ಬೇಸಿಗೆ ಶಿಬಿರ - 2022

ಬೇಸಿಗೆ ಶಿಬಿರದ ನೋಂದಣಿಯು ಬುಕ್ ಮೈ ಶೋ ಜಾಲತಾಣದಲ್ಲಿ 2022 ರ ಮಾರ್ಚ್ 29 ರಿಂದ ಆರಂಭವಾಗಲಿದೆ. ನೋಂದಣಿಯ ವಿವರಗಳನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು.

ಮತ್ತಷ್ಟು ಓದಿ

ಬೇಸಿಗೆಯ ಶಿಬಿರಗಳು

ವಿಜ್ಞಾನದ ವಿವಿಧ ವಿಧಾನಗಳನ್ನು ಕಿರಿಯ ವಯಸ್ಸಿನಲ್ಲಿಯೇ ಪರಿಚಯಿಸಲಾಗುತ್ತದೆ. ಸುಲಭವಾದ ಕ್ರಿಯಾಶೀಲ ಚಟುವಟಿಕೆಗಳು ಮತ್ತು ಪ್ರಯೋಗಗಳನ್ನು ಮಾಡಿಸಲಾಗುತ್ತದೆ. ಇದಕ್ಕಿಂತ ಗಹನವಾದ ಪ್ರಯೋಗಗಳ ಪರಿಚಯವನ್ನು ವಾರಾಂತ್ಯದ ತರಗತಿಗಳಲ್ಲಿ ಮಾಡಿಸಲಾಗುತ್ತದೆ.

ಚಿಣ್ಣರ ಕಾರ್ಯಕ್ರಮ :

ಮೂರರಿಂದ ಐದನೇ ತರಗತಿಯ ವಿದ್ಯಾರ್ಥಿಗಳು ಅರ್ಹರಾಗಿರುತ್ತಾರೆ: ಬೆಳಕು, ಬಣ್ಣ, ಶಬ್ದ, ಸರಳ ಯಂತ್ರಗಳು ಮತ್ತು ಗಣಿತಶಾಸ್ತ್ರಕ್ಕೆ ಸಂಬಂಧಿಸಿದ ವೈಜ್ಞಾನಿಕ ಪರಿಕಲ್ಪನೆಗಳನ್ನು ಕ್ರಿಯಾತ್ಮಕ ಚಟುವಟಿಕೆಗಳ ಮೂಲಕ ಹೇಳಿಕೊಡಲಾಗುತ್ತದೆ.

ಬೇಸಿಗೆ ಶಿಬಿರದಲ್ಲಿ ಹಿರಿಯ ವಿದ್ಯಾರ್ಥಿಗಳಿಗಾಗಿ ಎರಡರಿಂದ ಮೂರು ವಿವಿಧ ಬಗೆಯ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ.

ಫನ್ ವಿತ್ ಸೈನ್ಸ್

ಇದರ ಉದ್ದೇಶ ಪ್ರಯೋಗಗಳ ಮೂಲಕ ಕಲಿಸುವುದಾಗಿದೆ.

ಇಲ್ಲಿ, ಆರನೇ ಮತ್ತು ಏಳನೇ ತರಗತಿಯ ವಿದ್ಯಾರ್ಥಿಗಳಿಗೆ ಪ್ರಯೋಗಗಳ ಮೂಲಕ ವೈಜ್ಞಾನಿಕ ವಿಷಯಗಳ ಪರಿಚಯ ಮಾಡಿಸಲಾಗುತ್ತದೆ. ಈ ಕಾರ್ಯಕ್ರಮದಡಿಯಲ್ಲಿ ಮಕ್ಕಳು ಹಲವು ಪ್ರಯೋಗಗಳನ್ನು ನಡೆಸುತ್ತಾರೆ. ಗೆಯರುಗಳು, ಪಂಪುಗಳು, ಸಂಗೀತ ಸಾಧನಗಳು ಇತ್ಯಾದಿಗಳ ಬಗ್ಗೆ ಚಟುವಟಿಕೆಗಳ ಮೂಲಕ ಕಲಿಯುತ್ತಾರೆ.

ವಿದ್ಯಾರ್ಥಿಗಳ ಗರಿಷ್ಠ ಸಂಖ್ಯೆ : ಪ್ರತಿ ಗುಂಪಿನಲ್ಲಿ 35 ಮಂದಿ

ಕಾರ್ಯಕ್ರಮದ ಅವಧಿ : ಐದು ಕೆಲಸದ ದಿನಗಳು.

ಕಂಪ್ಯೂಟರ್ ಏಡೆಡ್ ಲರ್ನಿಂಗ್ :

ಎಂಟರಿಂದ ಹತ್ತನೇ ತರಗತಿಯ ವಿದ್ಯಾರ್ಥಿಗಳಿಗೆ ಗಣಕಯಂತ್ರದ ಪ್ರೋಗ್ರಾಮಿಂಗ್ ನ ವಿವಿಧ ಮೂಲಭೂತ ತತ್ವಗಳನ್ನು ಕಲಿಸಲಾಗುತ್ತದೆ.

ವಿದ್ಯಾರ್ಥಿಗಳ ಗರಿಷ್ಠ ಸಂಖ್ಯೆ: 20

ಅವಧಿ: ಐದು ಕೆಲಸದ ದಿನಗಳು

ಬೇಸಿಗೆ ಶಿಬಿರ :

ಹದಿನೈದು ದಿನಗಳ ಈ ಕಾರ್ಯಕ್ರಮದಲ್ಲಿ ವಿಜ್ಞಾನದ ಪರಿಕಲ್ಪನೆಗಳನ್ನು ಅಂತರ ಶಾಸ್ತ್ರೀಯ ಕ್ರಮದಲ್ಲಿ ಹೇಳಿಕೊಡಲಾಗುತ್ತದೆ. ‘ಬೆಳಕು’, ’ಶಬ್ದ, ಜಲ’ ಇತ್ಯಾದಿ ವಿಚಾರಗಳನ್ನು ಅರ್ಥೈಸಿಕೊಳ್ಳುವಲ್ಲಿ ಖಗೋಳವಿಜ್ಞಾನ, ಭೌತಶಾಸ್ತ್ರ, ರಸಾಯನ ಶಾಸ್ತ್ರ, ಜೀವಶಾಸ್ತ್ರ, ಭೂವಿಜ್ಞಾನ ಮೊದಲಾದ ವಿಷಯಗಳನ್ನು ಸಮಗ್ರವಾಗಿ ಅಧ್ಯಯಿಸುವ ವಿಧಾನವನ್ನು ಚರ್ಚಿಸಲಾಗುತ್ತದೆ. ಈ ವಿಧಾನವು ವಿದ್ಯಾರ್ಥಿಗಳಿಗೆ ಯಾವುದೇ ವಿಷಯವನ್ನು ಸಮಗ್ರವಾಗಿ ವಿಶ್ಲೇಷಿಸಲು ಅನುವು ಮಾಡಿ ಕೊಡುತ್ತದೆ.

ಅಗತ್ಯವಿದ್ದಾಗ, ಪ್ರಾಯೋಗಿಕ ಅನುಭವಗಳನ್ನು ಒದಗಿಸಲು ಆಯಾ ವಿಷಯಕ್ಕೆ ಸಂಬಂಧಪಟ್ಟ ಸಂಶೋಧನಾ ಸಂಸ್ಥೆಗಳಿಗೆ ಭೇಟಿಯನ್ನು ಏರ್ಪಡಿಸಲಾಗುತ್ತದೆ.

ಮಕ್ಕಳಲ್ಲಿ ಆರೋಗ್ಯ ಶಿಕ್ಷಣದ ಬಗ್ಗೆ ಅರಿವು ಮೂಡಿಸಲು ವೈದ್ಯರಿಂದ ವಿಶೇಷ ಉಪನ್ಯಾಸಗಳನ್ನು ಏರ್ಪಡಿಸಲಾಗುತ್ತದೆ. ಅಲ್ಲದೆ, ಅತ್ಯಂತ ಹೆಸರುವಾಸಿಯಾದ ಮತ್ತು ವಿದ್ಯಾರ್ಥಿಗಳಿಗೆ ಹೆಚ್ಚು ಪ್ರೇರಣೆಯನ್ನು ನೀಡುವ ವಿಜ್ಞಾನ ವಿಡಿಯೋ ಉಪನ್ಯಾಸವಾದ-”ಕ್ರಿಸ್ಮಸ್ ಉಪನ್ಯಾಸ” ಗಳನ್ನೂ ತೋರಿಸಲಾಗುವುದು.

ಗರಿಷ್ಠ ವಿದ್ಯಾರ್ಥಿಗಳ ಸಂಖ್ಯೆ : 40

ಅವಧಿ : ಹದಿನೈದು ಕೆಲಸದ ದಿನಗಳು

ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಒಂದು ದಿನದ ಕಮ್ಮಟ :

ಬೇಸಿಗೆ ರಜೆಯಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಒಂದು ದಿನದ ಕಮ್ಮಟವನ್ನು ಭಾನುವಾರಗಳಂದು ನಡೆಸಲಾಗುತ್ತದೆ.

ಇವು ಚಟುವಟಿಕೆ ಮತ್ತು ಚರ್ಚೆ-ಆಧಾರಿತ ಕಮ್ಮಟಗಳು. , ಇದರಲ್ಲಿ ವಿದ್ಯಾರ್ಥಿಗಳು ‘ಸಾಬೂನಿನ ಪದರ ಮತ್ತು ಅದರ ಗುಳ್ಳೆಗಳು’, ಮೇಣದ ಬತ್ತಿಯಲ್ಲಿನ ವಿಜ್ಞಾನ, ರಂಜನೀಯ ಗಣಿತ' - ಗಳಂತಹ ಹಲವಾರು ವಿಷಯಗಳನ್ನು ಕಲಿಯುತ್ತಾರೆ;

ಫ್ರಮ್ ವೆಬ್ ಆಫ್ ಲೈಫ್ ಟು ಯೂನಿವರ್ಸ್

ಕಾಲೇಜು ವಿದ್ಯಾರ್ಥಿಗಳಿಗಾಗಿ ಹತ್ತು ದಿನಗಳ ಕಾಲ ನಡೆಸುವ ಈ ಕಾರ್ಯಕ್ರಮವು, ಸಂಶೋಧನೆಯ ವಿವಿಧ ವಿಷಯಗಳ ಪರಿಚಯವನ್ನು ನೀಡುತ್ತದೆ. ಈ ಉಪನ್ಯಾಸಗಳು ಪದವಿಪೂರ್ವ ವಿದ್ಯಾರ್ಥಿಗಳಿಗೆ ವಿವಿಧ ಕ್ಷೇತ್ರಗಳಲ್ಲಿ ಸಂಶೋಧನೆ ಮಾಡಲು ಸಹಾಯಕಾರಿ. ಪ್ರತಿಷ್ಠಿತ ಸಂಶೋಧನಾ ಸಂಸ್ಥೆಗಳ ಬೋಧಕರು ಪದವಿಪೂರ್ವ ವಿದ್ಯಾರ್ಥಿಗಳಿಗೆ ಸಂಶೋಧನೆಯ ಕ್ರಮಗಳ ಬಗ್ಗೆ ಅರ್ಥವಾಗುವ ಹಾಗೆ ತರಗತಿ ನಡೆಸುತ್ತಾರೆ.

ಉಪನ್ಯಾಸಗಳ ಹೊರತಾಗಿ, 'ಕ್ರಿಸ್ಮಸ್ ಲೆಕ್ಚರ್ಸ್' ಎಂಬ ಹೆಸರಿನ ಅತೀ ಜನಪ್ರಿಯ ಮತ್ತು ಹೆಚ್ಚು ಪ್ರೇರಣಾತ್ಮಕ ವಿಜ್ಞಾನ ವೀಡಿಯೋ ಉಪನ್ಯಾಸ ಸರಣಿಯನ್ನು ಪ್ರದರ್ಶಿಸಲಾಗುತ್ತದೆ.

ವಿದ್ಯಾರ್ಥಿಗಳ ಗರಿಷ್ಠ ಸಂಖ್ಯೆ : 40

ಅವಧಿ : ಹತ್ತು ಕೆಲಸದ ದಿನಗಳು ಸಮಯ : 10:30 ರಿಂದ 3:30 ಕ್ಕೆ

ಈ ಎಲ್ಲ ಚಟುವಟಿಕೆಗಳು, ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಸಂಶೋಧನೆಯ ಬೀಜ ಮೊಳೆಯುವಂತೆ ಮಾಡುವುದಲ್ಲದೆ, ಯಾವುದೇ ಕ್ಷೇತ್ರದಲ್ಲೂ ವೈಜ್ಞಾನಿಕ ಮನೋಭಾವ ಬೆಳೆಯುವಲ್ಲಿ ಸಹಕಾರಿಯಾಗುವುದು.