ಏಪ್ರಿಲ್ ೨೫, ಮಧ್ಯಾಹ್ನ ೧೨. ೧೭ಕ್ಕೆ ,ಸೂರ್ಯ ನಡು ನೆತ್ತಿಯ ಮೇಲಿದ್ದಾಗ, ಯಾವುದೇ ವಸ್ತುವಿನ ನೆರಳು ನೆಲಕ್ಕೆ ಬೀಳುವುದಿಲ್ಲ. ಈ ವಿದ್ಯಮಾನವನ್ನು ತಾರಾಲಯದ ಆವರಣದಲ್ಲಿ ಪ್ರದರ್ಶಿಸಲಾಗುವುದು. ಈ ಪರಿಣಾಮವನ್ನು ನೋಡಲು ಯಾವುದೇ ವಿಶೇಷ ಪರಿಕರಗಳು ಬೇಕಿಲ್ಲ. ಇದೇ ಪರಿಣಾಮವನ್ನು ಆಗಸ್ಟ್ ೧೯ ರಂದು ನೋಡಬಹುದು. ಅಂದರೆ ಶೂನ್ಯ ನೆರಳಿನ ದಿನ ವನ್ನು ಭೂಗೋಳದ ಮಧ್ಯ ರೇಖೆ ಮತ್ತು ಕರ್ಕಾಟಕ ವೃತ್ತದ ನಡುವೆ ಇರುವ ಪ್ರದೇಶಗಳಲ್ಲಿ, ವರ್ಷದಲ್ಲಿ ಎರಡು ಬಾರಿ ಕಾಣಬಹುದು.

ಜೂನ್ ೨೨ ರಂದು ಸೂರ್ಯನ ಉದಯ ಮತ್ತು ಅಸ್ತಮಾನಗಳು ಕ್ರಮವಾಗಿ ಪೂರ್ವ ಮತ್ತು ಪಶ್ಚಿಮ ಬಿಂದುಗಳಿಂದ ಸುಮಾರು 23.5 ಡಿಗ್ರಿಯಷ್ಟು ಉತ್ತರದಲ್ಲಿ ಆಗುತ್ತವೆ. ಇದಾದ ನಂತರ ಸೂರ್ಯನ ಉದಯಾಸ್ತಮಾನಗಳು ಹಾಗೂ ಆಕಾಶದಲ್ಲಿನ ತೋರಿಕೆಯ ಪಥಗಳು ದಕ್ಷಿಣಾಭಿಮುಖವಾಗಿ ಸಾಗುತ್ತವೆ. ಆದ್ದರಿಂದ, ಜೂನ್ 22 ಅನ್ನು ಬೇಸಿಗೆಯ ಅಯನಾಂಕ ಅಥವಾ ದಕ್ಷಿಣಾಯನ ಎಂದು ಕರೆಯುತ್ತಾರೆ.

ಸೂರ್ಯನು ಮತ್ತೆ ದಕ್ಷಿಣ ಪಥದಲ್ಲಿ ಹಿಂತಿರುಗುತ್ತಾನೆ. ಈ ದಿನಾಂಕಗಳು ಒಂದು ಸ್ಥಳದಿಂದ ಮತ್ತೊಂದಕ್ಕೆ ಬೇರೆಯಾಗಿರುತ್ತದೆ.

ಸಮಭಾಜಕ ವೃತ್ತದಿಂದ ಕರ್ಕಾಟಕ ಸಂಕ್ರಾಂತಿ ವೃತ್ತದ ವರೆಗಿನ ಪ್ರದೇಶಗಳಿಗೆ ಬೇರೆ ಬೇರೆ ತಾರೀಖುಗಳು ಅನ್ವಯಿಸುತ್ತದೆ. ಕರ್ನಾಟಕದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಶೂನ್ಯ ನೆರಳಿನ ತಾರೀಖನ್ನು ಪಟ್ಟಿ ಮಾಡಲಾಗಿದೆ. ಒಂದು ಸ್ಥಳದಿಂದ ಮತ್ತೊಂದಕ್ಕೆ ೧೧. ೫೫ರಿಂದ ೧೨.೨೫ರ ವರೆಗೂ ವ್ಯತ್ತ್ಯಾಸ ವಿರುತ್ತದೆ. ಗಾಜಿನ ಲೋಟವನ್ನು ಬಿಸಿಲಿನಲ್ಲಿ ಇಟ್ಟು ಶೂನ್ಯ ನೆರಳಿನ ಸಮಯವನ್ನು ನಿಖರವಾಗಿ ಕಂಡುಹಿಡಿಯಬಹುದು.