ಕಮ್ಮಟಗಳು

ತಿಂಗಳ ವಿಜ್ಞಾನ ಕೂಟ ದಿ.11.04.2021 ರಂದು ಸಂ.4 – 5:30 ರವರೆಗೆ

ಈ ಬಾರಿಯ ವಿಜ್ಞಾನ ಕೂಟದಲ್ಲಿ, ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಾದ ಬೆಳವಣಿಗೆಗಳಿಂದ ಸಂಚರಣೆ ವ್ಯವಸ್ಥೆಯಲ್ಲಾಗಿರುವ ಮಹತ್ತರ ಬೆಳವಣಿಗೆಗಳ ಕುರಿತು ಚರ್ಚಿಸಲಾಗುವುದು. ಜನಸಾಮಾನ್ಯರ ವೈಯಕ್ತಿಕ ವಾಹನಗಳಿಂದ ಹಿಡಿದು ಬೃಹತ್ ಹಡಗುಗಳು ಹಾಗೂ ಬಾಹ್ಯಾಕಾಶ ವಾಹನಗಳ ನಿರ್ಮಾಣದಲ್ಲೂ ತಂತ್ರಜ್ಞಾನ ಕ್ಷೇತ್ರದ ಬೆಳವಣಿಗೆಗಳು ಬಹು ಮುಖ್ಯ ಪಾತ್ರ ವಹಿಸುತ್ತವೆ. ಹಾಗೆಯೇ ಈ ಎಲ್ಲಾ ಬಗೆಯ ವಾಹನಗಳ ಸಂಚಾರ ವ್ಯವಸ್ಥೆಗೆ ಡಾಟಾ ಅನಾಲಿಟಿಕ್ಸ್ ಅತಿ ಮುಖ್ಯವೆನಿಸುತ್ತದೆ. ಆಯಾಕಟ್ಟಿನ ಪ್ರದೇಶದಲ್ಲುಂಟಾದ ಒಂದು ಘಟನೆ ಜಾಗತಿಕ ಸಂಚಾರ ವ್ಯವಸ್ಥೆಯನ್ನೇ ಬುಡಮೇಲು ಮಾಡಬಲ್ಲುದು. ಇಂತಹ ವಿಚಾರಗಳ ಕುರಿತು ಚರ್ಚಿಸುವುದೇ ಈ ಕೂಟದ ಧ್ಯೇಯವಾಗಿದೆ.


ದೂರದರ್ಶಕ ಜೋಡಣಾ ಕಮ್ಮಟದ ಉಪನ್ಯಾಸ

ದಿ. 1 ರಿಂದ 4ನೇ ಏಪ್ರಿಲ್ 2021 ರವರೆಗೆ ನಡೆಯಲಿರುವ ದೂರದರ್ಶಕ ಜೋಡಣಾ ಕಮ್ಮಟದ ಉಪನ್ಯಾಸ ಭಾಗದಲ್ಲಿ ಮಾತ್ರ ಭಾಗವಹಿಸಲಿಚ್ಛಿಸುವವರು ತಾರಾಲಯವನ್ನು ಸಂಪರ್ಕಿಸಿ.


ದಿ.14.03.2021 ರಂದು ಸಂ.4 – 5:30 ರವರೆಗೆ ವಿಜ್ಞಾನ ಕೂಟ

"ಗುರುತ್ವ"

ಈ ಬಾರಿಯ ವಿಜ್ಞಾನ ಕೂಟದಲ್ಲಿ ಗುರುತ್ವದ ಕುರಿತ ವಿಚಾರಧಾರೆಯು ಆರ್ಕಿಮಿಡೀಸ್ ಅವರ ಕಾಲಮಾನದವರೆಗೂ ಹೇಗೆ ಬದಲಾವಣೆ ಹೊಂದಿತು ಎಂಬುದನ್ನು ಚರ್ಚಿಸಲಾಗುವುದು. ಇತ್ತೀಚೆಗೆ ಪತ್ತೆಯಾದ ಗುರುತದ್ವದ ಅಲೆಗಳು ಮತ್ತು ಭೌತಶಾಸ್ತ್ರ ಹಾಗೂ ಖಗೋಳಶಾಸ್ತ್ರಗಳಿಗೆ ಸಂಬಂಧಿಸಿದಂತೆ ಈ ಅಲೆಗಳ ಪತ್ತೆಯ ಮಹತ್ವದ ಬಗ್ಗೆಯೂ ಇಲ್ಲಿ ಚರ್ಚಿಸಲಾಗುವುದು.


2021 ರ ಏಪ್ರಿಲ್ ತಿಂಗಳಿನಲ್ಲಿ "ದೂರದರ್ಶಕ ಜೋಡಣಾ ಕಮ್ಮಟ"

1 ರಿಂದ 4 ನೇ ಏಪ್ರಿಲ್ 2021 ರವರೆಗೆ ನಾಲ್ಕು ದಿನಗಳ ದೂರದರ್ಶಕಗಳನ್ನು ಜೋಡಿಸುವ ಕಾರ್ಯಾಗಾರವನ್ನು ಶಾಲೆಗಳು, ವಿಜ್ಞಾನ ಕೇಂದ್ರಗಳು ಮತ್ತು ಸಾರ್ವಜನಿಕರಿಗಾಗಿ ಆಯೋಜಿಸಿದೆ. ಈ ಕಾರ್ಯಾಗಾರದಲ್ಲಿ ಭಾಗವಹಿಸುವವರು 6" ನ್ಯೂಟೋನಿಯನ್ ದೂರದರ್ಶಕವನ್ನು ತಯಾರಿಸಿ ಕೊಂಡೊಯ್ಯಬಹುದಾಗಿದೆ. ಈ ಕಾರ್ಯಾಗಾರದಲ್ಲಿ ಖಗೋಳ ಶಾಸ್ತ್ರ ಮತ್ತು ನ್ಯೂಟೋನಿಯನ್ ದೂರದರ್ಶಕಗಳ ಕುರಿತಾದ ಉಪನ್ಯಾಸಗಳು ಮತ್ತು ಚರ್ಚೆಗಳು ಇರುತ್ತವೆ.


ಯೂನಿವರ್ಸ್ ಇನ್ ದಿ ಕ್ಲಾಸ್ ರೂಮ್

13 ಮತ್ತು 14ನೇ ಫೆಬ್ರವರಿ 2021 ರಂದು ಸಂ.4 ರಿಂದ 7 ರವರೆಗೆ "ಯೂನಿವರ್ಸ್ ಇನ್ ದಿ ಕ್ಲಾಸ್ ರೂಮ್" ಎಂಬ ಎರಡು ದಿನದ ಕಮ್ಮಟವನ್ನು ಸಾರ್ವಜನಿಕರಿಗಾಗಿ ಆಯೋಜಿಸಲಾಗಿದೆ. ಪ್ರವೇಶ ದರ ರೂ.350/-.


ದಿ.14.02.2021 ರಂದು ಸಂ.4 – 5:30 ರವರೆಗೆ ವಿಜ್ಞಾನ ಕೂಟ

"ಗೆಲಿಲಿಯೋ ಅವರ ವೈಜ್ಞಾನಿಕ ಜೀವನ ಗಾಥೆ"

ವಿಜ್ಞಾನದ ಸಿದ್ಧಾಂತ ಮತ್ತು ಪ್ರಯೋಗಗಳಿಗೆ ಗೆಲಿಲಿಯೋ ಅವರ ಕೊಡುಗೆಯು ಬಹಳ ಮಹತ್ವವುಳ್ಳದ್ದು. ಇವರ ಕಾರ್ಯಸಾಧನೆಯನ್ನು ವಿಜ್ಞಾನದ ಎಲ್ಲಾ ಭಾಗಗಳಲ್ಲಿ ಮುಖ್ಯವಾಗಿ ಚಲನಶಾಸ್ತ್ರ, ದೃಗ್ವಿಜ್ಞಾನ, ಜೀವವಿಜ್ಞಾನ ಮತ್ತು ಖಗೋಳ ವಿಜ್ಞಾನಗಳಲ್ಲಿ ಕಾಣಬಹುದಾಗಿದೆ. ಈ ಕೂಟದಲ್ಲಿ ಅವರ ಕಾರ್ಯಸಾಧನೆಯನ್ನು ವಿವಿಧ ಪ್ರಯೋಗಗಳು ಮತ್ತು ಚರ್ಚೆಯ ಮೂಲಕ ಪರಿಚಯಿಸಲಾಗುವುದು.

ಈ ವಿಜ್ಞಾನ ಕೂಟಕ್ಕೆ 7ನೇ ತರಗತಿ ಮತ್ತು ಮೇಲ್ಪಟ್ಟ ವಿದ್ಯಾರ್ಥಿಗಳು ಹಾಗೂ ಸಾಮಾನ್ಯ ವಿಜ್ಞಾನದ ಕುರಿತು ಆಸಕ್ತಿ ಹೊಂದಿರುವ ಸಾರ್ವಜನಿಕರು ಭಾಗವಹಿಸಬಹುದಾಗಿದೆ.


ಯೂನಿವರ್ಸ್ ಇನ್ ದಿ ಕ್ಲಾಸ್ ರೂಮ್

16 ಮತ್ತು 17ನೇ ಜನವರಿ 2021 ರಂದು ಸಂ.4 ರಿಂದ 7 ರವರೆಗೆ "ಯೂನಿವರ್ಸ್ ಇನ್ ದಿ ಕ್ಲಾಸ್ ರೂಮ್" ಎಂಬ ಎರಡು ದಿನದ ಕಮ್ಮಟವನ್ನು ಸಾರ್ವಜನಿಕರಿಗಾಗಿ ಆಯೋಜಿಸಲಾಗಿದೆ. ಪ್ರವೇಶ ದರ ರೂ.350/-.


ಹಗಲಿನ ಖಗೋಳಶಾಸ್ತ್ರ ಚಟುವಟಿಕೆಗಳು

21ನೇ ಜನವರಿ 2021 ರಂದು ಬೆ.10:30 ರಿಂದ ಮ.3:30 ರವರೆಗೆ "ಹಗಲಿನ ಖಗೋಳಶಾಸ್ತ್ರ ಚಟುವಟಿಕೆಗಳು" ಎಂಬ ಒಂದು ದಿನದ ಕಮ್ಮಟವನ್ನು ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾಗಿದೆ. ಪ್ರವೇಶ ದರ ರೂ.150/-.


ತಿಂಗಳ ವಿಜ್ಞಾನ ಕೂಟ

ಈ ತಿಂಗಳ ವಿಜ್ಞಾನ ಕೂಟವು "ದೃಶ್ಯೀಕರಣದ ಮೂಲಕ ವಿಜ್ಞಾನ ಸಂವಹನ" ವಿಷಯದ ಕುರಿತು ತರಗತಿಯು ದಿ.10.01.2021 ರಂದು ಸಂ. 4- 5:30 ಗಂಟೆಯವರೆಗೆ ನಡೆಯಲಿದೆ.


ರಾಷ್ಟ್ರೀಯ ಗಣಿತ ದಿನಾಚರಣೆ

ತಾರಾಲಯವು ರಾಷ್ಟ್ರೀಯ ಗಣಿತ ದಿನದ ಅಂಗವಾಗಿ ದಿ.22.12.2020 ರಂದು ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ವರ್ಚುವಲ್ ಕಾರ್ಯಾಗಾರವನ್ನು ಆಯೋಜಿಸಿದೆ. ಗಣಿತವನ್ನು ಕಲೆಯ ಮುಖಾಂತರ ತಿಳಿಯುವ ಧ್ಯೇಯದೊಂದಿಗೆ ಆಯೋಜಿಸಲಾಗಿರುವ ಕಾರ್ಯಾಗಾರದಲ್ಲಿ "ಸಮ್ಮಿತಿ" ಎಂಬ ವಿಷಯವನ್ನು ಕಲಾತ್ಮಕ ಚಟುವಟಿಕೆಗಳ ಮೂಲಕ ಚರ್ಚಿಸಲಾಗುವುದು.


ತಿಂಗಳ ವಿಜ್ಞಾನ ಕೂಟ

ಈ ತಿಂಗಳ ವಿಜ್ಞಾನ ಕೂಟವು "ಗುರು ಹಾಗೂ ಶನಿ ಗ್ರಹದ ಯುತಿ" ವಿಷಯದ ಕುರಿತು ವರ್ಚುವಲ್ ತರಗತಿಯು ದಿ.13.12.2020 ರಂದು ಸಂ. 4 - 5 ಗಂಟೆಯವರೆಗೆ ನಡೆಯಲಿದೆ. ಕಾರ್ಯಕ್ರಮದ ಕೊಂಡಿಯನ್ನು ಶೀಘ್ರವೇ ನಮ್ಮ ಜಾಲತಾಣ (https://taralaya.org/kannada/announcements-kannada.php)/ಟ್ವಟರ್/ಫೇಸ್ಬುಕ್/ಯೂಟ್ಯೂಬ್ ನಲ್ಲಿ ಪ್ರಕಟಿಸಲಾಗುವುದು.


16ನೇ ಫೆಬ್ರವರಿ 2020 ರಂದು ಸಂಜೆ 4 ಗಂಟೆಗೆ ತಿಂಗಳ "ವಿಜ್ಞಾನ ಕೂಟ" ಕಾರ್ಯಕ್ರಮವು "ಹರಪ್ಪನ್ ನಾಗರೀಕತೆಯಲ್ಲಿ ಖಗೋಳಶಾಸ್ತ್ರ"ನಡೆಯಲಿದೆ.

16ನೇ ಫೆಬ್ರವರಿ 2020 ರಂದು ಸಂಜೆ 4 ಗಂಟೆಗೆ ತಿಂಗಳ "ವಿಜ್ಞಾನ ಕೂಟ" ಕಾರ್ಯಕ್ರಮವು "ಹರಪ್ಪನ್ ನಾಗರೀಕತೆಯಲ್ಲಿ ಖಗೋಳಶಾಸ್ತ್ರ"ನಡೆಯಲಿದೆ.


'ದೂರದರ್ಶಕ ತಯಾರಿಸುವ ಕಮ್ಮಟ' – 22, 23 ಮತ್ತು 29 ಫೆಬ್ರವರಿ ಹಾಗೂ 1ನೇ ಮಾರ್ಚ್ 2020

ಜವಾಹರ್ ಲಾಲ್ ನೆಹರು ತಾರಾಲಯವು ಶಾಲೆಗಳು, ವಿಜ್ಞಾನ ಕೇಂದ್ರಗಳು ಮತ್ತು ಸಾರ್ವಜನಿಕರಿಗಾಗಿ ನಾಲ್ಕು ದಿನಗಳ ದೂರದರ್ಶಕಗಳನ್ನು ತಯಾರಿಸುವ ಕಾರ್ಯಾಗಾರವನ್ನು ಮೂರು ವಾರಾಂತ್ಯಗಳಲ್ಲಿ ಆಯೋಜಿಸಿದೆ. ಈ ಕಾರ್ಯಾಗಾರದಲ್ಲಿ ಭಾಗವಹಿಸುವವರು 6" ನ್ಯೂಟೋನಿಯನ್ ದೂರದರ್ಶಕವನ್ನು ತಯಾರಿಸಿ ಕೊಂಡೊಯ್ಯಬಹುದಾಗಿದೆ. ಖಗೋಳ ಶಾಸ್ತ್ರ ಮತ್ತು ನ್ಯೂಟೋನಿಯನ್ ದೂರದರ್ಶಕಗಳ ಕುರಿತಾದ ಉಪನ್ಯಾಸಗಳು ಮತ್ತು ಚರ್ಚೆ ಈ ಕಾರ್ಯಾಗಾರದ ಭಾಗವಾಗಿರುತ್ತದೆ.


ಜೀವ ವೈವಿಧ್ಯ

'ಜೀವ ವೈವಿಧ್ಯ' ಎಂಬ ಒಂದು ದಿನದ ಕಮ್ಮಟವನ್ನು ಪ್ರೌಢಶಾಲಾ ಶಿಕ್ಷಕರಿಗಾಗಿ 23ನೇ ಜನವರಿ 2020 ರಂದು ಬೆ.10:30 – ಮ.3:30 ಗಂಟೆಯವರೆಗೆ ಆಯೋಜಿಸಲಾಗಿದೆ. ಪ್ರವೇಶ ಶುಲ್ಕ ತಲಾ ರೂ.300/-. ಆಸಕ್ತರು ಕಛೇರಿಯಲ್ಲಿ ನೋಂದಾಯಿಸಬಹುದು.


'ಹಗಲಿನ ಖಗೋಳಶಾಸ್ತ್ರ ಚಟುವಟಿಕೆಗಳು'

'ಹಗಲಿನ ಖಗೋಳಶಾಸ್ತ್ರ ಚಟುವಟಿಕೆಗಳು' ಎಂಬ ಒಂದು ದಿನದ ಕಮ್ಮಟವನ್ನು ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ 22ನೇ ಜನವರಿ 2020 ರಂದು ಬೆ.10:30 – ಮ.3 ಗಂಟೆಯವರೆಗೆ ಆಯೋಜಿಸಲಾಗಿದೆ. ಪ್ರವೇಶ ಶುಲ್ಕ ತಲಾ ರೂ.150/-. ಆಸಕ್ತರು ಕಛೇರಿಯಲ್ಲಿ ನೋಂದಾಯಿಸಬಹುದು.


'ಯೂನಿವರ್ಸ್ ಇನ್ ದಿ ಕ್ಲಾಸ್ ರೂಮ್'

2020ರ ಜನವರಿ 10 ರಿಂದ ಸಂಜೆ 4 ರಿಂದ 7 ಗಂಟೆಯವರೆಗೆ ಮೂರು ದಿನಗಳ ಖಗೋಳ ಕಮ್ಮಟವನ್ನು ಹಮ್ಮಿಕೊಳ್ಳಲಾಗಿದೆ. ಶುಲ್ಕ ತಲಾ ರೂ.500/-


"ವಿಜ್ಞಾನ ಕೂಟ" ಕಾರ್ಯಕ್ರಮವು ನಡೆಯಲಿದೆ.

12ನೇ ಜನವರಿ 2020 ರಂದು ಸಂಜೆ 4 ಗಂಟೆಗೆ ತಿಂಗಳ "ವಿಜ್ಞಾನ ಕೂಟ" ಕಾರ್ಯಕ್ರಮವು ನಡೆಯಲಿದೆ.


'ಯೂನಿವರ್ಸ್ ಇನ್ ದಿ ಕ್ಲಾಸ್ ರೂಮ್'

2020ರ ಜನವರಿ 3 ರಿಂದ ಸಂಜೆ 4 ರಿಂದ 7 ಗಂಟೆಯವರೆಗೆ ಮೂರು ದಿನಗಳ ಖಗೋಳ ಕಮ್ಮಟವನ್ನು ಹಮ್ಮಿಕೊಳ್ಳಲಾಗಿದೆ. ಶುಲ್ಕ ತಲಾ ರೂ.500/-


" ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ 18ನೇ ಡಿಸೆಂಬರ್ 2019 ರಂದು ಬೆಳಿಗ್ಗೆ 10:30 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಕಮ್ಮಟವನ್ನು ಏರ್ಪಡಿಸಲಾಗಿದೆ."

ಮುಂಬರುವ 'ಕಂಕಣ ಸೂರ್ಯ ಗ್ರಹಣ'ವನ್ನು ವೀಕ್ಷಿಸಲು 26ನೇ ಡಿಸೆಂಬರ್ 2019 ರಂದು ಸಾರ್ವಜನಿಕರಿಗಾಗಿ ಸಿದ್ಧತೆಗಳನ್ನು ನಡೆಸಲಾಗುತ್ತಿದೆ. ಇದರ ಅಂಗವಾಗಿ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಲು 18ನೇ ಡಿಸೆಂಬರ್ 2019 ರಂದು ಬೆಳಿಗ್ಗೆ 10:30 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಕಮ್ಮಟವನ್ನು ಏರ್ಪಡಿಸಲಾಗಿದೆ. ನೋಂದಾಯಿಸಲು ಆಸಕ್ತರು ಕಛೇರಿಯನ್ನು ಸಂಪರ್ಕಿಸಬಹುದು.


"15ನೇ ಡಿಸೆಂಬರ್ 2019 ರಂದು ಸಂಜೆ 4 ಗಂಟೆಗೆ ತಿಂಗಳ "ವಿಜ್ಞಾನ ಕೂಟ" ಕಾರ್ಯಕ್ರಮವು ನಡೆಯಲಿದೆ."

15ನೇ ಡಿಸೆಂಬರ್ 2019 ರಂದು ಸಂಜೆ 4 ಗಂಟೆಗೆ ತಿಂಗಳ "ವಿಜ್ಞಾನ ಕೂಟ" ಕಾರ್ಯಕ್ರಮವು ನಡೆಯಲಿದೆ.


"ಕಂಕಣ ಸೂರ್ಯ ಗ್ರಹಣ"

"'ಕಂಕಣ ಸೂರ್ಯ ಗ್ರಹಣ" ವಿಷಯದ ಕುರಿತ ಎರಡನೇ ತಂಡದ ಕಮ್ಮಟವು 13ನೇ ಡಿಸೆಂಬರ್ 2019 ರಂದು ಶಿಕ್ಷಕರಿಗಾಗಿ ನಡೆಯಲಿದೆ'"

ಜವಾಹರ್ ಲಾಲ್ ನೆಹರು ತಾರಾಲಯವು ಡಿಸೆಂಬರ್ 13, 2019 ರಂದು ಶಿಕ್ಷಕರಿಗಾಗಿ "ಕಂಕಣ ಸೂರ್ಯ ಗ್ರಹಣ" ಎಂಬ ವಿಷಯದ ಕುರಿತು ಒಂದು ದಿನದ ಕಮ್ಮಟವನ್ನು ಆಯೋಜಿಸಿದೆ.ಸೂರ್ಯ ಮತ್ತು ಚಂದ್ರರ ಕೋನೀಯ ಗಾತ್ರಗಳನ್ನು ಅಂದಾಜಿಸುವುದು, ಆಚ್ಛಾದಿತ ಭಾಗವನ್ನು ಲೆಕ್ಕ ಮಾಡುವುದು, ಗ್ರಹಣದ ಪ್ರಮಾಣವನ್ನು ಅಂದಾಜಿಸುವುದು ಮುಂತಾದವುಗಳನ್ನು ಚಟುವಟಿಕೆಗಳ ಮೂಲಕ ಚರ್ಚಿಸಲಾಗುವುದು. ಸುಮಾರು ರೂ.1500-00ನಷ್ಟು ಕಡಿಮೆ ಖರ್ಚಿನಲ್ಲಿ ಮಾಡಬಹುದಾದ ಸೂರ್ಯ ಬಿಂಬ ಮೂಡಿಸುವ ಸಾಧನದ ಬಗ್ಗೆಯೂ ಇಲ್ಲಿ ಚರ್ಚಿಸಲಾಗುವುದು. ಗ್ರಹಣವನ್ನು ಹೆಚ್ಚಿನ ಸಂಖ್ಯೆಯಲ್ಲಿ ವೀಕ್ಷಿಸಲು ಹಾಗೂ ಚಟುವಟಿಕೆಗಳನ್ನು ನಿರ್ವಹಿಸಲು ಈ ಸಾಧನವು ಉಪಯುಕ್ತವಾಗಿರುತ್ತದೆ.


"ಕಂಕಣ ಸೂರ್ಯ ಗ್ರಹಣ"

ಜವಾಹರ್ ಲಾಲ್ ನೆಹರು ತಾರಾಲಯವು ಡಿಸೆಂಬರ್ 06, 2019 ರಂದು ಶಿಕ್ಷಕರಿಗಾಗಿ "ಕಂಕಣ ಸೂರ್ಯ ಗ್ರಹಣ" ಎಂಬ ವಿಷಯದ ಕುರಿತು ಒಂದು ದಿನದ ಕಮ್ಮಟವನ್ನು ಆಯೋಜಿಸಿದೆ.ಸೂರ್ಯ ಮತ್ತು ಚಂದ್ರರ ಕೋನೀಯ ಗಾತ್ರಗಳನ್ನು ಅಂದಾಜಿಸುವುದು, ಆಚ್ಛಾದಿತ ಭಾಗವನ್ನು ಲೆಕ್ಕ ಮಾಡುವುದು, ಗ್ರಹಣದ ಪ್ರಮಾಣವನ್ನು ಅಂದಾಜಿಸುವುದು ಮುಂತಾದವುಗಳನ್ನು ಚಟುವಟಿಕೆಗಳ ಮೂಲಕ ಚರ್ಚಿಸಲಾಗುವುದು. ಸುಮಾರು ರೂ.1500-00ನಷ್ಟು ಕಡಿಮೆ ಖರ್ಚಿನಲ್ಲಿ ಮಾಡಬಹುದಾದ ಸೂರ್ಯ ಬಿಂಬ ಮೂಡಿಸುವ ಸಾಧನದ ಬಗ್ಗೆಯೂ ಇಲ್ಲಿ ಚರ್ಚಿಸಲಾಗುವುದು. ಗ್ರಹಣವನ್ನು ಹೆಚ್ಚಿನ ಸಂಖ್ಯೆಯಲ್ಲಿ ವೀಕ್ಷಿಸಲು ಹಾಗೂ ಚಟುವಟಿಕೆಗಳನ್ನು ನಿರ್ವಹಿಸಲು ಈ ಸಾಧನವು ಉಪಯುಕ್ತವಾಗಿರುತ್ತದೆ.


17ನೇ ನವಂಬರ್ 2019 ರಂದು ಸಂ.4 ಗಂಟೆಗೆ ವಿಜ್ಞಾನ ಕೂಟ

17ನೇ ನವಂಬರ್ 2019 ರಂದು ಸಂ.4 ಗಂಟೆಗೆ 'ಸೈನ್ಸ್ ಬಿಹೈಂಡ್ ಎಕನಾಮಿಕ್ಸ್'ಕುರಿತು ವಿಜ್ಞಾನ ಕೂಟ


ದಿನಾಂಕ 17, ಭಾನುವಾರದಂದು ಮಕ್ಕಳ ದಿನಾಚರಣೆಯ ಪ್ರಯುಕ್ತ ವಿದ್ಯಾರ್ಥಿಗಳಿಗಾಗಿ ಒಂದು ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ದಿನಾಂಕ 17, ಭಾನುವಾರದಂದು ಬೆಳಗ್ಗೆ 10:30 ರಿಂದ ಮಧ್ಯಾಹ್ನ 12:30 ರವರೆಗೆ ಮಕ್ಕಳ ದಿನಾಚರಣೆಯ ಪ್ರಯುಕ್ತ 3, 4 ಮತ್ತು 5ನೇ ತರಗತಿಯ ವಿದ್ಯಾರ್ಥಿಗಳಿಗಾಗಿ ಒಂದು ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಪ್ರಯೋಗಗಳ ನಿದರ್ಶನ ಹಾಗೂ ಚಟುವಟಿಕೆಗಳ ಮೂಲಕ ವಿಜ್ಞಾನದ ಸಂಗತಿಗಳನ್ನು ಚರ್ಚಿಸುವುದೇ ಈ ಕಮ್ಮಟದ ಮೂಲ ಉದ್ದೇಶ. ಪ್ರವೇಶ ಉಚಿತ.


'ಬಾಹ್ಯಾಕಾಶ ವಿಜ್ಞಾನ' ದ ಕುರಿತು ಅಕ್ಟೋಬರ್ 11, 2019 ರಂದು ಶಿಕ್ಷಕರಿಗಾಗಿ ಕಮ್ಮಟ

'ಬಾಹ್ಯಾಕಾಶ ವಿಜ್ಞಾನ ವಾರ'ದ ಆಚರಣೆಯ ಪ್ರಯುಕ್ತ ಚಟುವಟಿಕೆ ಆಧಾರಿತ ಒಂದು ದಿನದ ಕಾರ್ಯಾಗಾರವನ್ನು 'ಬಾಹ್ಯಾಕಾಶ ವಿಜ್ಞಾನ' ದ ಕುರಿತು ಅಕ್ಟೋಬರ್ 11, 2019 ರಂದು ಪ್ರೌಢಶಾಲಾ ಶಿಕ್ಷಕರಿಗಾಗಿ ಆಯೋಜಿಸಿದೆ. ಶುಲ್ಕ ತಲಾ ರೂ.300/-


13ನೇ ಅಕ್ಟೋಬರ್ 2019 ರಂದು ಮ.3 ಗಂಟೆಗೆ 'ಕಂಪ್ಯೂಟಿಂಗ್'ಕುರಿತು ವಿಜ್ಞಾನ ಕೂಟ

13ನೇ ಅಕ್ಟೋಬರ್ 2019 ರಂದು ಮ.3 ಗಂಟೆಗೆ 'ಕಂಪ್ಯೂಟಿಂಗ್'ಕುರಿತು ವಿಜ್ಞಾನ ಕೂಟ


8ನೇ ಸೆಪ್ಟೆಂಬರ್ 2019 ರಂದು ಮ.3 ಗಂಟೆಗೆ 'ಬೆಳಕು – ಸ್ವಭಾವ ಮತ್ತು ಉಪಯೋಗಗಳು' ಕುರಿತು ವಿಜ್ಞಾನ ಕೂಟ

ಭೂಮಿಯ ಮೇಲೆ ಜೀವ ಅಸ್ತಿತ್ವಕ್ಕೆ ಬರುವಲ್ಲಿ 'ಬೆಳಕು' ಒಂದು ಮುಖ್ಯ ಪಾತ್ರ ವಹಿಸಿದೆ. ಇಂದಿಗೂ ಹಲವಾರು ಸಂಶೋಧಕರು ಬೆಳಕಿನ ಅಧ್ಯಯನ ಮಾಡುತ್ತಿದ್ದರೂ ತಿಳಿಯದ ವಿಚಾರಗಳು ಉಳಿದೇ ಇವೆ. ಬೆಳಕಿನ ದ್ವಂದ್ವ ಸ್ವಭಾವ, ವಿಸರಣೆ, ದ್ಯುತಿ ವಿದ್ಯುತ್ ಪರಿಣಾಮ, ದೃಷ್ಟಿ, ಪ್ರತಿಬಿಂಬದ ಮರು ಉತ್ಪಾದನೆ, ಗ್ರಾಫಿಕ್ಸ್ ಹಾಗೂ ದತ್ತಾಂಶವನ್ನು ಶೇಖರಿಸಿಡುವಲ್ಲಿ ಬೆಳಕಿನ ಪಾತ್ರ ಇತ್ಯಾದಿ ವಿಚಾರಗಳನ್ನು ಚರ್ಚಿಸುವುದು ಈ ಬಾರಿಯ ವಿಜ್ಞಾನ ಕೂಟದ ಧ್ಯೇಯವಾಗಿದೆ. ಪ್ರೌಢಶಾಲಾ ವಿದ್ಯಾರ್ಥಿಗಳು ಮೇಲ್ಪಟ್ಟವರು ಭಾಗವಹಿಸಬಹುದು.


ದಿನಾಂಕ 4ನೇ ಸೆಪ್ಟೆಂಬರ್ 2019, ಬುಧವಾರದಂದು ಶಿಕ್ಷಕರಿಗಾಗಿ “ಚಟುವಟಿಕೆಗಳಲ್ಲಿ ಚಂದ್ರ” ಎಂಬ ಒಂದು ದಿನದ ಕಾರ್ಯಾಗಾರವನ್ನು ಆಯೋಜಿಸಲಾಗಿದೆ.

ದಿನಾಂಕ 4ನೇ ಸೆಪ್ಟೆಂಬರ್ 2019, ಬುಧವಾರದಂದು ಶಿಕ್ಷಕರಿಗಾಗಿ “ಚಟುವಟಿಕೆಗಳಲ್ಲಿ ಚಂದ್ರ” ಎಂಬ ಒಂದು ದಿನದ ಕಾರ್ಯಾಗಾರವನ್ನು ಆಯೋಜಿಸಲಾಗಿದೆ. ನೋಂದಾವನಿ ಶುಲ್ಕ ತಲಾ 450 ರೂಪಾಯಿಗಳು.


ಧಾತುಗಳ ವರ್ಗೀಕರಣ'

ಪ್ರೌಢಶಾಲಾ ವಿಜ್ಞಾನ ಶಿಕ್ಷಕರಿಗಾಗಿ 'ಧಾತುಗಳ ವರ್ಗೀಕರಣ' ವಿಷಯದ ಕುರಿತು ಒಂದು ದಿನದ ಕಮ್ಮಟವನ್ನು 21ನೇ ಆಗಸ್ಟ್ 2019 ರಂದು ಬೆ.10:30 ರಿಂದ ಮ.3:30 ರವರೆಗೆ ಏರ್ಪಡಿಸಲಾಗಿದೆ. ಆಸಕ್ತರು ಕಛೇರಿಯಲ್ಲಿ ನೋಂದಾಯಿಸಬಹುದು.


11ನೇ ಆಗಸ್ಟ್ 2019 ರಂದು ಮ.3 ಗಂಟೆಗೆ ‘ಎಲೆಕ್ಟ್ರಾನಿಕ್ಸ್ ಮತ್ತು ಮೂರ್ಸ್ ನಿಯಮ’ಕುರಿತು ವಿಜ್ಞಾನ ಕೂಟ

ಬಾಹ್ಯಾಕಾಶ ವಿಜ್ಞಾನದಿಂದ ದೂರ ಸಂಪರ್ಕದವರೆಗೂ, ಹವಾಮಾನ ಮುನ್ಸೂಚನೆಯಿಂದ ಶೇರುಪೇಟೆಯ ವ್ಯವಹಾರದವರೆಗೂ, ಬೃಹತ್ ಕೈಗಾರಿಕೆಗಳಿಂದ ಸಂಚಾರ ವ್ಯವಸ್ಥೆಗಳವರೆಗೂ ಪ್ರತಿಯೊಂದು ಕ್ಷೇತ್ರದಲ್ಲೂ ನಾವು ಮಹತ್ತರ ಬದಲಾವಣೆಯನ್ನು ಕಂಡಿದ್ದೇವೆ. ಇದಕ್ಕೆಲ್ಲಾ ಅತಿ ಉಪಯುಕ್ತವಾಗಿರುವ ವಿಜ್ಞಾನದ ಅಂಗವೇ “ಎಲೆಕ್ಟ್ರಾನಿಕ್ಸ್”. ಶಕ್ತಿಶಾಲಿ ಪ್ರೊಸೆಸರ್ ಗಳು, ಇಂಟಿಗ್ರೇಟೆಡ್ ಚಿಪ್ ಗಳು, ಅವುಗಳಲ್ಲಾಗಿರುವ ಸುಧಾರಣೆಗಳು, ಚಿಪ್ ಲೆಟ್ ಗಳು, ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಮುಂತಾದ ವಿಚಾರಗಳನ್ನು ಚರ್ಚಿಸುವುದು ಈ ಬಾರಿಯ ವಿಜ್ಞಾನ ಕೂಟದ ಧ್ಯೇಯವಾಗಿದೆ.


‘ಜೀವಶಾಸ್ತ್ರದ ಕುರಿತ ಕಮ್ಮಟ’

ಆಗಸ್ಟ್ 7 ರಂದು ಶಿಕ್ಷಕರಿಗಾಗಿ ನಡೆಯಬೇಕಿದ್ದ ಜೀವಶಾಸ್ತ್ರದ ಕುರಿತ ಕಮ್ಮಟವನ್ನು ಮುಂದೂಡಲಾಗಿದೆ. ಮುಂದಿನ ದಿನಾಂಕವನ್ನು ಪ್ರಕಟಿಸಲಾಗುವುದು.


‘ತ್ರಿಕೋನಗಳು’

ಪ್ರೌಢಶಾಲಾ ಶಿಕ್ಷಕರಿಗಾಗಿ ಒಂದು ದಿನದ ಕಮ್ಮಟವನ್ನು 31ನೇ ಜುಲೈ 2019 ರಂದು ಬೆ.10:30 ರಿಂದ 3:30 ರವರೆಗೆ ಏರ್ಪಡಿಸಲಾಗಿದೆ. ಶುಲ್ಕ ತಲಾ ರೂ.300/-

ತ್ರಿಕೋನಗಳು ಗಣಿತಕ್ಕೆ ಮಾತ್ರವೇ ಸೀಮಿತವಾಗಿಲ್ಲ. ಖಗೋಳಶಾಸ್ತ್ರ, ವಾಸ್ತುಶಿಲ್ಪ ಮತ್ತು ಹಲವಾರು ದೈನಂದಿನ ಸನ್ನಿವೇಶಗಳಲ್ಲೂ ಇವುಗಳು ಉಪಯುಕ್ತವಾಗಿವೆ. ಪ್ರಸ್ತುತ ಕಾರ್ಯಾಗಾರವು ಒಂಭತ್ತು ಮತ್ತು ಹತ್ತನೆಯ ತರಗತಿಯ ಪಠ್ಯಪುಸ್ತಕಗಳಲ್ಲಿ ಚರ್ಚಿಸಲಾಗಿರುವ ‘ತ್ರಿಕೋನಗಳು’ ಎಂಬ ವಿಷಯದ ಬೋಧನೆಗೆ ಪೂರಕವಾಗುವಂತಹ ಚರ್ಚೆ ಮತ್ತು ಚಟುವಟಿಕೆಗಳನ್ನು ಒಳಗೊಂಡಿರುತ್ತದೆ.


ಚಟುವಟಿಕೆಗಳಲ್ಲಿ ಚಂದ್ರ

18ನೇ ಜುಲೈ 2019 ರಂದು ಆಯೋಜಿಸಿದ್ದ ‘ಚಟುವಟಿಕೆಗಳಲ್ಲಿ ಚಂದ್ರ’ ಎಂಬ ಕಮ್ಮಟವನ್ನು ಮುಂದೂಡಲಾಗಿದೆ. ಮುಂದಿನ ದಿನಾಂಕವನ್ನು ಪ್ರಕಟಿಸಲಾಗುವುದು.


ಚಟುವಟಿಕೆಗಳಲ್ಲಿ ಚಂದ್ರ

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು ಚಂದ್ರಯಾನ – 2 ಮಿಷನ್ ಅನ್ನು ಇದೇ ಜುಲೈ 15 ರಂದು ಉಡಾಯಿಸುತ್ತಿರುವ ಹಿನ್ನೆಲೆಯಲ್ಲಿ ಜವಾಹರ್ ಲಾಲ್ ನೆಹರು ತಾರಾಲಯವು ವಿಜ್ಞಾನ ಸಂವಹನಕಾರರು ಮತ್ತು ಶಿಕ್ಷಕರಿಗಾಗಿ “ಚಟುವಟಿಕೆಗಳಲ್ಲಿ ಚಂದ್ರ” ಎಂಬ ಒಂದು ದಿನದ ಕಾರ್ಯಾಗರವನ್ನು 18ನೇ ಜುಲೈ 2019 ರಂದು ಆಯೋಜಿಸಿದೆ.


14ನೇ ಜುಲೈ 2019 ರಂದು ಮ.3 ಗಂಟೆಗೆ ‘ಚಂದ್ರಯಾನ - 2’ ಕುರಿತು ವಿಜ್ಞಾನ ಕೂಟ

ಚಂದ್ರಯಾನ – 2 ಯಾವ ದೇಶವೂ ಇದುವರೆಗೂ ತಲುಪಿರದ ಚಂದ್ರನ ದಕ್ಷಿಣ ಧ್ರುವವನ್ನು ತಲುಪುವ ಗುರಿ ಹೊಂದಿದೆ. ಇಸ್ರೋದ ಯೋಜನೆಯ ಕುರಿತು ಜನಸಾಮಾನ್ಯರಲ್ಲಿ ಅರಿವು ಮೂಡಿಸುವ ಸಲುವಾಗಿ ಈ ತಿಂಗಳ ವಿಜ್ಞಾನ ಕೂಟದಲ್ಲಿ ಇದರ ಕುರಿತು ಚರ್ಚಿಸಲಾಗುವುದು. ಪ್ರೌಢಶಾಲಾ ವಿದ್ಯಾರ್ಥಿಗಳು ಮೇಲ್ಪಟ್ಟವರು ಭಾಗವಹಿಸಬಹುದು.


ಶಿಕ್ಷಕರಿಗಾಗಿ ‘ಗುರುತ್ವ’ದ ಕುರಿತು 03.07.2019 ರಂದು ಒಂದು ದಿನದ ಕಮ್ಮಟ

ಪ್ರೌಢಶಾಲಾ ವಿಜ್ಞಾನ ಶಿಕ್ಷಕರಿಗಾಗಿ ‘ಗುರುತ್ವ’ ಎಂಬ ವಿಷಯದ ಕುರಿತು ಒಂದು ದಿನದ ಕಮ್ಮಟವನ್ನು 3ನೇ ಜುಲೈ 2019 ರಂದು ಬೆ.10:30 – ಮ.3:30 ರವರೆಗೆ ಏರ್ಪಡಿಸಲಾಗಿದೆ. ಶುಲ್ಕ ತಲಾ ರೂ.300/-.


ದೈಹಿಕ ನ್ಯೂನ್ಯತೆಯುಳ್ಳ ಮಕ್ಕಳಿಗಾಗಿ ಒಂದು ದಿನದ ಕ್ರಿಯಾತ್ಮಕ ಕಮ್ಮಟ

ತಾರಾಲಯವು ದೈಹಿಕ ನ್ಯೂನ್ಯತೆಯುಳ್ಳ ಮಕ್ಕಳಿಗಾಗಿ ಒಂದು ದಿನದ ಕ್ರಿಯಾತ್ಮಕ ಕಮ್ಮಟವನ್ನು 27ನೇ ಜೂನ್ 2019 ರಂದು ಬೆ.10:30 ರಿಂದ ಮ.3:30 ರವರೆಗೆ ಉಚಿತವಾಗಿ ಆಯೋಜಿಸಿದೆ. ಮೊದಲು ಬಂದವರಿಗೆ ಆದ್ಯತೆ.


ಕ್ಷುದ್ರಗ್ರಹಗಳ ದಿನಾಚರಣೆಯ ಅಂಗವಾಗಿ ಜವಾಹರ್‍ ಲಾಲ್ ನೆಹರು ತಾರಾಲಯವು ಕೆಳಕಂಡ ಕಾರ್ಯಕ್ರಮಗಳನ್ನು ಆಯೋಜಿಸಿದೆ:

ಭಿತ್ತಿಚಿತ್ರ ಮತ್ತು ಉಲ್ಕಾಶಿಲೆಗಳ ಪ್ರದರ್ಶನ - ಬೆ.10:30 - ಸಂ.4:30

ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಕ್ಷುದ್ರಗ್ರಹಗಳ ಕುರಿತು ಕಾರ್ಯಾಗಾರ ಮ.1:00 ರಿಂದ 4:00

ಅಹಮದಾಬಾದಿನ ಫಿಸಿಕಲ್ ರಿಸರ್ಚ್ ಲೆಬೊರೇಟರಿಯ ನಿವೃತ್ತ ನಿರ್ದೇಶಕರಾದ ಡಾ. ಜಿತೇಂದ್ರನಾಥ್ ಗೋಸ್ವಾಮಿ ಅವರಿಂದ ಕ್ಷುದ್ರಗ್ರಹಗಳ ಬಗ್ಗೆ ಉಪನ್ಯಾಸ ಸಂ.4:00


9ನೇ ಜೂನ್ 2019 ರಂದು ಮ.3 ಗಂಟೆಗೆ ‘ಮಾಲಿನ್ಯ – ಕಾರಣಗಳು, ದುಷ್ಪರಿಣಾಮಗಳು ಮತ್ತು ಪರಿಹಾರೋಪಾಯಗಳು’ ಕುರಿತು ವಿಜ್ಞಾನ ಕೂಟ

ಮಾಲಿನ್ಯದ ವಿವಿಧ ಪ್ರಕಾರಗಳು, ಅದರಿಂದಾಗುವ ದುಷ್ಟರಿಣಾಮಗಳು, ಮಾಲಿನ್ಯ ತಡೆಗೆ ರಾಷ್ಟ್ರೀಯ, ಅಂತರರಾಷ್ಟ್ರೀಯ ಹಂತಗಳಲ್ಲಿ ಕೈಗೊಂಡಿರುವ ವಿಧಾನಗಳು ಇತ್ಯಾದಿಗಳನ್ನು ಈ ಬಾರಿಯ ಕೂಟದಲ್ಲಿ ಚರ್ಚಿಸಲಾಗುವುದು.


ದೈಹಿಕ ನ್ಯೂನ್ಯತೆಯುಳ್ಳ ಮಕ್ಕಳಿಗಾಗಿ ಒಂದು ದಿನದ ಕ್ರಿಯಾತ್ಮಕ ಕಮ್ಮಟ

ತಾರಾಲಯವು ದೈಹಿಕ ನ್ಯೂನ್ಯತೆಯುಳ್ಳ ಮಕ್ಕಳಿಗಾಗಿ ಒಂದು ದಿನದ ಕ್ರಿಯಾತ್ಮಕ ಕಮ್ಮಟವನ್ನು 20ನೇ ಜೂನ್ 2019 ರಂದು ಬೆ.10:30 ರಿಂದ ಮ.3:30 ರವರೆಗೆ ಉಚಿತವಾಗಿ ಆಯೋಜಿಸಿದೆ. ಮೊದಲು ಬಂದವರಿಗೆ ಆದ್ಯತೆ.


"ಸೂರ್ಯನ ಬಿಂಬ ಮತ್ತು ಹಗಲಿನ ಖಗೋಳ ಚಟುವಟಿಕೆಗಳು"

12ನೇ ಮೇ 2019 ರಂದು ಮ.3 ಗಂಟೆಗೆ ‘ಸ್ಟೆಲ್ಲೇರಿಯಮ್ ತಂತ್ರಾಂಶದಿಂದ ಖಗೋಳಶಾಸ್ತ್ರ’ ಕುರಿತು ವಿಜ್ಞಾನ ಕೂಟ ಈ ತಿಂಗಳ ವಿಜ್ಞಾನ ಕೂಟದಲ್ಲಿ ಖಗೋಳೀಯ ವೀಕ್ಷಣೆಗಳಿಗೆ ಬೇಕಾಗುವ ಮೂಲಭೂತ ಪರಿಕಲ್ಪನೆಗಳನ್ನು ಚರ್ಚಿಸಲಾಗುವುದು. ಸ್ಟೆಲ್ಲೇರಿಯಮ್ ಎಂಬ ಉಚಿತವಾಗಿ ಲಭ್ಯವಿರುವ ತಂತ್ರಾಂಶವನ್ನು ಇಲ್ಲಿ ಬಳಸಿಕೊಳ್ಳಲಾಗುವುದು. ಆಕಾಶಕಾಯಗಳನ್ನು ಗುರುತಿಸುವುದು ಮತ್ತು ನಕ್ಷತ್ರ ವೀಕ್ಷಣೆಗೆ ಈ ತಂತ್ರಾಂಶವನ್ನು ಹೇಗೆ ಬಳಸಬಹುದು ಎಂಬುದನ್ನು ಚರ್ಚಿಸಲಾಗುವುದು.


"ಸೂರ್ಯನ ಬಿಂಬ ಮತ್ತು ಹಗಲಿನ ಖಗೋಳ ಚಟುವಟಿಕೆಗಳು"

ನೆಹರು ತಾರಾಲಯ, ನೆಹರು ಸ್ಮಾರಕ ಸಂಗ್ರಹಾಲಯ ಮತ್ತು ಗ್ರಂಥಾಲಯ, ನವ ದೆಹಲಿ ಅವರ ಸಹಯೋಗದೊಂದಿಗೆ ಶಾಲಾ ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗಾಗಿ ಅರ್ಧ ದಿನದ ಕಾರ್ಯಾಗಾರವನ್ನು 19ನೇ ಫೆಬ್ರವರಿ 2019 ರಂದು ಬೆ.10:30 ರಿಂದ ಮ.1:30 ರವರೆಗೆ ಆಯೋಜಿಸಿದೆ. ಪ್ರವೇಶ ಉಚಿತ. ಆಸಕ್ತ ಶಾಲೆಗಳು ಕಛೇರಿಯಲ್ಲಿ ನೋಂದಾಯಿಸಬಹುದಾಗಿದೆ.


'ಖಗೋಳ ಶಾಸ್ತ್ರದ ಮೂಲಗಳು'

ಪ್ರತಿ ತಿಂಗಳ ಎರಡನೇ ಭಾನುವಾರದಂದು ಪ್ರೌಢಶಾಲೆ ಮತ್ತು ಪದವಿ ಪೂರ್ವ ವಿದ್ಯಾರ್ಥಿಗಳಿಗಾಗಿ ನಡೆಯುವ ವಿಜ್ಞಾನ ಕೂಟದಲ್ಲಿ ವಿಷಯದ ಕುರಿತು ಚರ್ಚೆ ನಡೆಸಲಾಗುತ್ತಿದೆ. 13ನೇ ಜನವರಿ 2019 ರಂದು ಮಧ್ಯಾಹ್ನ 3 ರಿಂದ 4:30 ರವರೆಗೆ ನಡೆಯುತ್ತದೆ. ಪ್ರವೇಶ ಉಚಿತ.


"ಅಸ್ಟ್ರಾನಮಿ ಒಲಿಂಪಿಯಾಡ್ ಎಕ್ಸ್ ಪೋಷರ್"

ಜವಾಹರ್ ಲಾಲ್ ನೆಹರು ತಾರಾಲಯವು ಮುಂಬೈನ ಹೋಮಿ ಬಾಬಾ ಸೆಂಟರ್ ಫಾರ್ ಸೈನ್ಸ್ ಎಜುಕೇಷನ್ ಸಂಸ್ಥೆಯ ಸಹಯೋಗದೊಂದಿಗೆ “ಅಸ್ಟ್ರಾನಮಿ ಒಲಿಂಪಿಯಾಡ್ ಎಕ್ಸ್ ಪೋಷರ್” ಎಂಬ ಶಿಬಿರವನ್ನು ವಿಜ್ಞಾನ ಸಂವಹನಕಾರರು, ಕಾಲೇಜು ಮತ್ತು ಪ್ರೌಢಶಾಲಾ ಶಿಕ್ಷಕರಿಗೆ 13-16 ಫೆಬ್ರವರಿ 2019 ರವರೆಗೆ ಆಯೋಜಿಸಿದೆ. ಪ್ರವೇಶ ಉಚಿತ.


ಅರ್ಜಿ ಸಲ್ಲಿಸಲು :Click here...


ಭರ್ತಿ ಮಾಡಿದ ಅರ್ಜಿಯನ್ನು 26ನೇ ಜನವರಿ 2019ರೊಳಗೆ ಈ ಮಿಂಚಂಚೆಗೆ astronomy@hbcse.tifr.res.in ತಲುಪಿಸಬೇಕು.


"ಅಸ್ಟ್ರಾನಮಿ ಕಮ್ಯುನಿಕೇಟರ್ಸ್ ಮೀಟ್"

ಜವಾಹರ್ ಲಾಲ್ ನೆಹರು ತಾರಾಲಯವು ಪಬ್ಲಿಕ್ ಔಟ್ ರೀಚ್ ಅಂಡ್ ಎಜುಕೇಷನ್ ಕಮಿಟಿ ಆಫ್ ಅಸ್ಟ್ರಾನಾಮಿಕಲ್ ಸೊಸೈಟಿ ಆಫ್ ಇಂಡಿಯಾ ಸಂಸ್ಥೆಯ ಸಹಯೋಗದೊಂದಿಗೆ “ಅಸ್ಟ್ರಾನಮಿ ಕಮ್ಯುನಿಕೇಟರ್ಸ್ ಮೀಟ್” ಎಂಬ ಕಮ್ಮಟವನ್ನು ಸಾರ್ವಜಿನಿಕರಿಗಾಗಿ 17ನೇ ಫೆಬ್ರವರಿ 2019 ರಂದು ಆಯೋಜಿಸಿದೆ.


ನೋಂದಾಯಿಸಲು ಸಂಪರ್ಕಿಸಿ : Click here...
ಪ್ರವೇಶ ಶುಲ್ಕ ತಲಾ ರೂ.200/-


ಜವಾಹರ್ ಲಾಲ್ ನೆಹರು ತಾರಾಲಯವು "ಖಗೋಳ ಉತ್ಸವ – IAU ಗೆ 100 ವರ್ಷಗಳು" ಎಂಬ ಶೀರ್ಷಿಕೆಯಡಿಯಲ್ಲಿ ಉತ್ಸವವನ್ನು 2019ರ ಜನವರಿ 10 ರಿಂದ 13 ರವರೆಗೆ ಆಯೋಜಿಸಿದೆ.


'ವೃತ್ತಗಳು' - ಕುರಿತು ಕಮ್ಮಟ

'ವೃತ್ತಗಳು' ವಿಷಯದ ಕುರಿತು ಪ್ರೌಢಶಾಲಾ ಗಣಿತ ಶಿಕ್ಷಕರಿಗಾಗಿ ಒಂದು ದಿನದ ಕಮ್ಮಟವನ್ನು 22ನೇ ಡಿಸೆಂಬರ್ 2018 ರಂದು ತಾರಾಲಯದಲ್ಲಿ ಏರ್ಪಡಿಸಲಾಗಿದೆ. ಪ್ರವೇಶ ಶುಲ್ಕ ತಲಾ ರೂ.250/-.


ಸಾರ್ವಜನಿಕರಿಗಾಗಿ ಮೂರು ದಿನಗಳ ಖಗೋಳ ಶಾಸ್ತ್ರ ಕಮ್ಮಟವನ್ನು 14ನೇ ಡಿಸೆಂಬರ್ 2018 ರಿಂದ ಸಂಜೆ 4 ರಿಂದ 7 ಗಂಟೆಯವರೆಗೆ ನಡೆಯಲಿದೆ. ಶುಲ್ಕ ತಲಾ ರೂ.500/-


'ಜಾಗತಿಕ ತಾಪಮಾನ ಏರಿಕೆ ಮತ್ತು ಹವಾಮಾನದ ಬದಲಾವಣೆ'

ಪ್ರತಿ ತಿಂಗಳ ಎರಡನೇ ಭಾನುವಾರದಂದು ಪ್ರೌಢಶಾಲೆ ಮತ್ತು ಪದವಿ ಪೂರ್ವ ವಿದ್ಯಾರ್ಥಿಗಳಿಗಾಗಿ ನಡೆಯುವ ವಿಜ್ಞಾನ ಕೂಟದಲ್ಲಿ ‘ಜಾಗತಿಕ ತಾಪಮಾನ ಏರಿಕೆ ಮತ್ತು ಹವಾಮಾನದ ಬದಲಾವಣೆ’ ವಿಷಯದ ಕುರಿತು ಚರ್ಚೆ ನಡೆಸಲಾಗುತ್ತಿದೆ. 9ನೇ ಡಿಸೆಂಬರ್ 2018 ರಂದು ಮಧ್ಯಾಹ್ನ 3 ರಿಂದ 4:30 ರವರೆಗೆ ನಡೆಯುತ್ತದೆ.


'ಮುಂಗಾರು'

ಪ್ರತಿ ತಿಂಗಳ ಎರಡನೇ ಭಾನುವಾರದಂದು ಪ್ರೌಢಶಾಲೆ ಮತ್ತು ಪದವಿ ಪೂರ್ವ ವಿದ್ಯಾರ್ಥಿಗಳಿಗಾಗಿ ನಡೆಯುವ ವಿಜ್ಞಾನ ಕೂಟದಲ್ಲಿ 'ಮುಂಗಾರು' ವಿಷಯದ ಕುರಿತು ಚರ್ಚೆ ನಡೆಸಲಾಗುತ್ತಿದೆ. 11ನೇ ನವಂಬರ್ 2018 ರಂದು ಮಧ್ಯಾಹ್ನ 3 ರಿಂದ 4:30 ರವರೆಗೆ ನಡೆಯುತ್ತದೆ.


'ಖಗೋಳ ಶಾಸ್ತ್ರ' - ಕಾರ್ಯಗಾರ

ಅನಿವಾರ್ಯ ಕಾರಣಗಳಿಂದಾಗಿ 16ನೇ ನವಂಬರ್ 2018 ರಂದು ನಡೆಯಬೇಕಿದ್ದ 'ಖಗೋಳ ಶಾಸ್ತ್ರ' – ಕಾರ್ಯಗಾರವನ್ನು ಡಿಸೆಂಬರ್ 2018 ಕ್ಕೆ ಮುಂದೂಡಲಾಗಿದೆ. ದಯವಿಟ್ಟು ಸಹಕರಿಸಿ. ಮುಂದಿನ ದಿನಾಂಕವನ್ನು ಪ್ರಕಟಿಸಲಾಗುವುದು.


ಪುಟಾಣಿಗಳಿಗಾಗಿ ಕಮ್ಮಟ

ಮಕ್ಕಳ ದಿನಾಚರಣೆಯ ಅಂಗವಾಗಿ ಶಾಲಾ ಪುಟಾಣಿಗಳಿಗಾಗಿ ಒಂದು ವಿಶೇಷ ಕಮ್ಮಟವನ್ನು 18ನೇ ನವಂಬರ್ 2018 ರಂದು ಬೆಳಿಗ್ಗೆ 10:30 ರಿಂದ 12:30 ರವರೆಗೆ ಏರ್ಪಡಿಸಲಾಗಿದೆ. ಚಟುವಟಿಕೆಗಳ ಮೂಲಕ ವಿಜ್ಞಾನದ ಸಂಗತಿಗಳನ್ನು ಚರ್ಚಿಸುವುದೇ ಈ ಕಮ್ಮಟದ ಮೂಲ ಉದ್ದೇಶ.


i) 'ದೂರದರ್ಶಕ ತಯಾರಿಸುವ ಕಮ್ಮಟ'

ಜವಾಹರ್ ಲಾಲ್ ನೆಹರು ತಾರಾಲಯವು ಶಾಲೆಗಳು, ವಿಜ್ಞಾನ ಕೇಂದ್ರಗಳು ಮತ್ತು ಸಾರ್ವಜನಿಕರಿಗಾಗಿ ಮೂರೂವರೆ ದಿನಗಳ ದೂರದರ್ಶಕಗಳನ್ನು ತಯಾರಿಸುವ ಕಾರ್ಯಾಗಾರವನ್ನು 2018ರ ನವಂಬರ್ 14ರಿಂದ 17ರವರೆಗೆ ಆಯೋಜಿಸಿದೆ. ಈ ಕಾರ್ಯಾಗಾರದಲ್ಲಿ ಭಾಗವಹಿಸುವವರು 150 ಮಿ.ಮಿ., f8 ನ್ಯೂಟೋನಿಯನ್ ದೂರದರ್ಶಕವನ್ನು ತಯಾರಿಸಿ ಕೊಂಡೊಯ್ಯಬಹುದಾಗಿದೆ. ಖಗೋಳ ಶಾಸ್ತ್ರ ಮತ್ತು ನ್ಯೂಟೋನಿಯನ್ ದೂರದರ್ಶಕಗಳ ಕುರಿತಾದ ಉಪನ್ಯಾಸಗಳು ಮತ್ತು ಚರ್ಚೆ ಈ ಕಾರ್ಯಾಗಾರದ ಭಾಗವಾಗಿರುತ್ತದೆ. ಶುಲ್ಕ ರೂ.20000/- ಹಾಗೂ ನೋಂದಣಿ ಶುಲ್ಕ ತಲಾ ರೂ.1500/-.


ii) ತಿಂಗಳ ಸಂಭ್ರಮ – 30.10.2018

ಜವಾಹರ್‍ಲಾಲ್ ನೆಹರು ತಾರಾಲಯವು ಶಾಲಾ ಶಿಕ್ಷಕರಿಗಾಗಿ “ತಿಂಗಳ ಸಂಭ್ರಮ” ಎಂಬ ಹೊಸ ಕಾರ್ಯಕ್ರಮದಡಿಯಲ್ಲಿ ಈ ತಿಂಗಳ ಅಕ್ಟೋಬರ್ 30ರಂದು ವಿಜ್ಞಾನಿ ಹೋಮಿ ಜಹಂಗೀರ್ ಬಾಬಾ ರವರ ಜನ್ಮದಿನವನ್ನು ಆಚರಿಸುತ್ತಿದ್ದೇವೆ. ಶಿಕ್ಷಕರಿಗಾಗಿ ಏರ್ಪಡಿಸಿರುವ ಈ ಕಾರ್ಯಕ್ರಮದಲ್ಲಿ ಭಾರತದ ಹೆಸರಾಂತ ವಿಜ್ಞಾನಿಯಾದ ಹೋಮಿ ಜಹಂಗೀರ್ ಬಾಬಾ ಅವರ ಬದುಕು ಮತ್ತು ಸಾಧನೆಗಳ ಬಗ್ಗೆ ಚರ್ಚಿಸುವುದು ಇದರ ಮೂಲ ಉದ್ದೇಶವಾಗಿದೆ.


'ವಿದ್ಯುಚ್ಛಕ್ತಿ'

ಪ್ರತಿ ತಿಂಗಳ ಎರಡನೇ ಭಾನುವಾರದಂದು ಪ್ರೌಢಶಾಲೆ ಮತ್ತು ಪದವಿ ಪೂರ್ವ ವಿದ್ಯಾರ್ಥಿಗಳಿಗಾಗಿ ನಡೆಯುವ ವಿಜ್ಞಾನ ಕೂಟದಲ್ಲಿ 'ವಿದ್ಯುಚ್ಛಕ್ತಿ' ವಿಷಯದ ಕುರಿತು ಚರ್ಚೆ ನಡೆಸಲಾಗುತ್ತಿದೆ. 14ನೇ ಅಕ್ಟೋಬರ್ 2018 ರಂದು ಮಧ್ಯಾಹ್ನ 2 ರಿಂದ 3:30 ರವರೆಗೆ ನಡೆಯುತ್ತದೆ. ಪ್ರವೇಶ ಉಚಿತ.


ವಿಜ್ಞಾನ ಕಾರ್ಯಾಗಾರ

6 ಮತ್ತು 7ನೇ ತರಗತಿಗಳಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳಿಗಾಗಿ ಮೂರು ದಿನಗಳ ವಿಶೇಷ ಕಾರ್ಯಾಗಾರವನ್ನು 10 ರಿಂದ 12 ನೇ ಅಕ್ಟೋಬರ್ 2018 ರವರೆಗೆ ಆಯೋಜಿಸಲಾಗಿದೆ.


ಖಗೋಳ ಶಾಸ್ತ್ರ ಕಾರ್ಯಾಗಾರ

ಅನಿವಾರ್ಯ ಕಾರಣಗಳಿಂದಾಗಿ 'ಖಗೋಳ ಶಾಸ್ತ್ರ ಕಾರ್ಯಾಗಾರ'ವು ಅಕ್ಟೋಬರ್ 6, 2018 ರ ಬದಲಾಗಿ ಅಕ್ಟೋಬರ್ 13, 2018 ರಂದು ಆರಂಭಗೊಂಡು ನವಂಬರ್ 11, 2018 ಕ್ಕೆ ಮುಕ್ತಾಯವಾಗಲಿದೆ.


'ಬಾಹ್ಯಾಕಾಶ ವಿಜ್ಞಾನ'

ಜವಾಹರ್ ಲಾಲ್ ನೆಹರು ತಾರಾಲಯವು ಅಕ್ಟೋಬರ್ 4, 2018 ರಂದು ಪ್ರೌಢಶಾಲಾ ಶಿಕ್ಷಕರಿಗಾಗಿ ಒಂದು ದಿನದ ಕಾರ್ಯಾಗಾರವನ್ನು ಆಯೋಜಿಸಿದೆ. ಇಸ್ರೋದ ಪ್ರೊ. ಪಿ. ಜೆ. ಭಟ್ ಹಾಗೂ ನಿಯಾಸ್ ನ ಪ್ರೊ. ಎಮ್. ಬಿ. ರಜನಿ ಹಾಗೂ ಪ್ರೊ. ಅಸ್ಮಿತ ಮೊಹಾಂತಿ ರವರಿಂದ ಉಪನ್ಯಾಸಗಳನ್ನು ಏರ್ಪಡಿಸಲಾಗಿದೆ. ಶುಲ್ಕ ತಲಾ ರೂ.250/-.

ಈ ಉಪನ್ಯಾಸಗಳ ನಂತರ ಧಾರವಾಡದ ಕೃಷಿ ವಿಶ್ವವಿದ್ಯಾಲಯದ ಸಹಾಯಕ ಪ್ರಾಚಾರ್ಯರಾದ ಡಾ|| ರವಿಕುಮಾರ್ ಹೊಸಮನಿ ರವರಿಂದ “ಬಾಹ್ಯಾಕಾಶ ಡ್ರೊಸೋಫಿಲಾ : ಗಗನಯಾನಿಗಳ ಆರೋಗ್ಯದ ಕನ್ನಡಿ” ವಿಷಯದ ಕುರಿತು ಸಾರ್ವಜನಿಕರಿಗಾಗಿ ವಿಶೇಷ ಉಪನ್ಯಾಸವನ್ನು ಸಂಜೆ 4 ಘಂಟೆಗೆ ಆಯೋಜಿಸಲಾಗಿದೆ. ಪ್ರವೇಶ ಉಚಿತ.


ಜವಾಹರ್‍ಲಾಲ್ ನೆಹರು ತಾರಾಲಯವು ಶಾಲಾ ಶಿಕ್ಷಕರಿಗಾಗಿ “ತಿಂಗಳ ಸಂಭ್ರಮ” ಎಂಬ ಹೊಸ ಕಾರ್ಯಕ್ರಮದಡಿಯಲ್ಲಿ ಈ ತಿಂಗಳ (ಸೆಪ್ಟೆಂಬರ್) 29ರಂದು ವಿಜ್ಞಾನಿ ಎನ್ರಿಕೊ ¥sóÀರ್ಮಿರವರ ಜನ್ಮದಿನವನ್ನು ಆಚರಿಸುತ್ತಿದ್ದೇವೆ. ಬೈಜಿಕ ಭೌತವಿಜ್ಞಾನದÀಲ್ಲಿ ಖ್ಯಾತ ವಿಜÐನಿಯಾದ ಎನ್ರಿಕೊ ಫರ್ಮಿರವರ ಬದುಕು ಮತ್ತು ಕೊಡುಗೆಗಳ ಬಗ್ಗೆ ಚರ್ಚಿಸುವುದು ಕಾರ್ಯಕ್ರಮದ ಉದ್ದೇಶವಾಗಿದೆ.


ಜವಾಹರ್ ಲಾಲ್ ನೆಹರು ತಾರಾಲಯವು ಸೆಪ್ಟೆಂಬರ್ 19, 2018 ರಂದು ಬೆಳಿಗ್ಗೆ 10:30 ರಿಂದ ಮಧ್ಯಾಹ್ನ 3:30 ರವರೆಗೆ ಪ್ರೌಢಶಾಲಾ ಶಿಕ್ಷಕರಿಗಾಗಿ '‘ವಿಕಸನ ಮತ್ತು ತಳಿಶಾಸ್ತ್ರ’' ಎಂಬ ವಿಷಯದ ಕುರಿತು ಕಾರ್ಯಾಗಾರವನ್ನು ಹಮ್ಮಿಕೊಂಡಿದೆ. ವಿಷಯದ ಬೋಧನೆಗೆ ಪೂರಕವಾಗುವಂತಹ ಚಟುವಟಿಕೆಗಳನ್ನು ಚರ್ಚಿಸುವುದು ಈ ಕಾರ್ಯಾಗಾರದ ಧ್ಯೇಯವಾಗಿದೆ. ಶುಲ್ಕ ತಲಾ ರೂ.250/-.


ಶಾಲಾ ಶಿಕ್ಷಕರು, ವಿಜ್ಞಾನ ಸಂವಹಕರು ಮತ್ತು ಖಗೋಳಾಸಕ್ತರಿಗಾಗಿ ಜವಾಹರ್ ಲಾಲ್ ನೆಹರು ತಾರಾಲಯವು ಒಂದು ಕಮ್ಮಟವನ್ನು ಏರ್ಪಡಿಸಿದೆ. ಭಾಷಾ ಮಾಧ್ಯಮ ಕನ್ನಡ. ಕಮ್ಮಟದ ಮೊದಲ ಭಾಗ 26 ರಿಂದ 28 ರವರೆಗೆ ನಡೆಯಲಿದೆ. ಎರಡನೆಯ ಭಾಗ ನವೆಂಬರ್ ನಲ್ಲಿ ನಡೆಯಲಿದೆ. ಆಸಕ್ತರು ಎರಡೂ ಭಾಗಗಳಲ್ಲಿ ಕಡ್ಡಾಯವಾಗಿ ಹಾಜರಿರಬೇಕು. ಬೆಳಿಗ್ಗೆ 10:30 ರಿಂದ ಸಂಜೆ 7:30 ರವರೆಗೆ. ಪ್ರವೇಶ ಶುಲ್ಕ ತಲಾ 1500/- (ಕಮ್ಮಟದ ಎರಡೂ ಭಾಗಗಳಿಗೆ).


'ವಿದ್ಯುತ್ಕಾಂತೀಯ ತರಂಗಗಳು' ವಿಷಯದ ಕುರಿತು ವಿಜ್ಞಾನ ಕೂಟ

ಪ್ರತಿ ತಿಂಗಳ ಎರಡನೇ ಭಾನುವಾರದಂದು ಪ್ರೌಢಶಾಲೆ ಮತ್ತು ಪದವಿ ಪೂರ್ವ ವಿದ್ಯಾರ್ಥಿಗಳಿಗಾಗಿ ವಿಜ್ಞಾನ ಕೂಟವನ್ನು ಹಮ್ಮಿಕೊಳ್ಳಲಾಗುತ್ತಿದೆ. ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವವನ್ನು ಬೆಳೆಸುವ ಉದ್ದೇಶವಿರುವ ಈ ಕಾರ್ಯಕ್ರಮದಲ್ಲಿ ಹಲವಾರು ವೈಜ್ಞಾನಿಕ ವಿದ್ಯಮಾನಗಳ ಬಗ್ಗೆ ಚರ್ಚಿಸಲಾಗುವುದು. ಆಸಕ್ತಿಯಿರುವ ಸಾರ್ವಜನಿಕರೂ ಭಾಗವಹಿಸಬಹುದಾಗಿದೆ. ವಿದ್ಯುತ್ಕಾಂತೀಯ ರೋಹಿತದ ಅನ್ವೇಷಣೆ, ಉತ್ಪಾದಿಸುವ ವಿಧಾನ, ವರ್ಗೀಕರಣ ಮತ್ತು ಉಪಯೋಗಗಳ ಬಗ್ಗೆ ಚರ್ಚಿಸುವುದು ಈ ಬಾರಿಯ ವಿಜ್ಞಾನ ಕೂಟದ ಧ್ಯೇಯವಾಗಿದೆ.


ಜವಾಹರ್ ಲಾಲ್ ನೆಹರು ತಾರಾಲಯವು ಶಿಕ್ಷಕರ ದಿನಾಚರಣೆಯ ಪ್ರಯುಕ್ತ ನಿರೂಪಣೆಗಳಿಂದ ಕೂಡಿದ ಉಪನ್ಯಾಸವನ್ನು 8ನೇ ಸೆಪ್ಟೆಂಬರ್ 2018 ರಂದು ಬೆಳಿಗ್ಗೆ 10:30 ರಿಂದ 1 ಗಂಟೆಯ ವರೆಗೆ ಏರ್ಪಡಿಸಲಾಗಿದೆ. ಪ್ರವೇಶ ಉಚಿತ.


'ಅಂತರ್ಜಾಲ' ವಿಷಯದ ಕುರಿತು ವಿಜ್ಞಾನ ಕೂಟ

ಪ್ರತಿ ತಿಂಗಳ ಎರಡನೇ ಭಾನುವಾರದಂದು ಪ್ರೌಢಶಾಲೆ ಮತ್ತು ಪದವಿ ಪೂರ್ವ ವಿದ್ಯಾರ್ಥಿಗಳಿಗಾಗಿ ವಿಜ್ಞಾನ ಕೂಟವನ್ನು ಹಮ್ಮಿಕೊಳ್ಳಲಾಗುತ್ತಿದೆ. ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವವನ್ನು ಬೆಳೆಸುವ ಉದ್ದೇಶವಿರುವ ಈ ಕಾರ್ಯಕ್ರಮದಲ್ಲಿ ಹಲವಾರು ವೈಜ್ಞಾನಿಕ ವಿದ್ಯಮಾನಗಳ ಬಗ್ಗೆ ಚರ್ಚಿಸಲಾಗುವುದು. ಆಸಕ್ತಿಯಿರುವ ಸಾರ್ವಜನಿಕರೂ ಭಾಗವಹಿಸಬಹುದಾಗಿದೆ. ಅಂತರ್ಜಾಲದ ವಿಕಸನ, ಜಾಲಗಳ ಪಾತ್ರ, ನಿಸ್ತಂತು ಜಾಲಗಳು, ಭದ್ರತಾ ವಿಚಾರಗಳು ಇತ್ಯಾದಿಗಳ ಬಗ್ಗೆ ಚರ್ಚಿಸುವುದು ಈ ಬಾರಿಯ ವಿಜ್ಞಾನ ಕೂಟದ ಧ್ಯೇಯವಾಗಿದೆ.


'ವಿದ್ಯುತ್ಕಾಂತೀಯತೆ'

ಜವಾಹರ್ ಲಾಲ್ ನೆಹರು ತಾರಾಲಯವು ಆಗಸ್ಟ್ 9, 2018 ರಂದು ಬೆಳಿಗ್ಗೆ 10:30 ರಿಂದ ಮಧ್ಯಾಹ್ನ 3:30 ರವರೆಗೆ ಪ್ರೌಢಶಾಲಾ ಶಿಕ್ಷಕರಿಗಾಗಿ 'ವಿದ್ಯುತ್ಕಾಂತೀಯತೆ' ಎಂಬ ವಿಷಯದ ಕುರಿತು ಕಾರ್ಯಾಗಾರವನ್ನು ಹಮ್ಮಿಕೊಂಡಿದೆ. ವಿಷಯದ ಬೋಧನೆಗೆ ಪೂರಕವಾಗುವಂತಹ ಚಟುವಟಿಕೆಗಳನ್ನು ಚರ್ಚಿಸುವುದು ಈ ಕಾರ್ಯಾಗಾರದ ಧ್ಯೇಯವಾಗಿದೆ. ಶುಲ್ಕ ತಲಾ ರೂ.250/-.


'ತಿಂಗಳ ಸಂಭ್ರಮ'

ಈ ಕಾರ್ಯಕ್ರಮದ ಅಡಿಯಲ್ಲಿ 11ನೇ ಆಗಸ್ಟ್ 2018ರಂದು ವಿಜ್ಞಾನಿ ವೇಣು ಬಾಪು ರವರ ಜನ್ಮದಿನವನ್ನು ಆಚರಿಸುತ್ತಿದೆ. ವೇಣು ಬಾಪು ರವರ ಬದುಕು ಮತ್ತು ಖಗೋಳ ಶಾಸ್ತ್ರಕ್ಕೆ ನೀಡಿದ ಕೊಡುಗೆಗಳ ಬಗ್ಗೆ ಚರ್ಚಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ. ಪ್ರವೇಶ ಉಚಿತ.


'ಸಂಖ್ಯಾಶಾಸ್ತ್ರ'ದ ಕುರಿತು ಕಮ್ಮಟ

ಜವಾಹರ್ ಲಾಲ್ ನೆಹರು ತಾರಾಲಯವು ಆಗಸ್ಟ್ 2, 2018 ರಂದು ಪ್ರೌಢಶಾಲಾ ಗಣಿತ ಶಿಕ್ಷಕರಿಗಾಗಿ ‘ಸಂಖ್ಯಾಶಾಸ್ತ್ರ’ ಎಂಬ ವಿಷಯದ ಕುರಿತು ಕಾರ್ಯಾಗಾರವನ್ನು ಹಮ್ಮಿಕೊಂಡಿದೆ. ವಿಷಯದ ಬೋಧನೆಗೆ ಪೂರಕವಾಗುವಂತಹ ಚಟುವಟಿಕೆಗಳನ್ನು ಚರ್ಚಿಸುವುದು ಈ ಕಾರ್ಯಾಗಾರದ ಧ್ಯೇಯವಾಗಿದೆ.


ಜವಾಹರ್‍ಲಾಲ್ ನೆಹರು ತಾರಾಲಯವು ದಿನಾಂಕ ಜುಲೈ 19, 2018ರಂದು ಪ್ರೌಢಶಾಲಾ ಶಿಕ್ಷಕರಿಗಾಗಿ “ಲೋಹ ಮತ್ತು ಅಲೋಹಗಳು” ಎಂಬ ವಿಷಯದ ಕುರಿತು ಒಂದು ದಿನದ ಕಮ್ಮಟವನ್ನು ಆಯೋಜಿಸಿದೆ. ಹತ್ತನೆಯ ತರಗತಿಯ ಪಠ್ಯದಲ್ಲಿರುವ ಈ ವಿಷಯದ ಬೋಧನೆಗೆ ಪೂರಕವಾಗುವಂತಹ ಚರ್ಚೆ, ಚಟುವಟಿಕೆಗಳು ಮತ್ತು ಪ್ರಯೋಗಗಳ ನಿದರ್ಶನಗಳನ್ನು ಈ ಕಾರ್ಯಾಗಾರವು ಒಳಗೊಂಡಿರುತ್ತದೆ.


ವಿಜ್ಞಾನ ಕೂಟ – ಶಾಖ ಮತ್ತು ಪರಿಸರ

8ನೇ ಜುಲೈ 2018 ರಂದು ಮಧ್ಯಾಹ್ನ 3 ಗಂಟೆಗೆ ಈ ತಿಂಗಳ ವಿಜ್ಞಾನ ಕೂಟವನ್ನು ಪ್ರೌಢಶಾಲೆ ಮತ್ತು ಮೇಲ್ಪಟ್ಟ ವಿದ್ಯಾರ್ಥಿಗಳಿಗೆ ಹಮ್ಮಿಕೊಳ್ಳಲಾಗಿದೆ. ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವವನ್ನು ಬೆಳೆಸುವ ಉದ್ದೇಶವಿರುವ ಈ ಕಾರ್ಯಕ್ರಮದಲ್ಲಿ ಹಲವಾರು ವೈಜ್ಞಾನಿಕ ವಿದ್ಯಮಾನಗಳ ಬಗ್ಗೆ ಚರ್ಚಿಸಲಾಗುವುದು. ಆಸಕ್ತಿಯಿರುವ ಸಾರ್ವಜನಿಕರೂ ಭಾಗವಹಿಸಬಹುದಾಗಿದೆ. ನಮ್ಮ ಸುತ್ತಲಿನ ಪರಿಸರದಲ್ಲಿ ಕಂಡುಬರುವ ವಿದ್ಯಮಾನಗಳಾದ ಶಾಖದ ಹರಿವು, ಮಳೆ ಮಾರುತಗಳು, ಕಡಲಿನ ಒಳ ಹರಿವು, ಹಸಿರು ಮನೆಯ ಪರಿಣಾಮ ಇತ್ಯಾದಿಗಳನ್ನು ಭೌತಶಾಸ್ತ್ರದ ಹಿನ್ನೆಲೆಯಲ್ಲಿ ಚರ್ಚಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ.


'ತಿಂಗಳ ಸಂಭ್ರಮ'

ಜವಾಹರ್‍ಲಾಲ್ ನೆಹರು ತಾರಾಲಯವು ಶಾಲಾ ಶಿಕ್ಷಕರಿಗಾಗಿ “ತಿಂಗಳ ಸಂಭ್ರಮ” ಎಂಬ ಕಾರ್ಯಕ್ರಮದಡಿಯಲ್ಲಿ, ಆಯ ತಿಂಗಳಿನಲ್ಲಿ ಹುಟ್ಟಿದ ವಿಜ್ಞಾನಿಗಳ ಜನ್ಮದಿನಾಚರಣೆ ಇಲ್ಲವೇ ಜರುಗಿದ ವೈಜ್ಞಾನಿಕ ವಿಶೇಷತೆಯುಳ್ಳ ಘಟನೆಗಳನ್ನು ಆಚರಿಸುತ್ತಿದೆ. ಈ ಕಾರ್ಯಕ್ರಮದ ಅಡಿಯಲ್ಲಿ 4ನೇ ಜುಲೈ 2018ರಂದು ವಿಜ್ಞಾನಿ ಹಾನ್ಸ್ ಬೆಥಾ ರವರ ಜನ್ಮದಿನವನ್ನು ಆಚರಿಸುತ್ತಿದೆ. ಹಾನ್ಸ್ ಬೆಥಾ ರವರ ಬದುಕು ಮತ್ತು ವಿಜ್ಞಾನಕ್ಕೆ ನೀಡಿದ ಕೊಡುಗೆಗಳ ಬಗ್ಗೆ ಚರ್ಚಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ. ಪ್ರವೇಶ ಉಚಿತ.


'ತಿಂಗಳ ಸಂಭ್ರಮ'

ಜವಾಹರ್‍ಲಾಲ್ ನೆಹರು ತಾರಾಲಯವು ಶಾಲಾ ಶಿಕ್ಷಕರಿಗಾಗಿ “ತಿಂಗಳ ಸಂಭ್ರಮ” ಎಂಬ ಕಾರ್ಯಕ್ರಮದಡಿಯಲ್ಲಿ, ಆಯ ತಿಂಗಳಿನಲ್ಲಿ ಹುಟ್ಟಿದ ವಿಜ್ಞಾನಿಗಳ ಜನ್ಮದಿನಾಚರಣೆ ಇಲ್ಲವೇ ಜರುಗಿದ ವೈಜ್ಞಾನಿಕ ವಿಶೇಷತೆಯುಳ್ಳ ಘಟನೆಗಳನ್ನು ಆಚರಿಸುತ್ತಿದೆ. ಈ ಕಾರ್ಯಕ್ರಮದ ಅಡಿಯಲ್ಲಿ 26ನೇ ಜೂನ್ 2018ರಂದು ವಿಜ್ಞಾನಿ ಚಾರ್ಲ್ಸ್ ಮೆಸ್ಸಿಯರ್ ರವರ ಜನ್ಮದಿನವನ್ನು ಆಚರಿಸುತ್ತಿದೆ. ಚಾರ್ಲ್ಸ್ ಮೆಸ್ಸಿಯರ್ ರವರು ಬದುಕು ಮತ್ತು ಖಗೋಳ ವಿಜ್ಞಾನಕ್ಕೆ ನೀಡಿದ ಕೊಡುಗೆಗಳ ಬಗ್ಗೆ ಚರ್ಚಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ. ಪ್ರವೇಶ ಉಚಿತ.


'ಶಿಕ್ಷಕರ ಸಭೆ'

ವರ್ಷವಿಡೀ ನಡೆಯುವ ಕಮ್ಮಟಗಳ ಕುರಿತು ಚರ್ಚಿಸಲು 'ಶಿಕ್ಷಕರ ಸಭೆ'ಯನ್ನು 23ನೇ ಜೂನ್ 2018 ರಂದು ಬೆ. 11 ರಿಂದ 12 ರವರೆಗೆ ನಡೆಸಲಾಗುವುದು. ಪ್ರವೇಶ ಉಚಿತ.


'ವಿಜ್ಞಾನ ಪ್ರಯೋಗಗಳು' – 13ನೇ ಮೇ 2018

10ನೇ ಜೂನ್ 2018 ರಂದು ಮಧ್ಯಾಹ್ನ 3 ಗಂಟೆಗೆ ಈ ತಿಂಗಳ ವಿಜ್ಞಾನ ಕೂಟವನ್ನು ಪ್ರೌಢಶಾಲೆ ಮತ್ತು ಮೇಲ್ಪಟ್ಟ ವಿದ್ಯಾರ್ಥಿಗಳಿಗೆ ಹಮ್ಮಿಕೊಳ್ಳಲಾಗಿದೆ. ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವವನ್ನು ಬೆಳೆಸುವ ಉದ್ದೇಶವಿರುವ ಈ ಕಾರ್ಯಕ್ರಮದಲ್ಲಿ ಹಲವಾರು ವೈಜ್ಞಾನಿಕ ವಿದ್ಯಮಾನಗಳ ಬಗ್ಗೆ ಚರ್ಚಿಸಲಾಗುವುದು. ಆಸಕ್ತಿಯಿರುವ ಸಾರ್ವಜನಿಕರೂ ಭಾಗವಹಿಸಬಹುದಾಗಿದೆ. ನೈಸರ್ಗಿಕ/ಕೃತಕ ಉಪಗ್ರಹಗಳು ಮತ್ತು ಮಾನವಕುಲದ ಮೇಲೆ ಅವುಗಳ ಪಾತ್ರ ಮತ್ತು ಪ್ರಭಾವದ ಕುರಿತು ಚರ್ಚೆಯನ್ನು ನಡೆಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ. ಪ್ರವೇಶ ಉಚಿತ.


ಪ್ರತಿ ತಿಂಗಳ ಎರಡನೇ ಭಾನುವಾರದಂದು ಮಧ್ಯಾಹ್ನ 3 ಗಂಟೆಗೆ ಪ್ರೌಢಶಾಲೆ ಮತ್ತು ಪದವಿ ಪೂರ್ವ ವಿದ್ಯಾರ್ಥಿಗಳಿಗಾಗಿ ವಿಜ್ಞಾನ ಕೂಟವನ್ನು ಹಮ್ಮಿಕೊಳ್ಳಲಾಗುತ್ತಿದೆ. ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವವನ್ನು ಬೆಳೆಸುವ ಉದ್ದೇಶವಿರುವ ಈ ಕಾರ್ಯಕ್ರಮದಲ್ಲಿ ಹಲವಾರು ವೈಜ್ಞಾನಿಕ ವಿದ್ಯಮಾನಗಳ ಬಗ್ಗೆ ಚರ್ಚಿಸಲಾಗುವುದು.


ಜವಾಹರ್ ಲಾಲ್ ನೆಹರು ತಾರಾಲಯವು ವಿದ್ಯಾರ್ಥಿಗಳಿಗಾಗಿ ‘ಶೂನ್ಯ ನೆರಳಿನ ದಿನ’ ವಿಷಯದ ಬಗ್ಗೆ ಅರ್ಧ ದಿನದ ಕಮ್ಮಟವನ್ನು ಏರ್ಪಡಿಸುತ್ತಿದೆ. ‘ಶೂನ್ಯ ನೆರಳಿನ ದಿನ’ಕ್ಕೆ ಸಂಬಂಧಪಟ್ಟ ಭೂಮಿಯ ಆವರ್ತನೆ ಮತ್ತು ಪರಿಭ್ರಮಣೆ, ಅಕ್ಷಾಂಶಗಳಾದ ಸಮಭಾಜಕ ವೃತ್ತ, ಕರ್ಕಾಟಕ ವೃತ್ತ ಮತ್ತು ಮಕರ ಸಂಕ್ರಾಂತಿ ವೃತ್ತ ಇವುಗಳ ಪ್ರಾಮುಖ್ಯತೆ, ಸ್ಥಳೀಯ ಸಮಯದ ಅಳತೆ ಮುಂತಾದವುಗಳ ವಿವರಣೆಯನ್ನು ಈ ಕಮ್ಮಟವು ಒಳಗೊಂಡಿರುತ್ತದೆ. ಶೂನ್ಯ ನೆರಳಿನ ದಿನವನ್ನು ವಿವಿಧ ಪ್ರದರ್ಶಿಕೆಗಳ ಮೂಲಕ ಗಮನಿಸುವುದು ಮತ್ತು ನೆರಳುಗಳ ಮೂಲಕ ಭೂಮಿಯ ಸುತ್ತಳತೆಯನ್ನು ಲೆಕ್ಕಾಚಾರ ಮಾಡುವುದೂ ಸಹ ಸೇರಿರುತ್ತದೆ.


ಏಪ್ರಿಲ್ ತಿಂಗಳ 24ನೇ ತಾರೀಖಿನಂದು ಘಟಿಸುವ ‘ಶೂನ್ಯ ನೆರಳಿನ ದಿನ’ದ ಪ್ರಯುಕ್ತ ಜವಾಹರ್ ಲಾಲ್ ನೆಹರು ತಾರಾಲಯವು ಶಿಕ್ಷಕರು ಮತ್ತು ಬೇಸಿಗೆ ಶಿಬಿರಗಳನ್ನು ಆಯೋಜಿಸುವವರಿಗಾಗಿ ‘ಶೂನ್ಯ ನೆರಳಿನ ದಿನ’ ವಿಷಯದ ಬಗ್ಗೆ ಅರ್ಧ ದಿನದ ಕಮ್ಮಟವನ್ನು 17ನೇ ಏಪ್ರಿಲ್ 2018ರಂದು ಏರ್ಪಡಿಸುತ್ತಿದೆ.


'ಖಗೋಳೀಯ ಛಾಯಾಚಿತ್ರಗಳ ಸಂಸ್ಕರಣೆ'

ಜವಾಹರ್ ಲಾಲ್ ನೆಹರು ತಾರಾಲಯವು ಸಾರ್ವಜನಿಕರಿಗಾಗಿ ಖಗೋಳೀಯ ಛಾಯಾಚಿತ್ರಗಳ ಸಂಸ್ಕರಣೆಯ ಬಗ್ಗೆ ಒಂದು ದಿನದ ಕಾರ್ಯಾಗಾರವನ್ನು 20ನೇ ಮೇ 2018ರಂದು ಆಯೋಜಿಸಿದೆ. ಖ್ಯಾತ ಖಗೋಳ ಛಾಯಾಚಿತ್ರಕಾರರಾದ ಶ್ರೀ ಅಜಯ್ ತಲ್ವಾರ್ ರವರ ಖಗೋಳೀಯ ಛಾಯಾಚಿತ್ರಗಳ ಸಂಗ್ರಹದಿಂದ ಆಯ್ದ ಕೆಲವು ಛಾಯಾಚಿತ್ರಗಳನ್ನು ಈ ಕಾರ್ಯಾಗಾರದಲ್ಲಿ ಬಳಸಿಕೊಳ್ಳಲಾಗುತ್ತದೆ. ಕಾರ್ಯಾಗಾರದಲ್ಲಿ ಪಾಲ್ಗೊಳ್ಳುವವರು ಇದಾಗಲೇ ಇಂತಹ ಪ್ರಯತ್ನದಲ್ಲಿ ಕಂಡಿರುವ ಯಶಸ್ಸು ಅಥವಾ ವೈಫಲ್ಯದ ಬಗೆಗೂ ಇಲ್ಲಿ ಚರ್ಚಿಸಬಹುದು. ಶ್ರೀ ಅಜಯ್ ತಲ್ವಾರ್ ರವರು ನಡೆಸಿಕೊಡುವ ಈ ಕಾರ್ಯಾಗಾರವು ನೈಜ ಛಾಯಾಚಿತ್ರಗಳು ಮತ್ತು ದತ್ತಾಂಶಗಳ ಸಂಸ್ಕರಣೆಯನ್ನು ಒಳಗೊಂಡಿರುತ್ತದೆ.


‘ನಿಸ್ತಂತು ಸಂವಹನ’ - ಕುರಿತು ವಿಜ್ಞಾನ ಕೂಟ

ಪ್ರತಿ ತಿಂಗಳ ಎರಡನೇ ಭಾನುವಾರದಂದು ಮಧ್ಯಾಹ್ನ 3 ಗಂಟೆಗೆ ಪ್ರೌಢಶಾಲೆ ಮತ್ತು ಪದವಿ ಪೂರ್ವ ವಿದ್ಯಾರ್ಥಿಗಳಿಗಾಗಿ ವಿಜ್ಞಾನ ಕೂಟವನ್ನು ಹಮ್ಮಿಕೊಳ್ಳಲಾಗುತ್ತಿದೆ. ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವವನ್ನು ಬೆಳೆಸುವ ಉದ್ದೇಶವಿರುವ ಈ ಕಾರ್ಯಕ್ರಮದಲ್ಲಿ ಹಲವಾರು ವೈಜ್ಞಾನಿಕ ವಿದ್ಯಮಾನಗಳ ಬಗ್ಗೆ ಚರ್ಚಿಸಲಾಗುವುದು. ನಿಸ್ತಂತು ಸಂವಹನ ಕ್ಷೇತ್ರದಲ್ಲಿನ ಆರಂಭದ ದಿನಗಳಿಂದ ಇಂದಿನವರೆಗಿನ ಅಭಿವೃದ್ಧಿಯ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವುದೇ ಈ ಕಾರ್ಯಕ್ರಮದ ಉದ್ದೇಶವಾಗಿದೆ.


‘ದೂರದರ್ಶಕ ತಯಾರಿಸುವ ಕಮ್ಮಟ’

ಜವಾಹರ್ ಲಾಲ್ ನೆಹರು ತಾರಾಲಯವು ಸಾರ್ವಜನಿಕರಿಗಾಗಿ ದೂರದರ್ಶಕಗಳನ್ನು ತಯಾರಿಸುವ ಐದು ದಿನಗಳ ಕಾರ್ಯಾಗಾರವನ್ನು 2018ರ ಮೇ 15ರಿಂದ 19ರವರೆಗೆ ಆಯೋಜಿಸಿದೆ. ಈ ಕಾರ್ಯಾಗಾರದಲ್ಲಿ ಭಾಗವಹಿಸುವವರು 150 ಮಿ.ಮಿ. ನ್ಯೂಟೋನಿಯನ್ ದೂರದರ್ಶಕವನ್ನು ಮಾಡಬಹುದಾಗಿದೆ. ಖಗೋಳ ಶಾಸ್ತ್ರ ಮತ್ತು ನ್ಯೂಟೋನಿಯನ್ ದೂರದರ್ಶಕಗಳ ಕುರಿತಾದ ಉಪನ್ಯಾಸಗಳು ಮತ್ತು ಚರ್ಚೆ ಈ ಕಾರ್ಯಾಗಾರದ ಭಾಗವಾಗಿರುತ್ತದೆ.


ವಿಜ್ಞಾನ ಕೂಟ – 11.03.2018ರಂದು

ಪ್ರತಿ ತಿಂಗಳ ಎರಡನೇ ಭಾನುವಾರದಂದು ಪ್ರೌಢಶಾಲೆ ಮತ್ತು ಪದವಿ ಪೂರ್ವ ವಿದ್ಯಾರ್ಥಿಗಳಿಗಾಗಿ ಮಧ್ಯಾಹ್ನ 3:00 ಗಂಟೆಗೆ ವಿಜ್ಞಾನ ಕೂಟವನ್ನು ಹಮ್ಮಿಕೊಳ್ಳಲಾಗುತ್ತಿದೆ. ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವವನ್ನು ಬೆಳೆಸುವ ಉದ್ದೇಶವಿರುವ ಈ ಕಾರ್ಯಕ್ರಮದಲ್ಲಿ ಹಲವಾರು ವೈಜ್ಞಾನಿಕ ವಿದ್ಯಮಾನಗಳ ಬಗ್ಗೆ ಚರ್ಚಿಸಲಾಗುವುದು. ವಿಜ್ಞಾನದ ಕೆಲವು ಪ್ರಯೋಗಗಳ ಪ್ರದರ್ಶನ ಮತ್ತು ಅವುಗಳ ಹಿಂದಿನ ವೈಜ್ಞಾನಿಕ ವಿಷಯವನ್ನು ತಿಳಿಯಪಡಿಸುವುದು ಇದರ ಉದ್ದೇಶವಾಗಿದೆ. ಇ.ಎಮ್. ಡಿಡಕ್ಷನ್, ಲೈಟ್ ಪ್ರಪೋಗೇಷನ್ ಮುಂತಾದವುಗಳನ್ನು ಪ್ರಯೋಗಗಳ ಮೂಲಕ ಚರ್ಚಿಸಲಾಗುವುದು.


ಶೀಘ್ರ ಕೊಂಡಿಗಳು

 

ವೆಬ್ಸೈಟ್ ಸಂದರ್ಶಕ ಕೌಂಟರ್

ಸೋಮವಾರ ಮತ್ತು ಎರಡನೇ ಮಂಗಳವಾರದಂದು ರಜೆ