ್ ಆರ್. ಬಚೆಟ್ ಅವರಿಂದ “ಅವರ್ ಅಮೇಜಿಂಗ್ ಯೂನಿವರ್ಸ್” ವಿಷಯದ ಬಗ್ಗೆ ಉಪನ್ಯಾಸವನ್ನು ತಾರಾಲಯದಲ್ಲಿ ಏರ್ಪಡಿಸಲಾಗಿದೆ. ಪ್ರವೇಶ ಉಚಿತ.


ಜವಾಹರ್ ಲಾಲ್ ನೆಹರು ತಾರಾಲಯವು “ಖಗೋಳ ಉತ್ಸವ – IAU ಗೆ 100 ವರ್ಷಗಳು” ಎಂಬ ಶೀರ್ಷಿಕೆಯಡಿಯಲ್ಲಿ ಉತ್ಸವವನ್ನು 2019ರ ಜನವರಿ 10 ರಿಂದ 13 ರವರೆಗೆ ಆಯೋಜಿಸಿದೆ.


ಕಾಪಿ ವಿತ್ ಕ್ಯೂರಿಯಾಸಿಟಿ' 9.12.2018 ರಂದು ಸಂಜೆ 4 ಗಂಟೆಗೆ ಪುಣೆಯ ಐ.ಐ.ಎಸ್.ಇ.ಆರ್. ಸಂಸ್ಥೆಯ ಆಹ್ವಾನಿತ ಪ್ರಾಚಾರ್ಯರಾದ ಪ್ರೊ. ದೀಪಕ್ ಧಾರ್ ಅವರಿಂದ “ಸ್ಟೇಟ್ಸ್ ಮ್ಯಾಟರ್” ವಿಷಯದ ಬಗ್ಗೆ ಕಾಪಿ ವಿತ್ ಕ್ಯೂರಿಯಾಸಿಟಿ ಮಾಲಿಕೆಯಡಿಯಲ್ಲಿ ಉಪನ್ಯಾಸವನ್ನು ತಾರಾಲಯದಲ್ಲಿ ಏರ್ಪಡಿಸಲಾಗಿದೆ. ಪ್ರವೇಶ ಉಚಿತ.


ಕಾಪಿ ವಿತ್ ಕ್ಯೂರಿಯಾಸಿಟಿ' 14.10.2018 ರಂದು ಸಂಜೆ 4 ಗಂಟೆಗೆ ಕೇಂದ್ರ ಸರ್ಕಾರದ ಪ್ರಧಾನ ವೈಜ್ಞಾನಿಕ ಸಲಹೆಗಾರರಾದ ಪ್ರೊ. ಕೆ. ವಿಜಯ ರಾಘವನ್ ಅವರಿಂದ “ಸೈನ್ಸ್, ದಿ ಫಲ್ಕ್ರಮ್ ಫಾರ್ ಸೋಷಿಯಲ್ ಎಕನಾಮಿಕ್ ಚೇಂಜ್” ವಿಷಯದ ಬಗ್ಗೆ ಕಾಪಿ ವಿತ್ ಕ್ಯೂರಿಯಾಸಿಟಿ ಮಾಲಿಕೆಯಡಿಯಲ್ಲಿ ಉಪನ್ಯಾಸವನ್ನು ತಾರಾಲಯದಲ್ಲಿ ಏರ್ಪಡಿಸಲಾಗಿದೆ. ಪ್ರವೇಶ ಉಚಿತ.


09.09.2018 ರಂದು ಸಂಜೆ 4 ಗಂಟೆಗೆ ಇಂಡಿಯನ್ ಸ್ಟ್ಯಾಟಿಸ್ಟಿಕಲ್ ಇನ್ಸ್ಟಿಟ್ಯೂಟ್ ನ ಪ್ರೊ. ತನ್ವಿ ಜೈನ್ ಅವರಿಂದ "ಎ ಫಿನಿಟ್ ಡಿಸ್ಕಷನ್ ಆನ್ ದಿ ಇನ್ ಫಿನಿಟ್” ವಿಷಯದ ಬಗ್ಗೆ ಕಾಪಿ ವಿತ್ ಕ್ಯೂರಿಯಾಸಿಟಿ ಮಾಲಿಕೆಯಡಿಯಲ್ಲಿ ಉಪನ್ಯಾಸವನ್ನು ತಾರಾಲಯದಲ್ಲಿ ಏರ್ಪಡಿಸಲಾಗಿದೆ. ಪ್ರವೇಶ ಉಚಿತ.


ಜೈಪುರದ ರಾಜಸ್ತಾನ್ ವಿಶ್ವವಿದ್ಯಾನಿಲಯದ ಭೌತಶಾಸ್ತ್ರದ ಮಾಜಿ ಪ್ರಾಚಾರ್ಯರಾದ ಪ್ರೊ. ಎಸ್. ಲೋಕನಾಥನ್ ಮತ್ತು ತಾರಾಲಯದ ಆಹ್ವಾನಿತ ವಿಜ್ಞಾನಿ ಡಾ. ಬಿ. ಎಸ್. ಶೈಲಜಾ ಅವರಿಂದ "ಮೇಘನಾದ್ ಸಾಹಾ" ಅವರ 125ನೇ ಜನ್ಮದಿನಾಚರಣೆಯ ಪ್ರಯುಕ್ತ ವಿಶೇಷ ಉಪನ್ಯಾಸವನ್ನು ಏರ್ಪಡಿಸಲಾಗಿದೆ. ದಿನಾಂಕ: ಸಮಯ: 6ನೇ ಅಕ್ಟೋಬರ್ 2018 ಸಂಜೆ 5:30 ಘಂಟೆಗೆ. ಪ್ರವೇಶ ಉಚಿತ.


'ಬಾಹ್ಯಾಕಾಶ ವಿಜ್ಞಾನ'

ಜವಾಹರ್ ಲಾಲ್ ನೆಹರು ತಾರಾಲಯವು ಅಕ್ಟೋಬರ್ 4, 2018 ರಂದು ಪ್ರೌಢಶಾಲಾ ಶಿಕ್ಷಕರಿಗಾಗಿ ಒಂದು ದಿನದ ಕಾರ್ಯಾಗಾರವನ್ನು ಆಯೋಜಿಸಿದೆ. ಇಸ್ರೋದ ಪ್ರೊ. ಪಿ. ಜೆ. ಭಟ್ ಹಾಗೂ ನಿಯಾಸ್ ನ ಪ್ರೊ. ಎಮ್. ಬಿ. ರಜನಿ ಹಾಗೂ ಪ್ರೊ. ಅಸ್ಮಿತ ಮೊಹಾಂತಿ ರವರಿಂದ ಉಪನ್ಯಾಸಗಳನ್ನು ಏರ್ಪಡಿಸಲಾಗಿದೆ. ಶುಲ್ಕ ತಲಾ ರೂ.250/-.

ಈ ಉಪನ್ಯಾಸಗಳ ನಂತರ ಧಾರವಾಡದ ಕೃಷಿ ವಿಶ್ವವಿದ್ಯಾಲಯದ ಸಹಾಯಕ ಪ್ರಾಚಾರ್ಯರಾದ ಡಾ|| ರವಿಕುಮಾರ್ ಹೊಸಮನಿ ರವರಿಂದ “ಬಾಹ್ಯಾಕಾಶ ಡ್ರೊಸೋಫಿಲಾ : ಗಗನಯಾನಿಗಳ ಆರೋಗ್ಯದ ಕನ್ನಡಿ” ವಿಷಯದ ಕುರಿತು ಸಾರ್ವಜನಿಕರಿಗಾಗಿ ವಿಶೇಷ ಉಪನ್ಯಾಸವನ್ನು ಸಂಜೆ 4 ಘಂಟೆಗೆ ಆಯೋಜಿಸಲಾಗಿದೆ. ಪ್ರವೇಶ ಉಚಿತ.


ವಿಶೇಷ ಉಪನ್ಯಾಸಗಳು

ಸ್ಥಳೀಯ ಪ್ರತಿಷ್ಠಿತ ಸಂಸ್ಥೆಗಳ ಸಹಯೋಗದೊಂದಿಗೆ ವಿಜ್ಞಾನ ವಿಷಯವಾಗಿ ದೇಶ-ವಿದೇಶಗಳ ವಿವಿಧ ಸಂಶೋಧನಾ ಸಂಸ್ಥೆಯ ಹಿರಿಯ ವಿಜ್ಞಾನಿಗಳಿಂದ ಸಾರ್ವಜನಿಕರಿಗೆ ಉಪನ್ಯಾಸ ಕಾರ್ಯಕ್ರಮಗಳನ್ನು ತಾರಾಲಯವು ಆಯೋಜಿಸುತ್ತಿದೆ. ಉಚಿತ ಪ್ರವೇಶವಿರುವ ಈ ಉಪನ್ಯಾಸಗಳ ಆಯೋಜನೆ ಕುರಿತಾಗಿ ಮಾಹಿತಿಯನ್ನು ಪತ್ರಿಕಾ ಪ್ರಕಟಣೆ, ಅಂತರ್ಜಾಲ ಮತ್ತು ಇತರೆ ಮಾಧ್ಯಮಗಳ ಮೂಲಕ ಆಸಕ್ತರಿಗೆ ತಿಳಿಸಲಾಗುವುದು.


'ದಿ ಡಿಸ್ಕವರಿ ಆಫ್ ಹೀಲಿಯಂ – 150ನೇ ವರ್ಷ'

ಬೆಂಗಳೂರಿನ ರಾಮನ್ ಸಂಶೋಧನಾ ಸಂಸ್ಥೆಯ ಖಗೋಳ ವಿಜ್ಞಾನಿ ಪ್ರೊ. ಬಿಮನ್ ನಾಥ್ ಅವರಿಂದ 'ದಿ ಡಿಸ್ಕವರಿ ಆಫ್ ಹೀಲಿಯಂ – 150ನೇ ವರ್ಷ' ವಿಷಯದ ಕುರಿತು 18ನೇ ಆಗಸ್ಟ್ 2018 ರಂದು ಸಂಜೆ 5.30ಕ್ಕೆ ವಿಶೇಷ ಉಪನ್ಯಾಸವನ್ನು ತಾರಾಲಯದಲ್ಲಿ ಏರ್ಪಡಿಸಲಾಗಿದೆ. ಪ್ರವೇಶ ಉಚಿತ.


19.08.2018 ರಂದು ಸಂಜೆ 4 ಗಂಟೆಗೆ ಪ್ರೊ. ಅರವಿಂದ್ ಗುಪ್ತ ಅವರಿಂದ "ಮೇಕಿಂಗ್ ಥಿಂಗ್ಸ್, ಡೂಯಿಂಗ್ ಸೈನ್ಸ್” ವಿಷಯದ ಬಗ್ಗೆ ಕಾಪಿ ವಿತ್ ಕ್ಯೂರಿಯಾಸಿಟಿ ಮಾಲಿಕೆಯಡಿಯಲ್ಲಿ ಉಪನ್ಯಾಸವನ್ನು ತಾರಾಲಯದಲ್ಲಿ ಏರ್ಪಡಿಸಲಾಗಿದೆ. ಪ್ರವೇಶ ಉಚಿತ.


22.07.2018 ರಂದು ಸಂಜೆ 4 ಗಂಟೆಗೆ ಬರ್ಲಿನ್ ನ ಟೆಕ್ನಿಕಲ್ ಯೂನಿವರ್ಸಿಟಿಯ ಪ್ರೊ. ಅಲೆಕ್ಸಾಂಡರ್ ಬೊಬೆಂಕೊ ಅವರಿಂದ “ದಿ ಡಿಸ್ಕ್ರೀಟ್ ಚಾರ್ಮ್ ಆಫ್ ಜಾಮಿಟ್ರಿ” ವಿಷಯದ ಬಗ್ಗೆ ಕಾಪಿ ವಿತ್ ಕ್ಯೂರಿಯಾಸಿಟಿ ಮಾಲಿಕೆಯಡಿಯಲ್ಲಿ ಉಪನ್ಯಾಸವನ್ನು ತಾರಾಲಯದಲ್ಲಿ ಏರ್ಪಡಿಸಲಾಗಿದೆ. ಪ್ರವೇಶ ಉಚಿತ.


'ಕ್ಷುದ್ರಗ್ರಹಗಳ ದಿನ' – 30ನೇ ಜೂನ್ 2018

ಜವಾಹರ್‍ಲಾಲ್ ನೆಹರು ತಾರಾಲಯವು ಎರಡು ಉಪನ್ಯಾಸಗಳು ಮತ್ತು ಭಿತ್ತಿಚಿತ್ರಗಳ ಪ್ರದರ್ಶನವನ್ನು ಆಯೋಜಿಸಿದೆ. ಮಾತ್ರವಲ್ಲದೇ, ಜನಸಾಮಾನ್ಯರಿಗೆ ಅತಿ ವಿರಳವಾಗಿ ನೋಡಲು ಅವಕಾಶ ಸಿಗುವ, ಕ್ಷುದ್ರಗ್ರಹಗಳ ಪ್ರದರ್ಶನವನ್ನು ಆಯೋಜಿಸಲಾಗಿದೆ. ಮುಂಬೈನ ಆಕಾಶ್ ಗಂಗಾ ಸೆಂಟರ್ ಫಾರ್ ಅಸ್ಟ್ರಾನಮಿಯ ನಿರ್ದೇಶಕರಾದ ಡಾ. ಭರತ್ ಅಡೂರ್ ಅವರಿಂದ “ಡಿಟೆಕ್ಷನ್ ಆಫ್ ಮೀಟಿಯರೈಡ್ಸ್ ಅಂಡ್ ಮೆತಡ್ಸ್ ಆಫ್ ಅನಾಲಿಸಿಸ್” ವಿಷಯದ ಕುರಿತು ಕಾಲೇಜು ವಿದ್ಯಾರ್ಥಿಗಳಿಗಾಗಿ ಒಂದು ಉಪನ್ಯಾಸವನ್ನು ಮಧ್ಯಾಹ್ನ 2 ಗಂಟೆಗೆ ಏರ್ಪಡಿಸಲಾಗಿದೆ. ಅಹಮದಾಬಾದಿನ ಫಿಸಿಕಲ್ ರಿಸರ್ಚ್ ಲೆಬೊರೇಟರಿಯ ಡಾ. ನರೇಂದ್ರ ಭಂಡಾರಿ ಅವರಿಂದ “ಫಾಲಿಂಗ್ ಸ್ಟೋನ್ಸ್, ಕೊಲೈಡಿಂಗ್ ಅಸ್ಟಿರೈಡ್ಸ್ ಅಂಡ್ ಸೀಕ್ರೆಟ್ಸ್ ಆಫ್ ದಿ ಯೂನಿವರ್ಸ್” ವಿಷಯದ ಕುರಿತು ಸಾರ್ವನಿಕರಿಗಾಗಿ ಮತ್ತೊಂದು ಉಪನ್ಯಾಸವನ್ನು ಸಂಜೆ 4:30 ಕ್ಕೆ ಏರ್ಪಡಿಸಲಾಗಿದೆ.

ಉಪನ್ಯಾಸಗಳಲ್ಲಿ ಭಾಗವಹಿಸಲು ಇಚ್ಛಿಸುವವರು ಜೂನ್ 28ರೊಳಗೆ ತಾರಾಲಯದ ಕಛೇರಿಯಲ್ಲಿ ನೋಂದಾಯಿಸಬೇಕು. ಹೀಗೆ ನೋಂದಾಯಿಸಿಕೊಂಡವವರಿಗೆ ಮಾತ್ರವೇ ಉಪನ್ಯಾಸದಲ್ಲಿ ಭಾಗವಹಿಸಲು ಅವಕಾಶವಿರುತ್ತದೆ. ಭಿತ್ತಿಚಿತ್ರ ಮತ್ತು ಕ್ಷುದ್ರಗ್ರಹಗಳ ಪ್ರದರ್ಶನವು ಬೆಳಿಗ್ಗೆ 10.30 ರಿಂದ ಸಂಜೆ 4.30 ರವರೆಗೂ ಎಲ್ಲಾ ವೀಕ್ಷಕರಿಗೂ ಲಭ್ಯವಿರುತ್ತದೆ.


ಕಾಪಿ ವಿತ್ ಕ್ಯೂರಿಯಾಸಿಟಿ' 10.06.2018 ರಂದು ಸಂಜೆ 4 ಗಂಟೆಗೆ ಯು.ಕೆ.ಯ ಯೂನಿವರ್ಸಿಟಿ ಆಫ್ ಬ್ರಿಸ್ಟೋಲ್ ನ ಪ್ರೊ. ಮೈಕೆಲ್ ಬೆರ್ರಿ ಅವರಿಂದ “ಹೌ ಕ್ವಾಂಟಮ್ ಫಿಸಿಕ್ಸ್ ಡೆಮಾಕ್ರಟೈಸ್ಡ್ ಮ್ಯೂಸಿಕ್ : ಎ ಮೆಡಿಟೇಷನ್ ಆನ್ ಫಿಸಿಕ್ಸ್ ಅಂಡ್ ಟೆಕ್ನಾಲಜಿ” ವಿಷಯದ ಬಗ್ಗೆ ಕಾಪಿ ವಿತ್ ಕ್ಯೂರಿಯಾಸಿಟಿ ಮಾಲಿಕೆಯಡಿಯಲ್ಲಿ ಉಪನ್ಯಾಸವನ್ನು ತಾರಾಲಯದಲ್ಲಿ ಏರ್ಪಡಿಸಲಾಗಿದೆ. ಪ್ರವೇಶ ಉಚಿತ.


27.05.2018 ರಂದು ಸಂಜೆ 4 ಗಂಟೆಗೆ ಬೆಂಗಳೂರಿನ ರಾಮನ್ ಸಂಶೋಧನಾ ಸಂಸ್ಥೆಯ ಥಿಯರೆಟಿಕಲ್ ಫಿಸಿಸಿಸ್ಟ್ ಆದ ಪ್ರೊ. ಜೋಸೆಫ್ ಸ್ಯಾಮ್ಯುಲ್ ಅವರಿಂದ ‘ಬ್ಲ್ಯಾಕ್ ಹೋಲ್ಸ್ ಅಂಡ್ ಸ್ಟೀಮ್ ಎಂಜಿನ್ಸ್’ ವಿಷಯದ ಬಗ್ಗೆ ಕಾಪಿ ವಿತ್ ಕ್ಯೂರಿಯಾಸಿಟಿ ಮಾಲಿಕೆಯಡಿಯಲ್ಲಿ ಉಪನ್ಯಾಸವನ್ನು ತಾರಾಲಯದಲ್ಲಿ ಏರ್ಪಡಿಸಲಾಗಿದೆ.


ದಿ.22.04.2018 ರಂದು ಸಂಜೆ 4 ಗಂಟೆಗೆ ಪ್ಯಾರಿಸ್ ನ ಇ.ಎಸ್.ಪಿ.ಸಿ.ಐ. ಸಂಸ್ಥೆಯ ಸಹಾಯಕ ಪ್ರಾಧ್ಯಾಪಕರಾದ ಪ್ರೊ. ಜೋರಾನಾ ಜೆರಾವಿಕ್ ಅವರಿಂದ ‘ಟುವರ್ಡ್ಸ್ ಲೈಫ್ ಇನ್ ಎ ಜಾರ್’ ವಿಷಯದ ಬಗ್ಗೆ ಕಾಪಿ ವಿತ್ ಕ್ಯೂರಿಯಾಸಿಟಿ ಮಾಲಿಕೆಯಡಿಯಲ್ಲಿ ಉಪನ್ಯಾಸವನ್ನು ತಾರಾಲಯದಲ್ಲಿ ಏರ್ಪಡಿಸಲಾಗಿದೆ.


'ಶೂನ್ಯ ನೆರಳಿನ ದಿನ'ದ ಕುರಿತು ಒಂದು ವಿಶೇಷ ಉಪನ್ಯಾಸವನ್ನು 24.04.2018ರಂದು ಬೆಳಿಗ್ಗೆ 11 ರಿಂದ 12 ರವರೆಗೆ ಏರ್ಪಡಿಸಲಾಗಿದೆ. ಈ ಘಟನೆಯನ್ನು ಪ್ರಾತ್ಯಕ್ಷಿಕೆಗಳ ಮೂಲಕ ಮಧ್ಯಾಹ್ನ 12:17 ಕ್ಕೆ ಆವರಣದಲ್ಲಿ ನಿರೂಪಿಸಲಾಗುತ್ತದೆ. ಪ್ರವೇಶ ಉಚಿತ.


ದಿ.25.03.2018 ರಂದು ಸಂಜೆ 4 ಗಂಟೆಗೆ ಬೆಂಗಳೂರಿನ ರಾಷ್ಟ್ರೀಯ ಜೀವ ವಿಜ್ಞಾನ ಕೇಂದ್ರದ ಪ್ರೊ. ಶ್ಯಾನನ್ ಓಲ್ಸನ್ ಅವರಿಂದ ‘ಎಂಡ್ಲೆಸ್ ಫಾರ್ಮ್ಸ್ ಮೋಸ್ಟ್ ಬ್ಯೂಟಿಫುಲ್’ ವಿಷಯದ ಬಗ್ಗೆ ಕಾಪಿ ವಿತ್ ಕ್ಯೂರಿಯಾಸಿಟಿ ಮಾಲಿಕೆಯಡಿಯಲ್ಲಿ ಉಪನ್ಯಾಸವನ್ನು ತಾರಾಲಯದಲ್ಲಿ ಏರ್ಪಡಿಸಲಾಗಿದೆ.


ದಿ.25.02.2018 ರಂದು ಸಂಜೆ 4 ಗಂಟೆಗೆ ಬೆಂಗಳೂರಿನ ರಾಮನ್ ಸಂಶೋಧನಾ ಸಂಸ್ಥೆಯ ಸಹಾಯಕ ಪ್ರಾಚಾರ್ಯರಾದ ಪ್ರೊ. ಊರ್ಬಸಿ ಸಿಂಗ್ ಅವರಿಂದ ‘ಫ್ಯಾಸಿನೇಟಿಂಗ್ ವರ್ಲ್ಡ್ ಆಫ್ ಫೋಟಾನ್ಸ್, ಸೂಪರ್ ಪೊಸಿಷನ್ ಅಂಡ್ ಎಂಟಾಂಗ್ಲ್ ಮೆಂಟ್’ ವಿಷಯದ ಬಗ್ಗೆ ಕಾಪಿ ವಿತ್ ಕ್ಯೂರಿಯಾಸಿಟಿ ಉಪನ್ಯಾಸ ಮಾಲಿಕೆಯಡಿಯಲ್ಲಿ ತಾರಾಲಯದಲ್ಲಿ ಏರ್ಪಡಿಸಲಾಗಿದೆ.